newsfirstkannada.com

ರಾಜ್ಯ ಬಿಜೆಪಿಗೆ ಭಾರೀ ಹಿನ್ನಡೆ; ಒಳ ಮೀಸಲಾತಿಗೆ ಅವಕಾಶ ಇಲ್ಲ ಎಂದ ಮೋದಿ ಸರ್ಕಾರ

Share :

29-07-2023

    ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ ಕೇಂದ್ರ ಸರ್ಕಾರ

    ‘ಸಂವಿಧಾನದಲ್ಲಿ ಪ.ಜಾ ಒಳಮೀಸಲಾತಿಗೆ ಅವಕಾಶವಿಲ್ಲ’

    ಬೊಮ್ಮಾಯಿ ಘೋಷಿಸಿದ್ದ ಮೀಸಲಾತಿಗೆ ಸಿಗದ ಮನ್ನಣೆ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಸಮಯದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಘೋಷಿಸಿ ದೊಡ್ಡ ಹೆಜ್ಜೆಯನ್ನ ಮುಂದಿಟ್ಟಿತ್ತು. ಆದ್ರೆ ಇದು ಕೆಲ ಸಮುದಾಯಗಳ ಹಾಗೂ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ರೂ ಒಳ ಮೀಸಲಾತಿಯನ್ನ ಆಗಿನ ಸಿಎಂ ಬೊಮ್ಮಾಯಿ ಘೋಷಿಸಿದ್ದರು. ಸದ್ಯ ಇದಕ್ಕೆ ಕೇಂದ್ರ ಸರ್ಕಾರವೇ ಕಾನೂನಿನಡಿ ಅವಕಾಶವಿಲ್ಲ ಅಂತಿದೆ.

ಹಿಂದಿನ ಮುಖ್ಯ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭಾರೀ ಹೋರಾಟ, ಚರ್ಚೆ ಬಳಿಕ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಘೋಷಿಸಿತ್ತು. ಇದು ಕೆಲವರ ಕೆಂಗಣ್ಣಿಗೂ ಕಾರಣವಾಗಿತ್ತು. ಬಂಜಾರಾ ಸಮುದಾಯದ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಇದರ ವಿರುದ್ಧ ಅಂದಿನ ವಿಪಕ್ಷ ನಾಯಕಾರಾಗಿದ್ದ ಸಿದ್ದರಾಮಯ್ಯ ಕಿಡಿಕಾರಿದ್ದರು. ಇಷ್ಟೆಲ್ಲ ಬೆಳವಣಿಗೆ ಆದ್ಮೇಲೆ ಸರ್ಕಾರ ಬದಲಾಗಿದೆ. ಕಾಂಗ್ರೆಸ್ ಗದ್ದುಗೆ ಹಿಡಿದು ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂತಿದೆ. ಈ ಬೆನ್ನಲ್ಲೇ ಸದ್ಯ ಒಳ ಮೀಸಲಾತಿ ವಿಚಾರದಲ್ಲಿ ಭಾರೀ ದೊಡ್ಡ ಬೆಳವಣಿಗೆಯಾಗಿದೆ.

‘ಸಂವಿಧಾನದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಅವಕಾಶವಿಲ್ಲ’

ಹಿಂದಿನ ಸಿಎಂ ಬೊಮ್ಮಾಯಿ ಸರ್ಕಾರ ಘೋಷಿಸಿದ್ದ ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಅಂತ ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಜಿ.ವಿ.ಎಲ್.ನರಸಿಂಹ ರಾವ್ ಪ್ರಶ್ನೆಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ನಾರಾಯಣ ಸ್ವಾಮಿ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿಯ ಒಳ ಮೀಸಲಾತಿಯು‌ ಸದ್ಯ ಸುಪ್ರೀಂ ಕೋರ್ಟ್​ನಲ್ಲಿ ಪೆಂಡಿಂಗ್ ಇದೆ. ಸುಪ್ರೀಂ ಕೋರ್ಟ್​ನ‌ ಸಾಂವಿಧಾನಿಕ ಪೀಠವು 7 ಅಥವಾ ಅದಕ್ಕಿಂತ ಹೆಚ್ಚಿನ ಜಡ್ಜ್​ಗಳಿರುವ ಪೀಠಕ್ಕೆ ವಹಿಸಲು ಸಿಜೆಗೆ ಮನವಿ ಮಾಡಿದೆ ಅಂತ ಸಚಿವರು ಉತ್ತರ ಕೊಟ್ಟಿದ್ದಾರೆ.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ನೀಡಲು ಸಂವಿಧಾನದ 341ನೇ ವಿಧಿಗೆ ತಿದ್ದುಪಡಿ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಶಿಫಾರಸು ಮಾಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು. ಆದರೆ 20 ರಾಜ್ಯ ಸರ್ಕಾರಗಳು ಮಾತ್ರ ಇದುವರೆಗೂ ಅಭಿಪ್ರಾಯ ನೀಡಿವೆ. ಅದರಂತೆ 7 ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡಿಕೆಗೆ ಸಂವಿಧಾನ ತಿದ್ದುಪಡಿಗೆ ಬೆಂಬಲಿಸಿವೆ. ಆದರೆ 13 ರಾಜ್ಯ ಸರ್ಕಾರಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸಂವಿಧಾನ ತಿದ್ದುಪಡಿಗೆ ವಿರೋಧಿಸಿವೆ. ಅದರಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ ಯಾವುದೇ ಅಭಿಪ್ರಾಯ ನೀಡಿಲ್ಲ ಅಂತ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಇನ್ನು ಹಿಂದಿನ ಸರ್ಕಾರ ಘೋಷಿಸಿದ್ದ ಪರಿಶಿಷ್ಟ ಜಾತಿಗೆ ಒಳಮೀಸಲಾತಿ

  • ದಲಿತ ಎಡಗೈ – ಶೇ. 6
  • ದಲಿತ ಬಲಗೈ – ಶೇ.5.5
  • ಅಸ್ಪೃಷ್ಯರಲ್ಲದ ಗುಂಪು – ಶೇ.4.5
  • ಎಸ್​ಸಿ ಇತರೆ – ಶೇ.1

ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಇದರ ಪ್ರಕಾರ ಶೇಕಡಾ 33.4ರಷ್ಟಿರುವ ದಲಿತ ಎಡಗೈ ಸಮುದಾಯಕ್ಕೆ ಶೇಕಡಾ 6 ರಷ್ಟು ಹಾಗೂ ಶೇಕಡಾ 32ರಷ್ಟಿರುವ ಬಲಗೈ ಸಮುದಾಯಕ್ಕೆ ಶೇಕಡಾ 5.5 ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೂಲಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ–ಬಲಗೈ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಯ ಅಸ್ಪೃಶ್ಯರಲ್ಲದವರಿಗೆ ಶೇ. 4.5 ಒಳಮೀಸಲಾತಿ ನೀಡಲಾಗಿದೆ. ಇತರೆ ಸಮುದಾಯಗಳಿಗೆ ಶೇ.1ರಷ್ಟು ಒಳಮೀಸಲಾತಿ ನೀಡಲಾಗಿದೆ. ಒಟ್ಟಾರೆ ಹಿಂದಿನ ಬೊಮ್ಮಾಯಿ ಸರ್ಕಾರ ಘೋಷಿಸಿದ್ದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಕೇಂದ್ರ ಸರ್ಕಾರ ಕಾನೂನಿನಲ್ಲಿ ಅವಕಾಶವಿಲ್ಲ ಅಂತಿದೆ. ಇದರಿಂದ ಒಳ ಮೀಸಲಾತಿಗೆ ಬ್ರೇಕ್​ ಬಿದ್ದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ಬಿಜೆಪಿಗೆ ಭಾರೀ ಹಿನ್ನಡೆ; ಒಳ ಮೀಸಲಾತಿಗೆ ಅವಕಾಶ ಇಲ್ಲ ಎಂದ ಮೋದಿ ಸರ್ಕಾರ

https://newsfirstlive.com/wp-content/uploads/2023/07/bjp-2023-2.jpg

Load More