ಆ್ಯಕ್ಚುಲಿ ಕೊಹ್ಲಿ ಗುಣ ಇದಕ್ಕೆ ಇಷ್ಟವಾಗೋದು!
ಆಫ್ಫೀಲ್ಡ್ನಲ್ಲೂ ಯುವಕರಿಗೆ ಕೊಹ್ಲಿ ಪ್ರೋತ್ಸಾಹ
ಶುಭಮನ್ ಗಿಲ್ಗೆ ವಿರಾಟ್ ವಿಶ್ವ ಸಂದೇಶ..!
ಮಾಸ್ಟರ್ & ಮೆಂಟರ್ ಧೋನಿ ಬಗ್ಗೆ ನಿಮಗೆ ಗೊತ್ತೇ ಇದೆ. ಮ್ಯಾಚ್ ಮುಗಿದ್ಮೇಲೆ ಎದುರಾಳಿ ತಂಡಗಳ ಆಟಗಾರರ ಪಾಲಿಗೆ ಮಹೇಂದ್ರ ಮೇಷ್ಟ್ರಾಗ್ತಾರೆ. ಕಳೆದ ಕೆಲ ಸೀಸನ್ನಿಂದ ಇದನ್ನ ನೋಡಿದ್ದೇವೆ. ಇದೀಗ ಈ ವಿಚಾರದಲ್ಲಿ ವಿರಾಟ್ ಕೊಹ್ಲಿ, ಧೋನಿಯನ್ನೇ ಮೀರಿಸಿ ಒಂದೆಜ್ಜೆ ಮುಂದೆ ಹೋಗಿದ್ದಾರೆ.
ಐಪಿಎಲ್.. ಜಸ್ಟ್ ಆಟಗಾರರ ಜೇಬು ತುಬ್ಬಿಸುವ ಖಜಾನೆ ಮಾತ್ರವಲ್ಲ. ಜ್ಞಾನ, ಪ್ರತಿಭೆಯನ್ನ ಅನಾವರಣಗೊಳಿಸುವ ವೇದಿಕೆಯೂ ಕೂಡ.. ದೇಶ ವಿದೇಶಿ ಆಟಗಾರರ ಸ್ನೇಹಕ್ಕೆ ಕೊಂಡಿಯೂ ಆಗಿರೋ ಐಪಿಎಲ್, ದಿಗ್ಗಜ ಆಟಗಾರರಿಂದ ಕಲಿಯುವಂತ ಸುವರ್ಣಾವಕಾಶ ಒದಗಿಸಿ ಕೊಡುತ್ತೆ. ದಿಗ್ಗಜರೇ, ಯುವಕರಿಗೆ ಮಾರ್ಗದರ್ಶನ ನೀಡಿ ಮಾಸ್ಟರ್ಗಳಾಗಿರೋ ಹಲವು ಉದಾಹರಣೆಗಳು ನಮ್ ಕಣ್ಮುಂದೆಯೇ ಇವೆ.
ಸಾಮಾನ್ಯವಾಗಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ದಿಗ್ಗಜರು, ಯುವ ಆಟಗಾರರಿಗೆ ಟಿಪ್ಸ್ ನೀಡ್ತಾರೆ. ಪಂದ್ಯ ಮುಗಿದ್ಮೇಲೆ ಎದುರಾಳಿ ತಂಡಗಳಲ್ಲಿನ ಯುವ ಆಟಗಾರರ ಗೊಂದಲಗಳಿಗೆ ಪರಿಹಾರ ನೀಡ್ತಾರೆ. ಅಷ್ಟೇ ಅಲ್ಲ.. ಯುವ ಕ್ರಿಕೆಟಿಗರ ಸಕ್ಸಸ್ಗಾಗಿ ಪ್ರೋತ್ಸಾಹವನ್ನೂ ನೀಡ್ತಾರೆ. ಇದು ಕಾಮನ್ ಆಗಿ ನಾವ್ ಆನ್ಫೀಲ್ಡ್ನಲ್ಲಿ ನೋಡ್ತಾನೆ ಇದ್ದೇವೆ. ಆದ್ರೆ ಕಿಂಗ್ ಕೊಹ್ಲಿ ಮಾತ್ರ, ಈ ವಿಚಾರದಲ್ಲಿ ನೆಕ್ಸ್ಟ್ ಸ್ಟೆಪ್ ತೆಗೆದುಕೊಂಡಿದ್ದಾರೆ.

ಇಷ್ಟು ದಿನ ಜಸ್ಟ್ ಆನ್ಫೀಲ್ಡ್ನಲ್ಲಿ ಅಥವಾ ಪಂದ್ಯ ಮುಗಿದ್ಮೇಲೆ ಮಾತ್ರನೇ ಮೆಂಟರ್ ಆಗಿ ಕಾಣಿಸಿಕೊಳ್ತಿದ್ದ ವಿರಾಟ್ ಕೊಹ್ಲಿ, ಈಗ ಆಫ್ಫೀಲ್ಡ್ನಿಂದಲೂ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡ್ತಿದ್ದಾರೆ. ಆಟಗಾರರ ಪ್ರದರ್ಶನಕ್ಕೆ ಶಹಬ್ಬಶ್ ಗಿರಿ ನೀಡ್ತಾ ಯುವಕರ ಆತ್ಮ ವಿಶ್ವಾಸ ದುಪ್ಪಟ್ಟಾಗಿಸುತ್ತಿದ್ದಾರೆ.
ಆನ್ಫೀಲ್ಡ್ನಲ್ಲಿ ಯುವ ಆಟಗಾರರ ಅದ್ಭುತ ಆಟಕ್ಕೆ ಬೆನ್ನುತ್ತಟ್ಟುತ್ತಿದ್ದ ವಿರಾಟ್, ಈಗ ಆಫ್ಫೀಲ್ಡ್ನಿಂದಲೂ ಮ್ಯಾಚ್ ನೋಡ್ತಾ ಯುವ ಕ್ರಿಕೆಟಿಗರ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದು ಯಾವ ಮಟ್ಟಕ್ಕೆ ಎಂದ್ರೆ, ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಜಸ್ಟ್ ಕಮರ್ಶಿಯಲ್ ಆ್ಯಂಡ್ ಪರ್ಸನಲ್ ವಿಚಾರಗಳನ್ನಷ್ಟೇ ಹಂಚಿಕೊಳ್ಳುತ್ತಿದ್ದ ಕಿಂಗ್ ಕೊಹ್ಲಿ, ಈಗ ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆಯ ಪೋಸ್ಟ್ ಮಾಡುತ್ತಾ ಹುರಿದುಂಬಿಸುತ್ತಿದ್ದಾರೆ.
ಸಹಾ-ಯಶಸ್ವಿ ಆಟಕ್ಕೆ ಬೇಷ್ ಎಂದಿದ್ದ ಕಿಂಗ್..!
ಲಕ್ನೋ ವಿರುದ್ಧದ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಕಟ್ಟಿದ್ದ ಅದ್ಬುತ ಇನ್ನಿಂಗ್ಸ್ಗೆ ಮೆಚ್ಚುಗೆ ಸೂಚಿಸಿದ್ದ ವಿರಾಟ್, ವಾಟ್ ಎ ಪ್ಲೇಯರ್ ಎಂದು ಶ್ಲಾಘಿಸಿದ್ದರು. ಅಷ್ಟೇ ಅಲ್ಲ. ಇದೇ ಪಂದ್ಯದಲ್ಲಿ ರಶೀದ್ ಖಾನ್ ಹಿಡಿದಿದ್ದ ಕ್ಯಾಚ್ ಬಗ್ಗೆಯೂ ಹಾಡಿಹೊಗಳಿದ್ದ ಕೊಹ್ಲಿ, ಇಂಥಹ ಕ್ಯಾಚ್ ಕಂಡಿದ್ದೇ ಇಲ್ಲ ಎಂದು ಕೊಂಡಾಡಿದ್ದರು.
Virat Kohli – Face of world cricket.
He is their for youngsters. pic.twitter.com/AtbY6dTsFf
— Johns. (@CricCrazyJohns) May 18, 2023
ಇಷ್ಟೇ ಅಲ್ಲ.! ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಯಶಸ್ವಿ ಜೈಸ್ವಾಲ್ ಬೆಂಕಿ-ಬಿರುಗಾಳಿ ಅರ್ಧಶತಕದ ಸಿಡಿತಕ್ಕೆ ಮನಸೋತಿದ್ದ ಕೊಹ್ಲಿ, ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ನಾನು ನೋಡಿದ ಬೆಸ್ಟ್ ಬ್ಯಾಟಿಂಗ್ ಇದು..ವಾಟ್ ಎ ಟ್ಯಾಲೆಂಟ್, ಎಂದು ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ.. ನಂತರ ಆರ್ಸಿಬಿ ಎದುರಿನ ಪಂದ್ಯದಲ್ಲಿ ವೈಫಲ್ಯ ಅನುಭವಿದ ಬಳಿಕ ಯಶಸ್ವಿ ಜೈಸ್ವಾಲ್ ಬಳಿ ತೆರಳಿ ಬ್ಯಾಟಿಂಗ್ ಟಿಪ್ಸ್ ನೀಡಿದ್ರು.
ಶುಭಮನ್ ಗಿಲ್ಗೆ ವಿರಾಟ್ ವಿಶ್ವ ಸಂದೇಶ..!
ಕೊಲ್ಕತ್ತಾ ನೈಟ್ ರೈಡರ್ಸ್ ಎದುರು ರೈಡ್ ಮಾಡಿದ್ದ ಶುಭಮನ್, ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಅಬ್ಬರಿಸಿದ್ದರು. ಗಿಲ್ರ ಕ್ಲಾಸ್ ಬ್ಯಾಟಿಂಗ್ಗೆ ಶುಭಹಾರೈಸಿದ್ದ ಕೊಹ್ಲಿ, ಎಲ್ಲಿ ಸಾಮರ್ಥ್ಯವಿದೆಯೋ ಅಲ್ಲಿ ಶುಭ್‌ಮನ್ ಗಿಲ್ ಇದ್ದಾರೆ. ಟೀಮ್ ಇಂಡಿಯಾದ ಮುಂದಿನ ತಲೆಮಾರು ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ರು. ಇಷ್ಟು ದಿನ ಜಸ್ಟ್, ಆನ್ಫೀಲ್ಡ್ನಲ್ಲಿ ಮಾತ್ರವೇ ಯುವ ಆಟಗಾರರಿಗೆ ರೋಲ್ ಮಾಡೆಲ್ ಆಗಿ, ಮಾಸ್ಟರ್ ಆಗಿ ಬೆಂಬಲಕ್ಕೆ ನಿಲ್ತಿದ್ದ ವಿರಾಟ್, ಈಗ ಆಫ್ ದಿ ಫೀಲ್ಡ್ನಿಂದಲೂ ಆಟಗಾರರಿಗೆ ಪ್ರೋತ್ಸಾಹ ನೀಡೋ ಕೆಲಸಕ್ಕೆ ಕೈ ಹಾಕಿ ರಿಯಲ್ ಕಿಂಗ್ ಎನಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್