/newsfirstlive-kannada/media/post_attachments/wp-content/uploads/2024/08/DARSHAN-GANG-DEPART.jpg)
ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸದ್ಯ ಮಧ್ಯಂತರ ಜಾಮೀನಿನ ಮೇಲೆ ಆಚೆ ಇರುವ ಆರೋಪಿ ದರ್ಶನ್​ ತೂಗುದೀಪ್ ಹಾಗೂ ಉಳಿದ ಆರೋಪಿಗಳಿ​ಗೆ ಮತ್ತಷ್ಟು ಸಂಕಷ್ಟ ಕಾದಿದೆಯಾ ಎನ್ನುವ ಅನುಮಾನಗಳು ಮೂಡುತ್ತಿವೆ. ಸದ್ಯ ತನಿಖಾಧಿಕಾರಿಗಳು 17 ಆರೋಪಿಗಳ ಹಣಕಾಸಿನ ಮೂಲದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬ್ಯಾಂಕ್ ಮ್ಯಾನೇಜನರ್​ಗಳಿಂದ ಹಣಕಾಸಿನ ಮಾಹಿತಿ ಸಂಗ್ರಹವಾಗುತ್ತಿದೆ/
ಡಿ-ಗ್ಯಾಂಗ್ ಬ್ಯಾಂಕ್​ ಡೀಟೆಲ್ಸ್!
ರೇಣುಕಾಸ್ವಾಮಿ ಕೊಲೆ ಕೇಸ್​ನ 17 ಆರೋಪಿಗಳ ಹಣಕಾಸು ಮಾಹಿತಿಯನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಬೆಂಗಳೂರಿನ 7 ಬ್ಯಾಂಕ್ ಮ್ಯಾನೇಜರ್​ಗಳನ್ನು ಈಗಾಗಲೇ ಸಂಪರ್ಕಿಸಿರುವ ತಂಡ ಮಾಹಿತಿ ಸಂಗ್ರಹ ಮಾಡಿದೆ. ಐಡಿಎಫ್​ಸಿ ಫಸ್ಟ್​ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್​ಡಿಎಫ್​ಸಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್​, ಕೆನರಾ ಬ್ಯಾಂಕ್, ಎಸ್​ಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳಿಂದ ಮಾಹಿತಿಯನ್ನು ಸಂಗ್ರಹಿಸಿರುವ ತನಿಖಾಧಿಕಾರಿಗಳು ಮಾಗಡಿರೋಡ್​​ನ ಒಂದು ಬ್ಯಾಂಕ್​ನಿಂದ ಕೆವೈಸಿ ಮಾಹಿತಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ:ಹೇ.. ಬಾಯ್ಬಿಟ್ರೆ ಹುಷಾರ್; ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿ ತಗ್ಲಾಕೊಂಡ ದರ್ಶನ್ ಬಾಡಿಗಾರ್ಡ್!
ಇ ಮೇಲ್ ಮೂಲಕ ಎ1 ನಿಂದ ಎ14 ವರೆಗಿನ ಆರೋಪಿಗಳ ಕೆವೈಸಿ ಮಾಹಿತಿ ಪಡೆಯಲಾಗಿದ್ದು. ಮೊಬೈಲ್ ನಂಬರ್, ಆಧಾರ್ ಕಾರ್ಡ್ ಲಿಂಕ್ ಆಗಿರೋ ಖಾತೆಗಳ ವಿವರವನ್ನು ಪಡೆದಿದ್ದಾರೆ. ಬ್ಯಾಂಕ್ ಖಾತೆಯ ವಿವರ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಅದರಂತೆ ಬ್ಯಾಂಕ್​ಗಳ ಮೂಲಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us