newsfirstkannada.com

ಇಂದಿನಿಂದ ಟರ್ಮಿನಲ್-2ನಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟ; ಕಣ್ಣು ಕುಕ್ಕುವಂತಿದೆ ಇದರ ಸೌಂದರ್ಯ..

Share :

12-09-2023

    5 ಸಾವಿರ ಕೋಟಿ ‌ವೆಚ್ಚದಲ್ಲಿ‌ ಟರ್ಮಿನಲ್ 2 ಗಾರ್ಡನ್ ನಿರ್ಮಾಣ

    ಆ.31ರಿಂದಲೇ ಆರಂಭವಾಗಬೇಕಿದ್ದ ಇಂಟರ್​ನ್ಯಾಷನಲ್ ಫ್ಲೈಟ್ಸ್!

    ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾಗಿ ತಡವಾಗಿ ಹಾರಾಟ ಆರಂಭ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 2ಗೆ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಶಿಫ್ಟ್​ ಆಗಿದೆ. ಬಹು ನಿರೀಕ್ಷಿತ ಮತ್ತು ನೂತನ ತಂತ್ರಜ್ಞಾನ ಹೊಂದಿದ ಈ ಟರ್ಮಿನಲ್ ಸೌಂದರ್ಯ ಕಣ್ಣು ಕುಕ್ಕುವಂತಿದೆ. ಲೈಟ್​ಗಳಿಂದ ಜಗಮಗಿಸುತ್ತಿರುವ ಕಟ್ಟಡ. ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದ ವಾತವರಣ. ಡೋಳ್ಳು ಕುಣಿತ. ಯಕ್ಷಗಾನ ಕಲಾವಿದರ ನರ್ತನ. ಇದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ​ಟರ್ಮಿನಲ್ 2 .

ಟರ್ಮಿನಲ್ 2ರಿಂದ ಅಂತರಾಷ್ಟ್ರೀಯ ವಿಮಾನ ಹಾರಾಟ
ಇವತ್ತಿನಿಂದ ಆರಂಭವಾಗಿರುವ ವಿಮಾನಗಳ ಹಾರಾಟ

ಬಹು ನಿರೀಕ್ಷಿತ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಿದೆ. ವಿದೇಶಿ ವಿಮಾನಗಳ ಹಾರಾಟಕ್ಕೆ ಏರ್ಪೋಟ್ ಎಂಡಿ ಹರಿಮಾರನ್, ಟರ್ಮಿನಲ್ 2 ಹೆಡ್ ಸಂಪ್ರೀತ್ ಕೋಟ್ಯಾನ್ ಮತ್ತು ಪಿಆರ್​ಒ ಗಾಯತ್ರಿ ಚಾಲನೆ ನೀಡಿದ್ದಾರೆ. ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿದಿದೆ. ಈ ಮೂಲಕ ಅಂತಾರಾಷ್ಟ್ರೀಯ ವಿಮಾನಗಳು ಹಾಗೂ ದೇಶಿ ವಿಮಾನಗಳು ಇನ್ಮುಂದೆ ಟರ್ಮಿನಲ್‌ 2ನಿಂದ ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಆಗಲಿದೆ.

ಇನ್ನು, ಟರ್ಮಿನಲ್-1 ಅನ್ನ ದೇಶಿಯ ವಿಮಾನಗಳ‌ ಹಾರಾಟಕ್ಕೆ ಮೀಸಲಿಡಲಾಗಿದೆ. ಮೊದಲು ಟರ್ಮಿನಲ್ 2 ವಿಮಾನ ಸೌದಿ ಕಡೆ ಪ್ರಯಾಣ ಬೆಳಸಿದೆ. ಇನ್ನು ಸೌದಿಯ ಜದ್ದಾನಿಂದ ಬಂದಿಳಿದ ಪ್ರಯಾಣಿಕರಿಗೆ ಇಲ್ಲಿನ ಏರ್ಪೋರ್ಟ್ ಸಿಬ್ಬಂದಿ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಮೊದಲ ವಿದೇಶಿ ವಿಮಾನದಲ್ಲಿ 212 ಜನ ಪ್ರಯಾಣಿಕರು ಸಿಲಿಕಾನ್​ ಸಿಟಿಗೆ ಆಗಮಿಸಿದ್ದಾರೆ. ಆಗಸ್ಟ್​ 31ರಿಂದಲೇ ಟರ್ಮಿನಲ್​ 2ನಲ್ಲಿ ಅಂತರಾಷ್ಟ್ರೀಯ ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದ್ರೆ, ತಾಂತ್ರಿಕ ಅಡೆತಡೆ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾಗಿ ತಡವಾಗಿ ಅಂದ್ರೆ ಇಂದಿನಿಂದ ಇಂಟರ್​ನ್ಯಾಷನಲ್ ಫ್ಲೈಟ್ಸ್ ಹಾರಾಟ ಆರಂಭವಾಗಿದೆ.

ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ 2 ಅನ್ನ ಟರ್ಮಿನಲ್ ಇನ್​ ದಿ ಗಾರ್ಡನ್ ಎಂದು ಕರೆಯಲಾಗ್ತಾಯಿದೆ. ಈ ಟರ್ಮಿನಲ್​​​ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ತಳಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ. ಇನ್ನು 2 ಲಕ್ಷ 55 ಸಾವಿರದ 661 ಚದರ ಮೀಟರ್​ನ ನೂತನ ಟರ್ಮಿನಲ್-2ನಲ್ಲಿ ಪ್ರತ್ಯೇಕ ವಿಮಾನ ಆಗಮ‌ನ ಹಾಗೂ ನಿರ್ಗಮನದ 2 ಹಂತಗಳನ್ನು ಹೊಂದಿದ್ದು, 5ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಕೂಡ ಇದೆ.

ವಿಶೇಷ ಅಂದ್ರೆ, ಕಳೆದ ವರ್ಷ ನವೆಂಬರ್​​ನಲ್ಲಿ ಪ್ರಧಾನಿ ಮೋದಿ 5 ಸಾವಿರ ಕೋಟಿ ‌ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ 2 ಅನ್ನ ಉದ್ಘಾಟಿಸಿದ್ರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಿರೀಕ್ಷೆಯಂತೆ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಜನರು ಈ ವ್ಯವಸ್ಥೆಯನ್ನ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಟರ್ಮಿನಲ್-2ನಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟ; ಕಣ್ಣು ಕುಕ್ಕುವಂತಿದೆ ಇದರ ಸೌಂದರ್ಯ..

https://newsfirstlive.com/wp-content/uploads/2023/09/bng-t2-2.jpg

Load More