/newsfirstlive-kannada/media/post_attachments/wp-content/uploads/2024/11/tagaru2.jpg)
ದಾವಣಗೆರೆ: ಅದು ಅಂತಿಂಥಾ ಟಗರಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಟಗರು. ಆದ್ರೆ, ಅದೇ ಟಗರಿನ ಅಗಲಿಕೆಯಿಂದ ಇದೀಗ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಧರ್ಮನಿಗೆ ತಂದೆಯಿಂದ ಹೆಮ್ಮೆಯ ಮಾತು; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/11/tagaru.jpg)
ಹೌದು, ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರಘು ಎಂಬುವವರಿಗೆ ಸೇರಿದ ಕಾಳಿ ಟಗರು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದೆ. ಈ ಕಾಳಿ ಟಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. 8 ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಟಗರು ಮೆರೆದಿತ್ತು. ಹೋದ ಕಡೆ ಸೋಲನ್ನೇ ಕಾಣದ ಟಗರು, ಎರಡು ಬುಲೆಟ್ ಸೇರಿದಂತೆ 6 ಬೈಕ್​​ ಗೆದ್ದಿತ್ತು.
/newsfirstlive-kannada/media/post_attachments/wp-content/uploads/2024/11/tagaru1.jpg)
ವಿಶೇಷ ಅಂದ್ರೆ ಕಾಳಿಗೆ 10 ಲಕ್ಷ ಕೊಡುವುದಾಗಿ ಕೇಳಿದ್ರು ಕಾಳಿಯನ್ನ ಮಾರಿರಲಿಲ್ಲ. ಇದೀಗ ಇದೇ ಕಾಳಿ ಟಗರು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದೆ. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳನ್ನು ಅಗಲಿದೆ. ಇನ್ನು ಈ ಟಗರಿನ ಮಾಲೀಕ ರಘು ಮನೆ ಮಗನಂತಿದ್ದ ಟಗರಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇನ್ನೈ ಕಾಳಿ ಟಗರು ಸಾವಿಗೆ ಗ್ರಾಮದ ಜನರು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us