ಇಂದು ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಸಾಧ್ಯತೆ
ಬಾಸ್ ನಿಮ್ಮ ಅಭಿಮಾನಿ ಪ್ಲೀಸ್ ಒಮ್ಮೆ ಮಾತಾಡಿ ಎಂದು ಹೇಳಿದ
ನಟ ದರ್ಶನ್ ಜೈಲಿನಲ್ಲಿ ಫೋನ್ ಯೂಸ್ ಮಾಡ್ತಾ ಇದ್ದಾರಾ?
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪದ ಮೇಲೆ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ ಜೈಲು ಸೇರಿದ 3 ತಿಂಗಳ ಬಳಿಕ ದರ್ಶನ್ಗೆ ಸಿಗೋ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿವೆ. ಇದೇ ಕೇಸ್ಗೆ ಸಂಬಂಧಪಟ್ಟಂತೆ, ಕೋರ್ಟ್ ನಿರ್ದೇಶನದಂತೆ ಇಂದು ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: 332 ಕಿ.ಮೀ ದೂರಕ್ಕೆ ದಾಸನ ಪಯಣ.. ದಿಕ್ಕಾಪಾಲಾದ ದರ್ಶನ್ ಗ್ಯಾಂಗ್; ಯಾರ್, ಯಾರು ಯಾವ ಜೈಲಿಗೆ?
ಇನ್ನು, ಇದಕ್ಕೂ ಮೊದಲು ವಿಡಿಯೋ ಕಾಲ್ ವಿಚಾರವಾಗಿ ಹುಳಿಮಾವು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ಈ ಕೇಸ್ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆ ವೇಳೆ ಮೊಬೈಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರಂತೆ. ನನ್ನ ಪಾಡಿಗೆ ನಾನು ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ಏಕಾಏಕಿ ನನ್ನ ಕೊಠಡಿಗೆ ಓರ್ವ ವ್ಯಕ್ತಿ ಬರ್ತಾನೆ. ನಿಮ್ಮ ಅಭಿಮಾನಿ ಬಾಸ್ ಪ್ಲೀಸ್ ಒಮ್ಮೆ ಮಾತಾಡಿ ಅಂದ್ರು. ಅಭಿಮಾನಿ ಅಲ್ವಾ ಅಂತ ನಾನು ಊಟ ಆಯ್ತಾ ಅಂದೆ. ಹೇಗಿದ್ದೀರಾ ಬಾಸ್ ಅಂದ ನಾನು ಆರಾಮಾಗಿ ಇದ್ದೀನಿ ಅಂದೆ. ಅದು ಬಿಟ್ಟರೇ ನನಗೂ ಆ ವಿಡಿಯೋ ಕಾಲ್ಗೂ ಸಂಬಂಧ ಇಲ್ಲ ಎಂದು ದರ್ಶನ್ ಹೇಳಿದ್ದಾರಂತೆ.
ಮೊಬೈಲ್ ತಗೊಂಡು ಬಂದ ವ್ಯಕ್ತಿ ರೌಡಿಶೀಟರ್ ಅನ್ನೋದು ನನಗೆ ಗೊತ್ತಿಲ್ಲ. ನಾನು ಜೈಲಿನಲ್ಲಿ ಯಾವುದೇ ಮೊಬೈಲ್ ಬಳಕೆ ಮಾಡ್ತಾ ಇಲ್ಲ. ಫೋನ್ನಲ್ಲಿ ಮಾತನಾಡಿದ ವ್ಯಕ್ತಿಯೂ ಯಾರು ಅನ್ನೋದು ಗೊತ್ತಿಲ್ಲ. ಬಹುಶಃ ಯಾವ ದಿನ ಮಾತನಾಡಿದ್ದು ಅಂತ ಸರಿಯಾಗಿ ಗೊತ್ತಿಲ್ಲ. ಆದ್ರೆ 10-15 ದಿನಗಳ ಹಿಂದೆ ಇರಬಹುದು ಎಂದು ದರ್ಶನ್ ಹೇಳಿದ್ದಾರೆ.
ಇನ್ನು ದರ್ಶನ್ ಹೇಳಿಕೆಯನ್ನು ಇನ್ಸ್‌ಪೆಕ್ಟರ್ ದಾಖಲಿಸಿದ್ದು, ಇಂದು ರೌಡಿ ಧರ್ಮನ ವಿಚಾರಣೆ ಮಾಡಲಿದ್ದಾರೆ. ಅವಶ್ಯಕತೆ ಇದ್ದರೆ ತನಿಖೆ ಭಾಗವಾಗಿ ಇಂದು ಕೂಡ ದರ್ಶನ್ ವಿಚಾರಣೆ ಮಾಡಲಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ