newsfirstkannada.com

ಕೊನೆ ಓವರ್​ನಲ್ಲಿ CSKಕೆ ಕಪ್ ಗೆಲ್ಲಲು 13 ರನ್​ ಬೇಕಿತ್ತು.. ಜಡ್ಡು ತಂದ್ಕೊಟ್ಟ ‘ಥ್ರಿಲ್ಲಿಂಗ್ ವಿಕ್ಟರಿ’ ಹೇಗಿತ್ತು..?

Share :

30-05-2023

    ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಿಎಸ್​ಕೆ

    ಡಕೌಟ್ ಆಗಿ ಬೇಸರಿಂದ ಹೊರನಡೆದ ಕ್ಯಾಪ್ಟನ್ ಧೋನಿ

    ತಮ್ಮ ಕೊನೆ ಪಂದ್ಯದಲ್ಲಿ ರಾಯುಡು ಅಮೋಘ ಆಟ

ಅಭಿಮಾನಿಗಳ ಕಣ್ಣೀರು ವ್ಯರ್ಥ ಆಗಲಿಲ್ಲ. ಯೆಲ್ಲೋ ಆರ್ಮಿ ಕಪ್ ಗೆಲ್ಲಬೇಕೆಂಬ ಪ್ರಾರ್ಥನೆ ಕೊನೆಗೂ ಫಲಿಸಿತು. ಗುಜರಾತ್ ಟೈಟನ್ಸ್ ಎದುರಿನ ಹೈ-ಥ್ರಿಲ್ಲಿಂಗ್ ಗೇಮ್​​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಐಪಿಎಲ್​ ಕಿರೀಟ ಮುಡಿಗೇರಿಸಿಕೊಂಡಿತು. ಹಳದಿ ಆರ್ಮಿಯ ಹಿಸ್ಟಾರಿಕಲ್ ವಿಕ್ಟರಿ ಸೆಲೆಬ್ರೇಷನ್ ಹೇಗಿತ್ತು ಅನ್ನೋ ವಿವರ ಇಲ್ಲಿದೆ.

ಇನ್ನು ಚೆನ್ನೈ ತಂಡ ಬೃಹತ್​​​​ ಟಾರ್ಗೆಟ್ ಬೆನ್ನಟ್ಟಿದ ಆರಂಭದಲ್ಲೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಎರಡುವರೆ ತಾಸಿನ ಬಳಿಕ ಆರಂಭಗೊಂಡಿದ್ದರಿಂದ ಪಂದ್ಯವನ್ನ 15 ಓವರ್​​​​​​​​ಗೆ ನಿಗದಿ ಪಡಿಸಿ, ಡಿಎಲ್​​​​​​​​​ಎಸ್​​​ ರೂಲ್ಸ್​​ ಅನ್ವಯ ಚೆನ್ನೈಗೆ 171 ರನ್ ಗುರಿ ನೀಡಲಾಯ್ತು.

ಸಾಲಿಡ್​​ ಓಪನಿಂಗ್​​ ಒದಗಿಸಿದ ಗಾಯಕ್ವಾಡ್​​​-ಕಾನ್ವೆ
ಚೆನ್ನೈ ಮುಂದೆ ಬಿಗ್​ ಟಾರ್ಗೆಟ್ ಇದ್ದಿದ್ರಿಂದ ಚೆನ್ನೈ ಓಪನರ್ಸ್ ದಂಡಂ ದಶಗುಣಂ ಆಟಕ್ಕೆ ಮುಂದಾದ್ರು. ಪರಿಣಾಮ ಫಸ್ಟ್​ ನಾಲ್ಕು ಓವರ್​​ಗಳಲ್ಲೇ ಹಾಫ್​​ಸೆಂಚುರಿ ಪೇರಿಸಿದ್ರು. ಇದೇ ಹೊತ್ತಲ್ಲಿ ಗಾಯಕ್ವಾಡ್​​​ 26 ಹಾಗೂ ಡೇಂಜರಸ್​​​ ಕಾನ್ವೆ ಆಟ 47 ರನ್​​ಗೆ ಸ್ಟಾಪ್​ ಆಯ್ತು. ಬಳಿಕ ಕ್ರೀಸ್​ಗಿಳಿದ ರಹಾನೆ ಪಟಪಟನೇ 2 ಬೌಂಡ್ರಿ, 2 ಸಿಕ್ಸರ್​ ಸಿಡಿಸಿ ಔಟಾದ್ರು. ಆಗ ತಂಡದ ಮೊತ್ತ 117..ಕೊನೆ 3 ಓವರ್​​ನಲ್ಲಿ ಚೆನ್ನೈ ಗೆಲ್ಲಲು 38 ರನ್​ ಬೇಕಿತ್ತು.

13ನೇ ಓವರ್​​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್​
ಪಂದ್ಯದ 13ನೇ ಓವರ್​​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​​ ಸಿಗ್ತು. ವಿದಾಯ ಪಂದ್ಯದಲ್ಲಿ ಅಂಬಟಿ ರಾಯುಡು ರಗಡ್​ ಆಟವಾಡಿದ್ರು. ಇದೇ ಓವರ್​​ನಲ್ಲಿ ಎರಡು ಸಿಕ್ಸ್ ಹಾಗೂ 1 ಬೌಂಡ್ರಿ ಸಹಿತ 19 ರನ್ ಬಾರಿಸಿ ಹೊರನಡೆದ್ರು.

ತಲಾ ಧೋನಿ ಡಕೌಟ್​​​.. ಸ್ಟೇಡಿಯಂ ಸ್ತಬ್ಧ..!
ಇದೇ ಓವರ್​​​ನಲ್ಲಿ 5ನೇ ಎಸೆತದಲ್ಲಿ ಬಿಗ್​​​ ಶಾಕ್​​​ವೊಂದು ಕಾದಿತ್ತು. ಅದೇನಂದ್ರೆ ತಲಾ ಧೋನಿ ಆಡಿದ ಫಸ್ಟ್​ ಬಾಲ್​​ನಲ್ಲಿ ಡಕೌಟಾದ್ರು. ಆಗ ಸ್ಟೇಡಿಯಂ ಒಂದು ಕ್ಷಣ ಪಿನ್​​ಡ್ರಾಪ್​​ ಸೈಲೆಂಟ್ ಆಯ್ತು.

ಕೊನೆ ಓವರ್​​ನಲ್ಲಿ ಜಡ್ಡು ಮ್ಯಾಜಿಕ್
ಒಂದೆಡೆ ಮಾಹಿ ಔಟಾಗ್ತಿದ್ದಂತೆ ಚೆನ್ನೈ ಒತ್ತಡಕ್ಕೆ ಸಿಲುಕಿತ್ತು. ಕಪ್​ ಗೆಲ್ಲಲು ಚೆನ್ನೈ ಲಾಸ್ಟ್ ಓವರ್​​​ನಲ್ಲಿ 13 ರನ್​​ ಅಗತ್ಯವಿತ್ತು. ಆದ್ರೆ ಫಸ್ಟ್​​ ನಾಲ್ಕು ಬಾಲ್​​ನಲ್ಲಿ ಕೇವಲ 3 ರನ್​​ ಬಂದವು. ಆದ್ರೆ ಕೊನೆ ಎರಡು ಎಸೆತದಲ್ಲಿ ಆಲ್​ರೌಂಡರ್ ಜಡೇಜಾ ಸಿಕ್ಸರ್ ಹಾಗೂ ಬೌಂಡ್ರಿ ಸಿಡಿಸಿ ಚೆನ್ನೈಗೆ 5 ವಿಕೆಟ್​ಗಳ ರಣರೋಚಕ ವಿಕ್ಟರಿ ತಂದುಕೊಟ್ರು. ಈ ಐತಿಹಾಸಿಕ ಗೆಲುವಿನೊಂದಿಗೆ ಚೆನ್ನೈ ತಂಡ ಐಪಿಎಲ್​​ ಹಿಸ್ಟರಿಯಲ್ಲಿ 5ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಆ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಕೊನೆ ಓವರ್​ನಲ್ಲಿ CSKಕೆ ಕಪ್ ಗೆಲ್ಲಲು 13 ರನ್​ ಬೇಕಿತ್ತು.. ಜಡ್ಡು ತಂದ್ಕೊಟ್ಟ ‘ಥ್ರಿಲ್ಲಿಂಗ್ ವಿಕ್ಟರಿ’ ಹೇಗಿತ್ತು..?

https://newsfirstlive.com/wp-content/uploads/2023/05/JADEJA.jpg

Load More