newsfirstkannada.com

ಇಬ್ಬರು ಸಾಲದು ಎಂದು ಮತ್ತೊಬ್ಬಳ ಮೇಲೆ ಕಣ್ಣು; ದೂರು ಕೊಡಲು ಬಂದವಳ ಜತೆಗೆ ಇನ್ಸ್​​ಪೆಕ್ಟರ್​​ ಲವ್​​!

Share :

07-09-2023

  ಖಾಕಿ ಮೇಲೆಯೇ ಗಂಭೀರ ಆರೋಪಗಳ ಸುರಿಮಳೆ

  ಅಬ್ಬಬ್ಬಾ! ಇನ್ಸ್‌ಪೆಕ್ಟರ್ ಕಾಮ ಪುರಾಣ ಬಿಚ್ಚಿಟ್ಟ ಪತ್ನಿ

  ಸ್ಟೋರಿ ಓದಿದ್ರೆ ಇವರು ನಿಜಕ್ಕೂ ಪೊಲೀಸ್​​ ಅನಿಸುತ್ತೆ!

ಬೆಂಗಳೂರು: ಪೊಲೀಸರು ಅಂದ್ರೆ ಕಾನೂನು ಪಾಲಕರು.. ಆರಕ್ಷಕರು. ಇವರು ಕಾನೂನು ಸುವ್ಯವಸ್ಥೆ ಕಾಪಾಡ್ತಾರೆ.. ರಕ್ಷಣೆ ಕೊಡ್ತಾರೆ ಅಂತೆಲ್ಲಾ ನಂಬಿದ್ದೀವಿ. ಆದ್ರೆ ಇಲ್ಲೊಬ್ಬ ಪೊಲೀಸ್​ ಇನ್ಸ್​​ಪೆಕ್ಟರ್​ ಇದ್ದಾರೆ. ಇವರು ಎಲ್ಲರಿಗಿಂತ ಡಿಫರೆಂಟ್.​ ಕ್ರಿಮಿನಲ್​ ಇನ್ವೆಸ್ಟಿಗೇಷನ್​ ಡಿಪಾರ್ಟ್​​ಮೆಂಟ್​ ಅಂದ್ರೆ ಸಿಐಡಿ ಇನ್ಸ್​​ಪೆಕ್ಟರ್​​. ಬಂದ ದೂರುಗಳ ತನಿಖೆ ನಡೆಸ್ತಿದ್ದ ಈ ಇನ್ಸ್​​ಪೆಕ್ಟರ್​​ ಮೇಲೇ.. ಈಗ ಬಿದ್ದಿದೆ ಕೇಸ್​..!

ಇವರೇ ನೋಡಿ.. ಸಿಐಡಿ ಇನ್ಸ್​​ಪೆಕ್ಟರ್​​ ಮಲ್ಲಿಕಾರ್ಜುನ. ಯಶವಂತಪುರ ಪೊಲೀಸ್​ ಠಾಣೆಯಲ್ಲಿ ಇವರ ಪತ್ನಿಯಿಂದ ದೂರು ದಾಖಲಾಗಿದೆ. ಒಂದಲ್ಲ ಎರಡಲ್ಲ ಸಾಲು ಸಾಲು ಆರೋಪಗಳನ್ನ ಮಾಡಿರೋ ಮಲ್ಲಿಕಾರ್ಜುನ್​ ಪತ್ನಿ ಕೊಟ್ಟಿರೋ ದೂರಿನಲ್ಲೇನಿದೆ ಅಂತ ನೋಡೋದಾದ್ರೆ!

ದೂರಿನಲ್ಲೇನಿದೆ ಗೊತ್ತಾ..?

ನನ್ನ ಗಂಡ ಬಟ್ಟೆ ಬದಲಿಸುವಂತೆ ಹುಡ್ಗೀರನ್ನ ಬದಲಿಸ್ತಿದ್ದ. ನನ್ನ ಯಾಮಾರಿಸಿ ಅನೈತಿಕ ಸಂಬಂಧ ಹೊಂದಿದ್ದಾನೆ. ಅಷ್ಟೇ ಅಲ್ಲ.. ದೂರು ಕೊಡಲು ಬಂದವಳ ಜೊತೆ ಪ್ರೀತಿ ಪ್ರೇಮ ಅಂತ ಸುತ್ತಾಡಿ ಮದುವೆ ಆಗೋಕೆ ಹೊರಟಿದ್ದಾನೆ. ವರದಕ್ಷಿಣೆ ತಗೊಂಡು ನನ್ನ ಮದುವೆಯಾಗಿದ್ದ ಮಲ್ಲಿಕಾರ್ಜುನ್​ ನನ್ನಿಂದ ದೂರಾಗಿ.. ಬೇರೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈಗ ಅವಳನ್ನೂ ಬಿಟ್ಟು ಮತ್ತೊಬ್ಬಳನ್ನ ಮದುವೆ ಆಗ್ತೀನಿ ಅಂತಿದ್ದಾನೆ. ನನ್ನ ಗಂಡನಿಗೆ ಅವರ ಅಣ್ಣನಾದ ಸಸ್ಪೆಂಡೆಡ್ ಕೆ ಎ ಎಸ್ ಮುನ್ಸಿಪಲ್ ಆಯುಕ್ತ ಬಸಪ್ಪ ಸಪೋರ್ಟ್​ ಮಾಡ್ತಿದ್ದಾರೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಮಲ್ಲಿಕಾರ್ಜುನ್​ ಪತ್ನಿ ದೂರು ಕೊಟ್ಟಿದ್ದಾರೆ.

ಈಗ ಈ ಪೋಲೀಸ್​ ಸಾಹೇಬ್ರು ಮೂರನೆಯವಳನ್ನ ನೋಡ್ಕೊಂಡಿದ್ದಾನೆ ಅಂತ.. ಒಂದಾದ ಈ ಇಬ್ಬರು ಈಗ ದೂರು ದಾಖಲಿಸಿದ್ದಾರೆ. ಎಫ್​ಐಆರ್​ ಕೂಡಾ ದಾಖಲಾಗಿದ್ರೂ ಆರೋಪಿ ವಿರುದ್ಧ ಕ್ರಮ ಇರ್ಲಿ ಜಸ್ಟ್​ ವಿಚಾರಣೆಯೂ ಆಗಿಲ್ಲ ಅಂತ ಮಹಿಳೆಯರಿಬ್ಬರು ಆರೋಪಿಸುತ್ತಿದ್ದಾರೆ.

ಅದೇನೇ ಇರ್ಲಿ ಠಾಣೆಗೆ ಬಂದ ಕೇಸ್​ಗಳಿಗೆ ನ್ಯಾಯ ಕೊಡಿಸ್ತಿದ್ದ ಇನ್ಸ್​​ಪೆಕ್ಟರ್​ ಮನೆಯಲ್ಲಿ ತಮ್ಮ ಮಡದಿಗೇ ಅನ್ಯಾಯ ಮಾಡ್ತಿರೋದು ಎಷ್ಟು ಸರಿ? ಇನ್ಸ್​ಪೆಕ್ಟರ್​ಗೆ ಕಾನೂನು ಪಾಠ ಮಾಡೋರು ಯಾರು? ಹಿರಿಯ ಅಧಿಕಾರಿಗಳೇನಾದ್ರೂ ಉತ್ತರ ಕೊಡ್ತಾರಾ ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಸಾಲದು ಎಂದು ಮತ್ತೊಬ್ಬಳ ಮೇಲೆ ಕಣ್ಣು; ದೂರು ಕೊಡಲು ಬಂದವಳ ಜತೆಗೆ ಇನ್ಸ್​​ಪೆಕ್ಟರ್​​ ಲವ್​​!

https://newsfirstlive.com/wp-content/uploads/2023/09/CID-Inspector.jpg

Load More