ಉತ್ತರಹಳ್ಳಿ ಕ್ಷೇತ್ರಕ್ಕೆ ನಡೆದ ಮೊದಲ ಉಪಚುನಾವಣೆಯಲ್ಲಿ ಗೆಲುವು
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಮುಂತಾದವರೊಂದಿಗೆ ಜೈಲುವಾಸ
ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದಾಗ ಡಿಸಿಎಂಯಾಗಿ ಕಾರ್ಯ ನಿರ್ವಹಣೆ
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದು ಬಂದಿದೆ. ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿಗೆ ಹೊಸ ಚೈತನ್ಯ ತುಂಬಲು ಸಿದ್ಧತೆ ನಡೆಸಿದ ಹೈಕಮಾಂಡ್ ಕೊನೆಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿದೆ. ಆರ್. ಅಶೋಕ್ ಅಧಿಕೃತವಾಗಿ ವಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದು, ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರು ಬೆಂಗಳೂರು ರಾಜಕೀಯ ವಲಯದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 66 ವರ್ಷದ ಆರ್.ಅಶೋಕ್ ಅವರು ಮೈಸೂರು ಭಾಗದ ಒಕ್ಕಲಿಗ ಸಮುದಾಯದಲ್ಲಿ ಪ್ರಮುಖ ನಾಯಕರು. ಅಶೋಕ್ ಅವರು ಬರೋಬ್ಬರಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ವಿ.ವಿ.ಪುರಂ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಆರ್. ಅಶೋಕ್ ಅವರು ಕಾಲೇಜಿನಲ್ಲಿ ಕಬಡ್ಡಿ ಚಾಂಪಿಯನ್ ಆಗಿ ಹೆಸರು ಮಾಡಿದ್ದರು. 1970ರ ದಶಕದಲ್ಲಿ ಸಂಘ ಪರಿವಾರದತ್ತ ಆಕರ್ಷಿತರಾದ ಅಶೋಕ್ ಅವರು ಬಾಲ್ಯದಿಂದಲೇ ಆರ್‌ಎಸ್ಎಸ್ ಜೊತೆ ಉತ್ತಮ ನಂಟು ಹೊಂದಿದ್ದಾರೆ. ಮುಂದೆ ಬಿಜೆಪಿಯೊಂದಿಗೆ ಗುರುತಿಸಿಕೊಂಡ ಆರ್.ಅಶೋಕ್ ಅವರು ರಾಜಕೀಯದ ಮುನ್ನೆಲೆಗೆ ಬಂದಿದ್ದಾರೆ. 1975ರಿಂದ 1977ರವರೆಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಶೋಕ್ ಅವರು ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಮುಂತಾದವರೊಂದಿಗೆ ಜೈಲುವಾಸ ಅನುಭವಿಸಿದ್ದಾರೆ.
ಆರ್. ಅಶೋಕ್ ಚುನಾವಣೆಯ ಹಾದಿ
1997ರಲ್ಲಿ ಉತ್ತರಹಳ್ಳಿ ಕ್ಷೇತ್ರಕ್ಕೆ ನಡೆದ ಮೊದಲ ಉಪಚುನಾವಣೆಯಲ್ಲಿ ಗೆಲುವು
ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರವು ಕರ್ನಾಟಕದ ಅತಿ ದೊಡ್ಡ ಕ್ಷೇತ್ರವಾಗಿತ್ತು
1999 ಹಾಗೂ 2004ರಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆ
ಬಿಜೆಪಿಯ ಯುವ ಘಟಕದೊಂದಿಗೆ ಗುರುತಿಸಿಕೊಂಡಿದ್ದವರು ಆರ್.ಅಶೋಕ್
2008ರಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು
2012 ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದಾಗ ಡಿಸಿಎಂಯಾಗಿ ಕಾರ್ಯನಿರ್ವಹಣೆ
ಡಿಸಿಎಂ ಜೊತೆಗೆ ಸಾರಿಗೆ & ಗೃಹ ಇಲಾಖೆಗಳ ಜವಾಬ್ದಾರಿ ನಿಭಾಯಿಸಿದ ಅಶೋಕ್
2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಂದಾಯ, ಮುಜರಾಯಿ ಖಾತೆ ಹೊಣೆ
2018ರಲ್ಲಿ ಆರ್. ಅಶೋಕ್ ಪದ್ಮನಾಭನಗರದಿಂದ ಶಾಸಕರಾಗಿ ಮತ್ತೆ ಆಯ್ಕೆ
2021ರಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವ ಖಾತೆ ಹೊಣೆ
2023ರ ವಿಧಾನಸಭಾ ಚುನಾವಣೆಯಲ್ಲಿ 7ನೇ ಬಾರಿ ಶಾಸಕರಾಗಿ ಆಯ್ಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ