ಆಸ್ತಿ ಖರೀದಿ ವಿವಾದ, ದೃಶ್ಯಂ ಸಿನಿಮಾ ಶೈಲಿಯಲ್ಲಿ ವ್ಯಾಪಾರಿಯ ಹತ್ಯೆ
ವಿವಾದಿತ ಜಾಗದಲ್ಲಿ ಶವ ಹೂತಿಟ್ಟು ತಪ್ಪಿಸಿಕೊಳ್ಳಲು ನೋಡಿದ ಚಾಲಾಕಿ
ರಂಗೋಲಿ ಕೆಳಗೆ ತೂರಿದ್ರು ಆರೋಪಿಯನ್ನು ಹಿಡಿದು ತಂದ ಪೊಲೀಸರು
ನವದೆಹಲಿ: ಸಿನಿಮಾಗಳು, ಬದುಕಿನ ಮೇಲೆ ಅತ್ಯಂತ ವೇಗವಾಗಿ ಪರಿಣಾಮ ಬೀರುವ ಮಾಧ್ಯಮ. ಈ ಸಿನಿಮಾಗಳ ಮೂಲಕವೇ ಅನೇಕ ಕುಟುಂಬಗಳು ಒಂದಾಗಿವೆ. ಅನೇಕರು ರೌಡಿಸಂ ಬಿಟ್ಟ ಉದಾಹರಣೆಗಳಿವೆ. ಹೀಗೆ ಅನೇಕರು ಕೊಲೆಗಾರರು ಆದ ಉದಾಹರಣೆಗಳು ಇವೆ. ಈ ಕೊನೆಯ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾನೆ ಗ್ರೇಟರ್ ನೊಯ್ಡಾದ ಒಬ್ಬ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್.
ಇದನ್ನೂ ಓದಿ: ಹೆಂಡ್ತಿಗೆ ಹಾವಿನ ವಿಷದ ಇಂಜೆಕ್ಷನ್ ಕೊಟ್ಟು ಸಾಯಿಸಿದ ಗಂಡ; ಕಾರಣವೇನು? ಸಿಕ್ಕಿಬಿದ್ದಿದ್ದೇ ರೋಚಕ!
ಒಂದು ವಾರದ ಹಿಂದೆ ಗ್ರೇಟರ್ ನೊಯ್ಡಾದ ಬ್ಯುಸಿನೆಸ್ ಮ್ಯಾನ್ ಅಂಕುಶ್ ಶರ್ಮಾ ಎಂಬುವವರು ನಾಪತ್ತೆಯಾಗಿರುತ್ತಾರೆ. ಮಿಸ್ಸಿಂಗ್ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಬೆನ್ನು ಹತ್ತಿದ ನೋಯ್ಡಾ ಪೊಲೀಸರಿಗೆ, ಒಂದೊಂದೆ ಪುಟಗಳು ತೆರೆದುಕೊಂಡು ಹೋದಂತೆ ಈ ಕೊಲೆ ಸಿನಿಮಾವೊಂದರ ದೃಶ್ಯಗಳಿಗೆ ಹೋಲಿಕೆಯಾಗಲು ಶುರುವಾಗುತ್ತದೆ. ಕೊನೆಗೆ ಒಂದೊಂದೇ ಬಿಂದುಗಳನ್ನು ಪೊಲೀಸರು ಸೇರಿಸುತ್ತಾ ಹೋದಾಗ ದೆಹಲಿಯಲ್ಲಿ ಈ ಹಿಂದೆ ಕಾನ್ಸ್ಟೇಬಲ್ ವೃತ್ತಿಯಲ್ಲಿದ್ದ 42 ವರ್ಷದ ಪ್ರವೀಣ್ ಅನ್ನೋ ವ್ಯಕ್ತಿ ಪೊಲೀಸರ ಬಲೆಗೆ ಬೀಳುತ್ತಾನೆ.
ಇದನ್ನೂ ಓದಿ: ನಡು ರಸ್ತೆಯಲ್ಲಿ ಕಂತೆ ಕಂತೆ ನೋಟುಗಳ ಸುರಿಮಳೆಗೈದ ಖ್ಯಾತ ಯೂಟ್ಯೂಬರ್ -Video
ಗ್ರೇಟರ್ ನೊಯ್ಡಾದ ಡೆಪ್ಯೂಟಿ ಕಮಿಷನರ್ ಮಿಯಾ ಖಾನ್ ಈ ಪ್ರಕರಣದ ಒಂದೊಂದು ಪುಟಗಳನ್ನು ತೆರೆದು ಮಾಧ್ಯಮಗಳ ಎದುರು ಇಟ್ಟಿದ್ದಾರೆ. ಪ್ರವೀಣ್ ಹಾಗೂ ಅಂಕುಶ್ ನಡುವೆ 1.20 ಕೋಟಿ ರೂಪಾಯಿಯ ಫ್ಲ್ಯಾಟ್ ಒಂದರ ವ್ಯವಹಾರ ನಡೆದಿರುತ್ತದೆ. ಗ್ರೇಟರ್ ನೊಯ್ಡಾ ಸೋಸೈಟಿಯಲ್ಲಿದ್ದ ತನ್ನದೊಂದು ಜಾಗವನ್ನು ಮಾರಲು ಅಂಕುಶ್ ಶರ್ಮಾ ಸಿದ್ಧರಾಗಿದ್ದಾಗ, ಬೇರೆಯವರ ಮೂಲಕ ಈ ಪ್ರವೀಣ್ ಅಂಕುಶ್ಗೆ ಪರಿಚಯವಾಗಿರುತ್ತಾನೆ. ಈ ವೇಳೆ 1.20 ಕೋಟಿಗೆ ಇಬ್ಬರೂ ಡೀಲ್ ಕುದುರಿಸುತ್ತಾರೆ. 8 ಲಕ್ಷ ರೂಪಾಯಿ ಮುಂಗಡ ಕೊಟ್ಟ ಪ್ರವೀಣ್ ಆರಂಭಿಕ ಖರೀದಿ ಪ್ರಕ್ರಿಯೆಯನ್ನು ಮುಗಿಸುತ್ತಾನೆ. ಆದ್ರೆ ಎಸ್ಕೆಎ ಸೊಸೈಟಿಯಲ್ಲಿ ತನ್ನ ಫ್ಲ್ಯಾಟ್ ದರವನ್ನು ಅಂಕುಶ್ ನೋಡಿದಾಗ ಅಲ್ಲಿ ತಾನು ತೆಗೆದುಕೊಂಡ ರೇಟ್ಗಿಂತ ಜಾಸ್ತಿ ಇರುತ್ತದೆ. ಇಲ್ಲಿಂದ ಇಬ್ಬರ ನಡುವೆ ಒಂದು ವಿವಾದ ಶುರುವಾಗುತ್ತದೆ.
ಇದನ್ನೂ ಓದಿ: ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಭಾರತದಲ್ಲಿದೆ; ಈ ಹಳ್ಳಿ ಜನ ಬ್ಯಾಂಕ್ನಲ್ಲಿಟ್ಟ ಹಣ ಎಷ್ಟು ಸಾವಿರ ಕೋಟಿ ಗೊತ್ತಾ?
ಯಾವಾಗಾ ಅಂಕುಶ್ ಶರ್ಮಾ ನನ್ನ ಫ್ಲ್ಯಾಟ್ ಬೆಲೆ ನೀನು ಕೊಂಡುಕೊಂಡಿದ್ದಕ್ಕಿಂತ ಹೆಚ್ಚಿದೆ ಎಂದು ವಾದಿಸುತ್ತಾನೋ ಆಗ ಪ್ರವೀಣ್ ಅವನ ಹತ್ಯೆಗೆ ಪ್ಲ್ಯಾನ್ ಮಾಡುತ್ತಾನೆ. ಅದಕ್ಕಾಗಿ ಹಿಂದಿ ಅಜಯ್ ದೇವಗನ್ ಹಾಗೂ ಟಬು ನಟನೆಯ ದೃಶ್ಯಂ ಸಿನಿಮಾ ಹಾಗೂ ಕೆಲವ ವೆಬ್ ಸಿರೀಸ್ಗಳನ್ನು ನೋಡಿದ್ದ ಪ್ರವೀಣ್, ಅಂಕುಶ್ ಶರ್ಮಾ ಎಸ್ಕೆಎ ಸೊಸೈಟಿ ಪಾರ್ಕಿಂಗ್ ಜಾಗದಲ್ಲಿ ಕುಡಿಯಲು ಕೂರುತ್ತಾರೆ. ಕುಡಿತ ಒಂದು ಹಂತಕ್ಕೆ ಮುಗಿದಾಗ ಪ್ರವೀಣ್ ಅಂಕುಶ್ ಶರ್ಮಾ ತಲೆಗೆ ಸುತ್ತಿಗೆಯಿಂದ ಹೊಡೆಯುತ್ತಾನೆ. ಕೂಡಲೇ ಅವನ ಶವವನ್ನು ಯಾರೂ ಸುಳಿದಾಡದ ಒಂದು ವಿವಾದದಲ್ಲಿ ಮುಳುಗಿದ್ದ ಜಾಗದಲ್ಲಿ ಹೂತು ಹಾಕಿಬಿಡುತ್ತಾನೆ. ಆಗಸ್ಟ್ 9 ರಂದು ನಡೆದ ಈ ಘಟನೆಯ ಬಳಿಕ ಪ್ರವೀಣ್ ಎಂದಿನಂತೆ ತನ ದಿನನಿತ್ಯದ ಕೆಲಸದಲ್ಲಿ ತೊಡಗುತ್ತಾನೆ.
ನಿತ್ಯ ಯಾವ ಏರಿಯಾದಲ್ಲಿ ಸುಳಿದಾಡುತ್ತಿದ್ದನೋ ಆ ಏರಿಯಾದ ಸಿಸಿಟಿವಿಯಲ್ಲಿ ತಾನ ಕಾಣುವಂತೆ ನಿತ್ಯ ಸುಳಿದಾಡುತ್ತಾನೆ. ಪೊಲೀಸರಿಗೆ ಒಂದೇ ಒಂದು ಡೌಟ್ ಕೂಡ ಬರದಂತೆ ಮ್ಯಾನೇಜ್ ಮಾಡಿರುತ್ತಾನೆ . ಪ್ರವೀಣ್ ಚಾಪೆಯ ಕೆಳಗೆ ತೂರಿದ್ರೆ, ಪೊಲೀಸ್ರು ರಂಗೋಲಿ ಕೆಳಗೆ ತೂರಿದ್ದಾರೆ. ಹಲವಾರು ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿದ ಪೊಲೀಸರು ಪ್ರವೀಣ್ನನ್ನು ಒಳಗೆ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ