4 ಕೋಟಿ ರೂ. ಹಣಕ್ಕಾಗಿ ದುರಾಸೆ
ಹೊಸ ಕಥೆ ಕಟ್ಟಿದ್ದ ಚಿನ್ನದ ವ್ಯಾಪರಿ
ಪೊಲೀಸರಿಗೆ ಕೊನೆಗೂ ಸಿಕ್ಕಿಬಿದ್ದ!
ಬೆಂಗಳೂರು: ಬರೋಬ್ಬರಿ 3 ಮುಕ್ಕಾಲು ಕೆಜಿ ಚಿನ್ನ. ಎಲ್ಲಾ ಆ್ಯಂಟಿಕ್ ಪೀಸ್ ಬೇರೇ. ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು. ಆದ್ರೆ, ಈ ಚಿನ್ನಾಭರಣ ಹಿಂದೆ ಒಂದು ರೋಚಕ ಸ್ಟೋರಿ ಇದೆ. ಕೇವಲ ಬಾಯಿ ಮಾತಿಗೆ ರೋಚಕ ಅಂತಿಲ್ಲ. ನಿಜಕ್ಕೂ ರೋಚಕ ಕಥೆಯೇ. ರೋಚಕ ಪ್ಲಸ್ ಡಿಫರೆಂಟ್ ಕ್ರೈಂ ಸ್ಟೋರಿ ಇದು.
ಇದು ಯಾರೋ ಕಳ್ಳ ಕದ್ದಿರೋ ಮಾಲಲ್ಲ. ಕಳ್ಳನಿಂದ ರಿಕವರಿ ಮಾಡಿಕೊಂಡಿರೋದು ಅಲ್ಲ. ಮಾಲೀಕನಿಂದಲೇ ವಶಕ್ಕೆ ಪಡೆದಿರೋ ಚಿನ್ನಾಭರಣಗಳು. ಈ ಕಥೆಯ ಸೂತ್ರಧಾರಿಯ ಹೆಸರು ರಾಜು ಜೈನ್. ಜುಲೈ 12ರಂದು ಈ ರಾಜು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲೊಂದು ದೂರು ದಾಖಲಿಸುತ್ತಾನೆ.
ರಾಜು ಜೈನ್ ದೂರೇನು?
ನಾನು ಚಿನ್ನದ ವ್ಯಾಪಾರಿಯಾಗಿದ್ದು, ಹೈದರಾಬಾದಿಗೆ 2.780 ಕೆಜಿ ಚಿನ್ನ ಕಳುಹಿಸಲು ಪ್ಲಾನ್ ಮಾಡಿಕೊಂಡಿದ್ದೆ. ಅದರಂತೆ ಜುಲೈ 12ರಂದು ಸಂಜೆ 7.30ಕ್ಕೆ ಇಬ್ಬರು ಬಾಲಕರ ಕೈಗೆ ಕೊಟ್ಟು ಹೈದರಾಬಾದ್‌ಗೆ ತಲುಪಿಸಲು ಹೇಳಿದ್ದೆ. ಆದ್ರೆ, ದಾರಿ ಮಧ್ಯೆ ಅಪರಿಚಿತರು ಅಟ್ಯಾಕ್ ಮಾಡಿ 2.780 ಕೆ.ಜಿ ಚಿನ್ನಾಭರಣವನ್ನ ದೋಚಿಕೊಂಡು ಹೋಗಿದ್ದಾರೆ.
ಹತ್ತತ್ರ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವು ಪ್ರಕರಣ ಒಂದು ವಾಟ್ಸಾಪ್ ಕಾಲ್‌ನಿಂದ ಬೇಧಿಸಲಾಗಿದೆ. ಈ ಮೂಲಕ ಇಡೀ ಪ್ರಕರಣದ ರೂವಾರಿಯೇ ರಾಜು ಜೈನ್ ಆಗಿದ್ದಾನೆ. ಅಸಲಿಗೆ ಇಲ್ಲಿ ಚಿನ್ನಾಭರಣ ಸುಲಿಗೆಯಾಗೇ ಇರೋದಿಲ್ಲ. ಇದು ರಾಜು ಜೈನ್ ಕಟ್ಟಿದ್ದ ಸಿನಿಮೀಯ ಕಥೆಯಷ್ಟೇ ಅನ್ನೋದು ಪೊಲೀಸರಿಗೆ ಗೊತ್ತಾಗುತ್ತೆ.
ರಾಜು ಜೈನ್ ಇಡೀ ಕಥೆ ಮತ್ತು ಚಿತ್ರಕಥೆ ಬರೆದಿದ್ದು ಧೂಮ್-2 ಮತ್ತು ದೃಶ್ಯಂ-2 ಸಿನಿಮಾಗಳಿಂದ ಸ್ಪೂರ್ತಿ ಪಡೆದು ಎನ್ನಲಾಗ್ತಿದೆ. ಎಲ್ಲೆಲ್ಲಿ ಸಿಸಿಟಿವಿಗಳಿವೆ ಎಂಬುದನ್ನ ಅಧ್ಯಯನ ಮಾಡಿದ್ದ ಈತ ಹೇಗೆ ಅಪರಾಧ ಎಸಗಬೇಕು? ಯಾವ ರೀತಿ ತಂತ್ರ ರೂಪಿಸಿದರೆ ಪೊಲೀಸರು ನಂಬುತ್ತಾರೆ? ಪೊಲೀಸರು ಪ್ರಶ್ನಿಸಿದರೆ ಹೇಗೆ ವರ್ತಿಸಬೇಕು? ಏನು ಹೇಳಬೇಕು ಎಂಬುದರ ಬಗ್ಗೆ ಹುಡುಗರಿಗೆ ತರಬೇತಿ ನೀಡಿದ್ದ. ಮಾರ್ಕೆಟ್ ಸೇತುವೆ ಮೇಲೆ ಸಿಸಿಟಿವಿ ಇಲ್ಲದಿರುವುದನ್ನ ಖಚಿತಪಡಿಸಿಕೊಂಡಿದ್ದ. ಅಲ್ಲೇ ಸುಲಿಗೆಯಾಗಿದೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದ. ಬೈಕ್ನಲ್ಲಿಟ್ಟಿದ್ದ ಹಣವನ್ನ ಖುದ್ದು ಜೈನ್ ಘಟನಾ ಸ್ಥಳಕ್ಕೆ ತೆರಳಿ ಸುಲಿಗೆಯಾಗಿದೆ ಎಂದು ಬಿಂಬಿಸಿದ್ದ. ಅನಂತರ ಚಿನ್ನವಿರುವ ಬ್ಯಾಗ್ ಅನ್ನು ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದ. ನಂತರ ಬಂದು ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ.
ಇನ್‌ಶ್ಯೂರೆನ್ಸ್ ಹಣಕ್ಕಾಗಿ ದುರಾಸೆ
ರಾಜು ಇಷ್ಟೆಲ್ಲಾ ಮಾಡಿದ್ದು, ಇನ್‌ಶ್ಯೂರೆನ್ಸ್ ಹಣಕ್ಕಾಗಿ ಎನ್ನಲಾಗ್ತಿದೆ. ಚಿನ್ನಾಭರಣ ಕಳ್ಳತನವಾದ್ರೆ ಬರುವ ಇನ್‌ಶ್ಯೂರೆನ್ಸ್ ಹಣಕ್ಕಾಗಿ ಹೀಗೆ ಮಾಡಿದ್ದ ಅಂತ ಪೊಲೀಸರು ತಿಳಿಸಿದ್ದಾರೆ.
ಎರಡೂ ಮುಕ್ಕಾಲು ಕೆಜಿ ಸುಲಿಗೆಯಾಗಿದೆ ಎಂದು ದೂರು ನೀಡಲಾಗಿರುತ್ತದೆ. ಪೊಲೀಸರ ತನಿಖೆಯಲ್ಲಿ ಇನ್ನೊಂದು ಕೆಜಿ ಎಕ್ಟ್ಟ್ರಾ ಸಿಗುತ್ತೆ. ಪ್ರತಿ ದಿನವೂ ಭಾನುವಾರವಾಗಿರೋದಿಲ್ಲ. ಎಲ್ಲ ಸಿನಿಮೀಯ ಕಥೆಗಳು, ಅಸಲಿ ಕಥೆಗಳಾಗಲು ಸಾಧ್ಯವಿಲ್ಲ ಅನ್ನೋದಕ್ಕೆ ಈ ಕಥೆಯೇ ಸಾಕ್ಷಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ