newsfirstkannada.com

×

ಕಪ್ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ಸಿಕ್ಕ ಕೋಟಿ ಕೋಟಿ ಹಣ ಎಷ್ಟು..?

Share :

Published May 30, 2023 at 9:17am

Update May 30, 2023 at 9:18am

    ಗುಜರಾತ್ ವಿರುದ್ಧ ರೋಚಕವಾಗಿ ಗೆದ್ದು ಬೀಗಿದ ಸಿಎಸ್​ಕೆ

    ಟೂರ್ನಿ ಪುರುಷೋತ್ತಮ ಪ್ರಶಸ್ತಿ ಗಿಲ್​​ ಪಾಲು, ಸಿಕ್ಕ ಹಣವೆಷ್ಟು?

    ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿದ ಸಿಎಸ್​ಕೆ

ಐದನೇ ಬಾರಿಗೆ ಐಪಿಎಲ್​ ಟ್ರೋಫಿಗೆ ಮುತ್ತಿಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮಾಡಿದ್ದ ದಾಖಲೆಯನ್ನು ಸರಿಗಟ್ಟಿದೆ. ಗುಜರಾತ್​ನಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಸಿಎಸ್​ಕೆ, ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ, ವಿಜಯೋತ್ಸವ ಆಚರಿಸಿತು.

ಪಂದ್ಯ ಗೆದ್ದ ಬಳಿಕ ಎರಡೂ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ವಿಶೇಷ ಅಂದರೆ ಟೂರ್ನಿ ಪುರುಷೋತ್ತಮ ಪ್ರಶಸ್ತಿಯು ಶುಬ್​ಮನ್ ಗಿಲ್ ಪಾಲಾಯ್ತು. ಬರೋಬ್ಬರಿ 40 ಲಕ್ಷ ರೂಪಾಯಿ ಹಣವನ್ನು ತಮ್ಮದಾಗಿಸಿಕೊಂಡರು. ಇನ್ನು ರನ್ನರ್ ಅಪ್ ಗುಜರಾತ್ ತಂಡಕ್ಕೆ ಬಹುಮಾನವಾಗಿ 12.5 ಕೋಟಿ ರೂಪಾಯಿ ನೀಡಲಾಯಿತು. ಹಾಗೆಯೇ ಚಾಂಪಿಯನ್ ಧೋನಿ ಬಳಗಕ್ಕೆ 20 ಕೋಟಿ ರೂಪಾಯಿ ಹಣ ನೀಡಲಾಗಿದೆ. 20 ಕೋಟಿ ಜೊತೆಗೆ ಟ್ರೋಫಿ ಸಿಎಸ್​ಕೆ ಪಾಲಾಗಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್​ ಕಪ್​ಗೆ ಮುತ್ತಿಟ್ಟಿತ್ತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಲು ಸಿಎಸ್​ಕೆ ಬರ್ತಿದ್ದಂತೆ ಮಳೆರಾಯ ಅಡ್ಡಿಯಾದ. ಕೊನೆಗೆ ಡಿಎಲ್​ಎಸ್​ (Duckworth–Lewis–Stern method) ಪ್ರಕಾರ, ಚೆನ್ನೈಗೆ ಗೆಲ್ಲಲು 15 ಓವರ್​ನಲ್ಲಿ 171 ರನ್​ ಬೇಕಿತ್ತು. ಸಿಎಸ್​ಕೆ ಈ ಗುರಿಯನ್ನು 15ನೇ ಓವರ್​ನ ಕೊನೆಯ ಬಾಲ್​ನಲ್ಲಿ ಮುಟ್ಟಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​, ಐದನೇ ಐಪಿಎಲ್​​ ಕಪ್​ ಎತ್ತಿ ಹಿಡಿಯಿತು. ಇದುವರೆಗೆ ಮುಂಬೈ ಇಂಡಿಯನ್ಸ್​ ಮಾತ್ರ ಐದು ಬಾರಿ ಐಪಿಎಲ್​ ಟ್ರೋಫಿ ಗೆದ್ದಿತ್ತು. ಈ ದಾಖಲೆಯನ್ನು ಸಿಎಸ್​​ಕೆ ಸರಿಗಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಕಪ್ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ಸಿಕ್ಕ ಕೋಟಿ ಕೋಟಿ ಹಣ ಎಷ್ಟು..?

https://newsfirstlive.com/wp-content/uploads/2023/05/CSK.jpg

Load More