/newsfirstlive-kannada/media/post_attachments/wp-content/uploads/2023/07/IPL2023.jpg)
ರಿಟೈನ್​, ರಿಲೀಸ್​ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 11 ಆಟಗಾರರನ್ನ ರಿಲೀಸ್ ಮಾಡಿದ್ರೆ, ಮುಂಬೈ ಮೆಗಾ ಡೀಲ್​ ಮಾಡಿದೆ. ಉಳಿದ ತಂಡಗಳೂ ಕೂಡ ಸಖತ್​ ಕ್ಯಾಲ್ಕ್ಯುಲೇಟೆಡ್​ ಆಗಿ ನಿರ್ಧಾರ ತೆಗೆದುಕೊಂಡಿವೆ. ಹಾಗಾದ್ರೆ, ಯಾರಿಗೆಲ್ಲಾ ಕೊಕ್​ ಕೊಟ್ಟಿವೆ. ಅನ್ನೋದರ ಕಂಪ್ಲೀಟ್​ ರಿಪೋರ್ಟ್​ ಇಲ್ಲಿದೆ.
ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ ಐಪಿಎಲ್ ಹಬ್ಬದ ಸದ್ದು ಜೋರಾಗಿದೆ. ಮಿನಿ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು, ರಿಟೇನ್​ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನ ಸಲ್ಲಿಸಿವೆ. ಅಳೆದು ತೂಗಿ ಬಲಾಡ್ಯರನ್ನ ಉಳಿಸಿಕೊಂಡಿರುವ ತಂಡಗಳು, ಕೆಲವರಿಗೆ ಅಚ್ಚರಿ ರೀತಿಯಲ್ಲಿ ಗೇಟ್​ಪಾಸ್ ನೀಡಿವೆ.
Here's the IPL 2024 Squad Summary ahead of the #IPL Player Auction ?? pic.twitter.com/FD8OO85g5M
— IndianPremierLeague (@IPL)
Here's the IPL 2024 Squad Summary ahead of the #IPL Player Auction 👇👇 pic.twitter.com/FD8OO85g5M
— IndianPremierLeague (@IPL) November 26, 2023
">November 26, 2023
ಮೊದಲು ರಿಟೈನ್​.. ಆಮೇಲೆ ಮೆಗಾ ಡೀಲ್​..​ ಕೊನೆ ಕ್ಷಣದಲ್ಲಿ ಬಿಗ್ ಟ್ವಿಸ್ಟ್.!
ನಿನ್ನೆಯ ರಿಟೈನ್​, ರಿಲೀಸ್​​ನ ಸೆಂಟರ್ ಆಫ್ ಅಟ್ರಾಕ್ಷನ್ ಗುಜರಾತ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ. ಮೊದಲು ಹಾರ್ದಿಕ್​ ಗುಜರಾತ್ ಟೈಟನ್ಸ್​ ತಂಡದ​ ರಿಟೈನ್​​ ಲಿಸ್ಟ್​ನಲ್ಲೇ ಕಾಣಿಸಿಕೊಂಡಿದ್ದರು. ನಾಯಕನಾಗಿಯೂ ಮುಂದುವರಿದಿದ್ರು. ಆದರೆ, ಕೊನೆ ಕ್ಷಣದಲ್ಲಿ ಎಲ್ಲಾ ಅದಲು ಬದಲಾಯ್ತು. ಎಲ್ಲಾ ಮುಗಿತು ಅಂತಾ ಅಂದುಕೊಂಡ್ರೆ, ಸಪರೇಡ್​ ಡೀಲ್​ ಮಾಡಿದ ಮುಂಬೈ ಹಾರ್ದಿಕ್​ನ ತೆಕ್ಕೆಗೆ ಸೆಳೆದುಕೊಂಡಿದೆ.
ಆರಂಭದಲ್ಲಿ ಗುಜರಾತ್​ನಲ್ಲೇ ಇದ್ದ ಹಾರ್ದಿಕ್, ಕೊನೆ ಕ್ಷಣದ ಮೆಗಾ ಡೀಲ್​ನಲ್ಲಿ ಮುಂಬೈ ಇಂಡಿಯನ್​ಗೆ​ ಜಂಪ್​ ಆದ್ರು. ಹಾರ್ದಿಕ್ ಆಗಮನಕ್ಕಾಗಿ ಕಾದಿದ್ದ ಮುಂಬೈ ಇಂಡಿಯನ್ಸ್​, ಜೋಫ್ರಾ ಆರ್ಚರ್ ಸಹಿತ ಬರೋಬ್ಬರಿ 11 ಮಂದಿಗೆ ಗೇಟ್​ಪಾಸ್ ನೀಡ್ತು.
ಮುಂಬೈ ರಿಲೀಸ್​ ಮಾಡಿದ ಆಟಗಾರರು
ಮುಂಬೈ ಇಂಡಿಯನ್ಸ್​ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಸೌತ್ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಡುವಾನ್ ಯಾನ್ಸೆನ್​​, ಜೈ ರಿಚರ್ಡಸನ್, ರಿಲೆ ಮೆರಿಡಿತ್, ಕ್ರಿಸ್ ಜೋರ್ಡನ್​ಗೆ ಗೇಟ್​ ಪಾಸ್​ ನೀಡಿದೆ. ದೇಶಿ ಕ್ರಿಕೆಟಿಗರಾದ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್​​ರನ್ನ ಕೈಬಿಟ್ಟಿದೆ.
ಚೆನ್ನೈ ಕಿಂಗ್ಸ್ ಸ್ಮಾರ್ಟ್​ ಮೂವ್.. ಶಾಕ್​ ಕೊಟ್ಟ ಕೆಕೆಆರ್​..!
ಆಟಗಾರರ ಬಿಡುಗಡೆ ವಿಚಾರದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಅದ್ಬುತ ನಡೆ ಅನುಸರಿಸಿದೆ. 26 ಆಟಗಾರರ ಪೈಕಿ 18 ಮಂದಿಯನ್ನ ಉಳಿಸಿಕೊಂಡಿರೋ ಯೆಲ್ಲೋ ಆರ್ಮಿ, 8 ಆಟಗಾರರಿಗೆ ಗೇಟ್​ಪಾಸ್ ನೀಡಿದೆ. ಕೊಲ್ಕತ್ತಾ ನೈಟ್​ ರೈಡರ್ಸ್, ಸ್ಟಾರ್​ ಆಲ್​ರೌಂಡರ್​ಗಳ ಸಹಿತ​ ಬರೋಬ್ಬರಿ 12 ಮಂದಿಗೆ ಶಾಕ್ ನೀಡಿದೆ.
ಚೆನ್ನೈ ರಿಲೀಸ್​ ಮಾಡಿದ ಆಟಗಾರರು
ಆಲ್​ರೌಂಡರ್​​ಗಳಾದ ಬೆನ್ ಸ್ಟೋಕ್ಸ್​, ಡ್ವೈನ್ ಪ್ರೊಟೋರಿಯಸ್ ಹಾಗೂ ಕೈಲ್ ಜೇಮಿಸನ್​ರನ್ನ ಚೆನೈ ಬಿಡುಗಡೆ ಮಾಡಿದೆ. ಇವರಲ್ಲದೆ ಭಾರತೀಯರಾದ ಆಕಾಶ್​ ಸಿಂಗ್, ಅಂಬಟಿ ರಾಯುಡು ಜೊತೆಗೆ ಭಗತ್ ವರ್ಮ, ಸುಭ್ರಾಂಶು ಸೇನಾಪತಿ, ಸಿಸಂದ ಮಗಲಾಗೆ ಕೊಕ್ ನೀಡಿದೆ.
Yellove Again for the Summer of 2024! ?? pic.twitter.com/x8f3d3vvON
— Chennai Super Kings (@ChennaiIPL)
Yellove Again for the Summer of 2024! 🦁🔜 pic.twitter.com/x8f3d3vvON
— Chennai Super Kings (@ChennaiIPL) November 26, 2023
">November 26, 2023
KKR ಬಿಡುಗಡೆ ಮಾಡಿದ ಆಟಗಾರರು
ವಿದೇಶಿ ಆಟಗಾರರಾದ ಶಕೀಬ್ ಅಲ್ ಹಸನ್, ಲಿಟನ್ ದಾಸ್, ಟಿಮ್ ಸೌಥಿ, ಲೂಕಿ ಫರ್ಗುಸನ್, ಜಾನ್ಸನ್ ಚಾರ್ಲ್ಸ್, ಡೇವಿಡ್ ವೈಸ್ ಗೆ ಕೊಲ್ಕತ್ತಾ ಕೊಕ್​ ಕೊಟ್ಟಿದೆ. ಇನ್ನು, ಇಂಡಿಯನ್ ಪ್ಲೇಯರ್​ಗಳಾದ ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮನದೀಪ್ ಸಿಂಗ್, ಎನ್​​.ಜಗದೀಸನ್, ಆರ್ಯ ದೇಸಾಯಿ, ಹಾಗೂ ಕುಲ್ವಂತ್ ಖೆಜ್ರೋಲಿಯಾಗೂ ಗೇಟ್​ಪಾಸ್ ನೀಡಿದೆ.
ಪೊವೆಲ್​​ಗೆ ಡೆಲ್ಲಿ ಪಂಚ್.. ಶಾರೂಖ್​ಗೆ ಪಂಜಾಬ್​​ ಶಾಕ್​ !
ನಿನ್ನೆ ಅಚ್ಚರಿ ಎಂಬಂತೆ ಬಿಡುಗಡೆಯಾದ ಆಟಗಾರರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ರೋವನ್ ಪೊವೆಲ್ ಹಾಗೂ ಪಂಜಾಬ್​ ತಂಡದ ಶಾರೂಖ್ ಖಾನ್ ಪ್ರಮುಖರು. ಮ್ಯಾಚ್ ವಿನ್ನರ್​​ಗಳಾಗಿದ್ದ ಇವರನ್ನೇ ಫ್ರಾಂಚೈಸಿಗಳು ಕೈಬಿಟ್ಟಿವೆ. ಇವರಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್​ ಕನ್ನಡಿಗ ಮನೀಶ್ ಪಾಂಡೆ, ಫಿಲ್ ಸಾಲ್ಟ್​, ಮುಸ್ತಾಫಿಜುರ್ ರಹಮಾನ್​​​, ಚೇತನ್ ಸಕಾರಿಯಾ, ಪ್ರಿಯಮ್ ಗರ್ಗ್​ ಸೇರಿದಂತೆ ಒಟ್ಟು 11 ಮಂದಿಯನ್ನ ಹೊರಗಾಕಿದೆ.
ಇನ್ನು, ರಾಜಸ್ತಾನ ರಾಯಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​ ಹಾಗೂ ಸನ್​ರೈಸರ್ಸ್​ ಹೈದ್ರಾಬಾದ್​ ತಂಡಗಳಯ ಕೂಡ ಸ್ಮಾರ್ಟ್​ ಆಗಿ ಹೆಜ್ಜೆಯನ್ನಿಟ್ಟಿವೆ. ಪಂಜಾಬ್​ ಕಿಂಗ್ಸ್​ ಅತಿ ಕಡಿಮೆ ಆಟಗಾರರನ್ನ ಕೈ ಬಿಟ್ಟಿದೆ.
ಯಾವ್ಯಾವ ತಂಡದಿಂದ ಎಷ್ಟು ಮಂದಿ ರಿಲೀಸ್?
ರಾಜಸ್ಥಾನ್ ರಾಯಲ್ಸ್​ 9, ಲಕ್ನೋ ಸೂಪರ್ ಜೈಂಟ್ಸ್​ 8, ಸನ್ ರೈಸರ್ಸ್ ಹೈದ್ರಾಬಾದ್ 6 ಹಾಗೂ ಪಂಜಾಬ್ ಕಿಂಗ್ಸ್​ 5 ಮಂದಿ ಆಟಗಾರರಿಗೆ ಗೇಟ್​ಪಾಸ್ ನೀಡಿದೆ. ಇದರೊಂದಿಗೆ ಪರ್ಸ್​ನಲ್ಲಿ ಭಾರೀ ಉಳಿತಾಯವನ್ನೇ ಮಾಡಿಕೊಂಡಿವೆ.
ಒಟ್ಟಿನಲ್ಲಿ.! ಅಳೆದುತೂಗಿ ಆಟಗಾರರನ್ನ ಕೈಬಿಟ್ಟಿರುವ ತಂಡಗಳು, ಮಿನಿ ಹರಾಜಿನಲ್ಲಿ ಬಿಗ್ ಮ್ಯಾಚ್​​​​ ಪ್ಲೇಯರ್​ಗಳಿಗೆ ಗಾಳ ಹಾಕುವ ನಿಟ್ಟಿನಲ್ಲೇ ಹೆಜ್ಜೆಯನ್ನಿಟ್ಟಿವೆ. ಆ ಪ್ಲಾನ್​ ಎಷ್ಟು ವರ್ಕೌಟ್​ ಆಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​
​​.!
ಯಾವ್ಯಾವ ತಂಡದ ಪರ್ಸ್​ ಎಷ್ಟಿದೆ..?
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us