newsfirstkannada.com

ಪಾಕಿಸ್ತಾನದ ಬಾಬರ್ ಅಜಂ ಜೊತೆ ಆಡಲು ರೆಡಿ ಆಗ್ತಿದ್ದಾರೆ CSK ಸ್ಟಾರ್​ ಬೌಲರ್​…!

Share :

24-05-2023

    ಕೊಲಂಬೋ ಸ್ಟ್ರೈಕರ್ಸ್ ತಂಡ ಇಬ್ಬರನ್ನು ಖರೀದಿಸಲು ಪ್ಲಾನ್

    2023ರ ಐಪಿಎಲ್​ನಲ್ಲಿ 17 ವಿಕೆಟ್ ಪಡೆದಿರುವ ಪತಿರಣ

    ಪತಿರಣಗೆ ಎಷ್ಟು ಲಕ್ಷ ರೂಪಾಯಿ ನೀಡಿ ಖರೀದಿಸಿದೆ CSK..?

ಐಪಿಎಲ್​-2023 ಅಂತಿಮಘಟಕ್ಕೆ ಬಂದು ನಿಂತಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್ ಪ್ರವೇಶ ಮಾಡಿದೆ. ಈ ತಂಡವು ಫೈನಲ್ ಪ್ರವೇಶ ಮಾಡಲು ಮತೀಶ ಪತಿರಣ ಕೊಡುಗೆ ಸಾಕಷ್ಟಿದೆ.

ಶ್ರೀಲಂಕದ ಈ ಬೌಲರ್​, ಈಗ ಸಿಎಸ್​ಕೆ ತಂಡದ ಸ್ಟಾರ್​ ಬೌಲರ್. ವಿಷಯ ಅದಲ್ಲ, ವಿಶ್ವದ ಸ್ಟಾರ್​​ ಆಟಗಾರ ಬಾಬರ್ ಅಜಂ ಜೊತೆ ಪತಿರಣ ಆಡಲು ಸಜ್ಜಾಗಿದ್ದಾರೆ. ಶ್ರೀಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಮತೀಶ ಪತಿರಣ-ಬಾಬರ್ ಒಂದೇ ತಂಡದ ಪರ ಆಡಲು ಸಜ್ಜಾಗಿದ್ದಾರೆ.

ಕೊಲಂಬೋ ಸ್ಟ್ರೈಕರ್ಸ್ ತಂಡ ಇಬ್ಬರನ್ನು ಖರೀದಿಸಲು ಒಲವು ತೋರಿದೆ. ಜುಲೈನಲ್ಲಿ ಆಕ್ಷನ್ ನಡೆಯಲಿದ್ದು, ಇಬ್ಬರನ್ನ ಬುಟ್ಟಿಗೆ ಹಾಕಿಕೊಳ್ಳಲು ಫ್ರಾಂಚೈಸಿ ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ನಲ್ಲಿ ಆರಂಭಗೊಳ್ಳುವ ಲಂಕಾ ಪ್ರೀಮಿಯರ್ ಲೀಗ್​​ನಲ್ಲಿ ಬಾಬರ್-ಪತಿರಣ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ವರ್ಷದ ಐಪಿಎಲ್​ನಲ್ಲಿ ಪತಿರಣ ಸಿಎಸ್​ಕೆ ಪರ ಒಟ್ಟು 11 ಪಂದ್ಯಗಳನ್ನು ಆಡಿದ್ದಾರೆ. 17 ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಿಎಸ್​​ಕೆ ಅವರನ್ನು 20 ಲಕ್ಷ ನೀಡಿ ಖರೀದಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಪಾಕಿಸ್ತಾನದ ಬಾಬರ್ ಅಜಂ ಜೊತೆ ಆಡಲು ರೆಡಿ ಆಗ್ತಿದ್ದಾರೆ CSK ಸ್ಟಾರ್​ ಬೌಲರ್​…!

https://newsfirstlive.com/wp-content/uploads/2023/05/PATIRANA.jpg

Load More