newsfirstkannada.com

ರೀಲ್ಸ್​ ಮಾಡೋರ ಹೆಸರಲ್ಲೇ ಫೇಕ್​​ ಅಕೌಂಟ್​; ಯುವತಿಯರೇ ಈತನ ಟಾರ್ಗೆಟ್​​! ಓದಲೇಬೇಕಾದ ಸ್ಟೋರಿ

Share :

07-09-2023

    ರೀಲ್ಸ್​ ಮಾಡೋರ ಹೆಸರಲ್ಲೇ ಫೇಕ್​​ ಅಕೌಂಟ್​ ತೆರೆದ ವಂಚಕ

    ಫೇಕ್​ ಅಕೌಂಟ್​ ಮೂಲದ ಯುವತಿಯವರಿಗೆ ಗಾಳ ಹಾಕ್ತಿದ್ದ..!

    ಸ್ನೇಹ ಬೆಳೆಸಿ ಬ್ಲಾಕ್​​ಮೇಲ್​ ಮಾಡಿದ ಬೇಕಾದಷ್ಟು ಹಣ ಪೀಕ್ತಿದ್ದ

ಬೆಂಗಳೂರು: ಸೋಷಿಯಲ್ ಮೀಡಿಯಾ ಹೈಪ್ ಆಗೋವರ್ಗೂ ಇದ್ದ ಅಪರಾಧಗಳ ಸ್ವರೂಪಕ್ಕೂ, ಇವತ್ತಿಗೆ ಇರೋ ಕ್ರೈಮ್‌ಗಳಿಗೂ ತುಂಬಾ ವ್ಯತ್ಯಾಸ. ತರಹೇವಾರಿಯಾಗಿ ಅಮಾಯಕರನ್ನ ವಂಚಿಸೋ ಕೆಲ್ಸಗಳು ನಡೀತಾನೇ ಬಂದಿದೆ. ಇದು ಕೂಡ ಅಂತದ್ದೇ ಒಂದ ಸ್ಟೋರಿ. ರೀಲ್ಸ್‌ ಮಾಡ್ಕೊಂಡು ಯಾಱರು ಸ್ವಲ್ಪ ಹೆಸರು ಮಾಡಿದ್ದಾರೋ ಅವ್ರಿಗೆ ಹೇಗೆಲ್ಲಾ ಪ್ರಾಬ್ಲಂ ಆಗ್ಬಹುದು ಅಂತಾ ಈ ಸ್ಟೋರಿ ನೋಡಿದ್ಮೇಲೆ ನಿಮ್ಗೆ ಗೊತ್ತಾಗುತ್ತೆ. ಗೊತ್ತಿದ್ದೋ, ಗೊತ್ತಿಲ್ದೆಯೋ ನಡೆದ್ರೂ ರೀಲ್ಸ್‌ ಸ್ಟಾರ್‌ಗಳು ಪೇಚಾಟಕ್ಕೆ ಸಿಲುಕಿಕೊಳ್ಳೋದು ಗ್ಯಾರಂಟಿ.

ಇನ್‌ಸ್ಟಾಗ್ರಾಂ ಓಪನ್ ಮಾಡಿ, ರೀಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಆಟ ಶುರು ಅಂತಾನೇ ಅರ್ಥ. ಅಲ್ಲಿ ಬರೋ ವಿಡಿಯೋಗಳು ಒಂದಲ್ಲ ಎರಡಲ್ಲ, ನೂರಾರು. ಒಂದೊಂದು ಡಿಫರೆಂಟೋ ಡಿಫರೆಂಟ್.

ನೀವೀಗ ನೋಡಿ ರೀಲ್ಸ್‌ ಡಿಜೆ ದೀಪು ಅನ್ನೋ ಇನ್‌ಪ್ಲ್ಯೂಯನ್ಸರ್‌ ಅವರದ್ದು. ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಒಂದು ಸ್ಟೈಲ್‌ ಇದೆ. ಇವರ ರೀಲ್ಸ್‌ ನೋಡೋ ಬಳಗವೂ ಇದೇ.

ಇವರು ತಮ್ಮ ಪಾಡಿಗೆ ತಾವು ರೀಲ್ಸ್ ಮಾಡಿಕೊಳ್ತಾ ಇದ್ರು. ಆದ್ರೆ, ಇವರಿಗೆ ಗೊತ್ತಿಲ್ಲದಂತೆ ಇನ್ನೊಬ್ಬ ಇವರ ಹೆಸರಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿ, ಯುವತಿಯರಿಗೆ ಗಾಳ ಹಾಕೋಕೆ ಶುರು ಮಾಡಿದ್ದ. ಅವನೇ, ಪ್ರದೀಪ್‌.

ಸುಳ್ಳು ಹೇಳಿ ಸ್ನೇಹ ಬೆಳೆಸುತ್ತಿದ್ದ ವಂಚಕ

ಪೀಣ್ಯಾದ ನೆಲಗೆದರನಹಳ್ಳಿಯ ಪ್ರದೀಪ್‌ಗೆ ಡಿಜೆ ದೀಪು ಬಗ್ಗೆ ಅಂತೂ ಗೊತ್ತಿತ್ತು. ಇವ್ರ ರೀಲ್ಸ್‌ ವ್ಯೂವ್ಸ್‌, ಕಮೆಂಟ್ಸ್‌, ರೀಚ್ ಬಗ್ಗೆ ಗೊತ್ತಿದ್ದ ಪ್ರದೀಪ್‌ ಒಂದು ಐಡಿಯಾ ಮಾಡಿದ. ದೀಪು ಹೆಸರಿನಲ್ಲಿ ಒಂದ್‌ ಇನ್ಸ್‌ಟ್ಟಾಗ್ರಾಂ ಅಕೌಂಟ್ ಓಪನ್ ಮಾಡಿ, ಡಿಜೆ ದೀಪು ಫೋಟೋಸ್‌, ವಿಡಿಯೋಸ್ ಅಪ್‌ಲೋಡ್ ಮಾಡೋಕೆ ಶುರು ಮಾಡಿದ. ಇದಿಷ್ಟು ಮಾಡಿದ್ದಿದ್ರೆ, ಪರವಾಗಿರಲಿಲ್ಲ. ಇದು ಡಿಜೆ ದೀಪು ಅವರ ಇನ್ನೊಂದು ಅಕೌಂಟ್‌ ಅಂತಾ ಅಪ್ಡೇಟ್ ಮಾಡ್ತಿದ್ದ. ರೀಲ್ಸ್‌ಗೆ ಕಮೆಂಟ್‌ ಮಾಡ್ತಿದ್ದ ಹುಡುಗಿಯರ ಜೊತೆ ಚಾಟ್ ಮಾಡೋದು. ನಾನೇ ದೀಪು ಅಂತಾ ಹೇಳೋದು, ಆ ಅಕೌಂಟ್‌ನಲ್ಲಿ ಚಾಟ್ ಮಾಡೋಕೆ ಆಗಲ್ಲ. ಹಾಗಾಗಿ ಇನ್ನೊಂದು ಅಕೌಂಟ್ ಓಪನ್ ಮಾಡಿದ್ದೀನಿ ಅಂತೆಲ್ಲಾ ಸುಳ್ಳು ಹೇಳಿ, ಸ್ನೇಹ ಬೆಳೆಸುತ್ತಿದ್ದ.

ನೇರವಾಗಿ ಭೇಟಿಯಾಗದೇ ಇನ್ಸ್‌ಟಾಗ್ರಾಂನಲ್ಲಿ ಚಾಟ್ ಮಾಡ್ತಾ, ಯುವತಿಯರಿಂದ ಮೀಟ್ ಆಗ್ತೀನಿ ಲವ್ ಮಾಡ್ತೀನಿ ಎಂದು ಹಣ ಪಡೆದಿದ್ದ ಅಂತಾ ಆರೋಪಿಸಲಾಗಿದೆ.

ಇದಿಷ್ಟೇ ಅಲ್ಲ, ಡಿಜೆ ದೀಪು ಎಂಬಂತೆ OLX ನಲ್ಲಿ ಮೊಬೈಲ್ ಖರೀದಿ ಮಾಡಲು ಹೋಗಿದ್ದ. ಅಕ್ಕನ ಮನೆ ಇಲ್ಲೇ ಇದೆ ಮೊಬೈಲ್ ತೋರಿಸಿ ಬರ್ತೀನೆಂದು ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದ ಇದೇ ಪ್ರದೀಪ್‌. ಪ್ರದೀಪ್ ಮಾಡ್ತಿರೋ ದೋಖಾ ಇದೇ ಮೊದಲೆನಲ್ಲಾ, ಈ ಹಿಂದೆಯೂ ಇದೇ ರೀತಿ ಓರ್ವ ಗೃಹಿಣಿಗೆ ವಂಚಿಸಿದ್ದನಂತೆ. ಆ ಬಗ್ಗೆ ಡಿಜೆ ದೀಪು, ಹೇಳೋದು ಹೀಗೇ.

ಸದ್ಯ ಬಸವೇಶ್ವರನಗರ ಸೈಬರ್ ಕ್ತೈಂ ಠಾಣೆಗೆ ದೂರು ನೀಡಿರೋ ರೀಲ್ಸ್ ಸ್ಟಾರ್ ಡಿಜೆ ದೀಪು, ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಪ್ರದೀಪ್ ವಂಚಿಸ್ತಿದ್ದಾನೆಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಲ್ಸ್​ ಮಾಡೋರ ಹೆಸರಲ್ಲೇ ಫೇಕ್​​ ಅಕೌಂಟ್​; ಯುವತಿಯರೇ ಈತನ ಟಾರ್ಗೆಟ್​​! ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2023/09/Deepu_1.jpg

Load More