newsfirstkannada.com

×

ಇನ್​ಸ್ಟಾ ಬಳಸೋ ಮಹಿಳೆಯರೇ ಹುಷಾರ್​​.. ರೀಲ್ಸ್ ಮಾಡೋ ಆಂಟಿಯರೇ ಈತನ ಟಾರ್ಗೆಟ್!

Share :

Published September 4, 2023 at 4:36pm

Update September 4, 2023 at 4:37pm

    ಇನ್​ಸ್ಟಾದಲ್ಲಿ ಸಿಕ್ಕ ಸಿಕ್ಕವರ ಜತೆ ಮೆಸೇಜ್​ ಮಾಡೋ ಮುನ್ನ ಎಚ್ಚರ

    ಯಾವುದೇ ಕಾರಣಕ್ಕೂ ಮಹಿಳೆಯರು ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ

    ಚೆಂದ ಚೆಂದ ಆಂಟಿಯರೇ ಈತನ ಟಾರ್ಗೆಟ್​​, ಇವನ ರೂಟೇ ಡಿಫಿರೆಂಟ್​​

ಬೆಂಗಳೂರು: ಆತ ಹುಡ್ಗೀರನ್ನ ನೋಡಲ್ಲ. ಹುಡ್ಗೀರನ್ನ ಬುಟ್ಟಿಗೆ ಹಾಕೋಳಲ್ಲ. ಹಾಗಂತ ಡೀಸೆಂಟ್​​ ಅಂತ ಅನ್ಕೊಂಡ್ರೆ ನೋ ವೇ. ಚಾನ್ಸೇ ಇಲ್ಲ. ಈತ ಕೊಂಚ ಡಿಫರೆಂಟ್,​​ ಚೆಂದ ಕಾಣಿಸೋ ಆಂಟಿರೇ ಈತನ ಟಾರ್ಗೆಟ್​​. ಅದರಲ್ಲೂ ಆಂಟಿಯರ ಪ್ರೊಫೈಲ್​ ಕಣ್ಣಿಗೆ ಕಾಣಿಸಿ ಬಿಟ್ರೆ ಮುಗೀತು ಕಥೆ!

ಚಿಗುರು ಮೀಸೆ ಯುವಕ, ಆಂಟೀರ ಬೆನ್ನು ಬಿದ್ದ ಕಾಮುಕ, ಹೆಸ್ರು ​ಫೈಸಲ್ ಆಲಿಯಾಸ್​ ಜಮೀರ್​​ ಜಾನ್. ವಯಸ್ಸು 35 ವರ್ಷ. ಈತ ಮೂಲತಃ ಅಸ್ಸಾಂನ ನಿವಾಸಿ. ಆಂಟೀರನ್ನ ತನ್ನ ಗಾಳಕ್ಕೆ ಬೀಳಿಸೋದಕ್ಕೆ ಇನ್ಟಗ್ರಾಮ್​ನಲ್ಲಿ ಫೇಕ್​ ಅಕೌಂಟ್​​ ಕ್ರಿಯೇಟ್​​ ಮಾಡ್ತಿದ್ದ. ಕಲರ್​ ಕಲರ್​​ ಡೈಲಾಗ್​ ಹೊಡೆದು ಸಲೀಸಾಗಿ ಲಕ್ಷ ಲಕ್ಷ ಪೀಕ್ತಿದ್ದ.

ಈತ ಇನ್ಟಗ್ರಾಮ್​​ನಲ್ಲಿ ಬ್ಯೂಟಿಫುಲ್​​ ಆಂಟೀರ ಪ್ರೊಫೈಲ್​ ನೋಡಿ ಫಾಲೋ ಮಾಡ್ತಿದ್ದ, ಅಕ್ಸೆಪ್ಟ್ ಮಾಡಿದ್ರೇ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ಬೀಳಿಸ್ತಿದ್ದ. ಹೆಣ್ಣುಮಕ್ಕಳ ಫ್ರೀಡಂ, ಅಂಕಲ್​​ಗಳ ವೀಕ್ನೆಸ್ ಬಗ್ಗೆ ಮಾತಾಡಿ ತನಗೆ ಹತ್ರ ಮಾಡ್ಕೋತಿದ್ದ. ನಂತರ ಮೀಟಿಂಗ್ ಶುರು ಮಾಡಿ ದೈಹಿಕ ಸಂಪರ್ಕಕ್ಕೆ ಗಾಳ ಹಾಕ್ತಿದ್ದ. ಖಾಸಗಿ ಜಾಗಕ್ಕೆ ಕರೆದು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಮಾಡ್ತಿದ್ದ.

ಲಕ್ಷ ಲಕ್ಷ ಪೀಕ್ತಿದ್ದ ಕಿಡಿಗೇಡಿ ಅರೆಸ್ಟ್​​..!

ಇಲ್ಲಿಗೆ ಮುಗ್ದಿಲ್ಲ ಈತನ ಕರಾಮತ್​, ಆಂಟಿರ ಜೊತೆ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿಕೊಳ್ತಿದ್ದ ಆರೋಪಿ. ನಂತರ ಲಕ್ಷ ಲಕ್ಷ ಹಣ ಕೇಳ್ತಿದ್ದ, ಮತ್ತೆ ಮತ್ತೆ ಪೀಡಿಸ್ತಿದ್ದ. ಹಣ ಕೊಡದಿದ್ರೆ ಗಂಡನಿಗೆ ವಿಡಿಯೋ ಕಳಿಸೋದಾಗಿ ಬೆದರಿಕೆ ಹಾಕ್ತಿದ್ದ.

ಸದ್ಯ ಹಲವರಿಗೆ ವಂಚಿಸಿರೋ ಆರೋಪಿ ಫೈಸಲ್​ HSR ಲೇಔಟ್ ಪೊಲೀಸರ ಕೈಯಲ್ಲಿ ಲಾಕ್​ ಆಗ್ಬಿಟ್ಟಿದ್ದಾನೆ. ಅದೇನೆ ಇರ್ಲಿ ಇನ್ಟಗ್ರಾಮ್​ನಲ್ಲಿ ಅಪರಿಚರ ಜೊತೆ ಮಾತನಾಡೋ ಮುನ್ನ ಎಚ್ಚರ ವಹಿಸಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​ಸ್ಟಾ ಬಳಸೋ ಮಹಿಳೆಯರೇ ಹುಷಾರ್​​.. ರೀಲ್ಸ್ ಮಾಡೋ ಆಂಟಿಯರೇ ಈತನ ಟಾರ್ಗೆಟ್!

https://newsfirstlive.com/wp-content/uploads/2023/09/Crime-News12.jpg

Load More