newsfirstkannada.com

ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್​ ಜೈನ್​ ಸಾಹಸಗಾಥೆ ಬಗ್ಗೆ ಓದಲೇಬೇಕು

Share :

Published April 11, 2024 at 5:29pm

Update April 11, 2024 at 5:33pm

    ಭಾರತದ ಅತಿ ದೊಡ್ಡ ಫ್ಯಾಂಟಸಿ ಕ್ರೀಡಾ ವೆಬ್​ಸೈಟ್ ಡ್ರೀಮ್​ 11

    ಬಹುಕೋಟಿ ಬಳಕೆದಾರರನ್ನು ಹೊಂದಿರುವ ಫ್ಯಾಂಟಸಿ ಕ್ರೀಡಾ ವೆಬ್​ಸೈಟ್

    ಸಿಇಓ ಹರ್ಷ್​ ಜೈನ್​ ಯಾರು? ಈ ಕಂಪನಿಯ ನಿರ್ಮಾಣಕ್ಕೆ ಎಷ್ಟೆಲ್ಲಾ ಹೋರಾಡಿದ್ದಾರೆ ಗೊತ್ತಾ?

ಹಣೆಬರಹ ಯಾವಾಗ, ಹೇಗೆ ಬದಲಾಗುತ್ತೋ ಗೊತ್ತಿಲ್ಲ. ಆದ್ರೆ ಒಂದಲ್ಲಾ ಒಂದು ದಿನ ಗೆಲುವು ಪ್ರತಿಯೊಬ್ಬರ ಜೀವನದಲ್ಲೂ ಬಂದೇ ಬರುತ್ತೆ. ಅದರಂತೆಯೇ ಹರ್ಷ್​ ಜೈನ್​ ಜೀವನದಲ್ಲೂ ಆಗಿದ್ದೇ ಅದು. ಅಂದು ಸ್ಟಾರ್ಟ್​ ಅಪ್​ ಹುಟ್ಟುಹಾಕಿ 150 ಬಾರಿ ತಿರಸ್ಕಾರಗೊಂಡ ವ್ಯಕ್ತಿ ಇಂದು ಬಹುಕೋಟಿಯ ಒಡೆಯ ಅಂದ್ರೆ ನಂಬ್ತೀರಾ? ನಂಬಲೇ ಬೇಕು?.

ಡ್ರೀಮ್​ 11 ಬಗ್ಗೆ ಕೇಳಿದ್ದೀರಾ?. ಇದು ಭಾರತದ ಅತಿ ದೊಡ್ಡ ಫ್ಯಾಂಟಸಿ ಕ್ರೀಡಾ ವೆಬ್​ಸೈಟ್​​. ಸದ್ಯ ಐಪಿಎಲ್​ ಪಂದ್ಯಾಟದ ವೇಳೆ ಈ ಕ್ರೀಡಾ ವೆಬ್​ಸೈಟ್​ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಅಷ್ಟರಮಟ್ಟಿಗೆ ಡ್ರೀಮ್​ 11 ಕ್ರಿಕೆಟ್​ ಅಭಿಮಾನಿಗಳ ಮನ ಕದ್ದಿದೆ.

2008ರಲ್ಲಿ ಭಾರತೀಯ ಗೇಮಿಂಗ್​ ಸ್ಟಾರ್ಟ್​ಅಪ್​ ಡ್ರೀಮ್​ 11 ಸ್ಥಾಪನೆಗೊಂಡಿತು.​ 2019ರಲ್ಲಿ ಜನಪ್ರಿಯತೆಗೆ ಬಂತು. ಬಳಿಕ 2020ರಲ್ಲಿ ವಿಸ್ಕೃತ ಮಾರುಕಟ್ಟೆಯೊಂದಿಗೆ ಐಪಿಎಲ್​ ಪ್ರಯೋಜಕರಾಗಿಯೂ ಸೇವೆ ಸಲ್ಲಿಸಿತು. ಸದ್ಯ ಭಾರತೀಯ ಕ್ರಿಕೆಟ್​ ತಂಡದ ಪ್ರಮುಖ ಪ್ರಯೋಜಕರಾಗಿದ್ದಾರೆ. 150 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಡ್ರೀಮ್​ 11 ಒಳಗೊಂಡಿದೆ.

ಹರ್ಷ್​ ಜೈನ್​ ಫ್ಯಾಮಿಲಿ

ಇದನ್ನೂ ಓದಿ: RCB vs MI: ಇಂದಿನ ಮ್ಯಾಚ್​ ಬಗ್ಗೆ ಭವಿಷ್ಯ ನುಡಿದ ಆಮೆ! ಆರ್​ಸಿಬಿ ಕತೆ ಏನು? ವಿಡಿಯೋ ನೋಡಿ

ಡ್ರೀಮ್​ 11 ಸಿಇಒ ಹರ್ಷ್​​ ಜೈನ್​ ಈ ಸ್ಟಾರ್ಟ್​ ಅಪ್​ ಅನ್ನು ಮುನ್ನೆಲೆಗೆ ತರಲು ಸಾಕಷ್ಟು ಶ್ರಮ ವಹಿಸಿದ್ದರು. ಅಚ್ಚರಿಯ ಸಂಗತಿ ಎಂದರೆ ವ್ಯವಹಾರದ ವಿಚಾರವಾಗಿ 150 ಬಾರಿ ತಿರಸ್ಕಾರಗೊಂಡ ಡ್ರೀಮ್​ 11 ಇಂದು ತನ್ನದೇ ರೀತಿಯಲ್ಲಿ ಹೆಸರು ಮಾಡಿದೆ.

ಹರ್ಷ್​ ಜೈನ್​ ಡ್ರೀಮ್​ 11ವನ್ನು ಪ್ರಾರಂಭಿಸಿದಾಗ ಅನೇಕ ನಿರಾಕರಣೆ ಮತ್ತು ಅಡೆತಡೆಗಳನ್ನು ಎದುರಿಸುತ್ತಾ ಬರುತ್ತಾಋಎ. ಆದರೆ ಬರುಬರುತ್ತಾ ಅತ್ಯಂತ ಯಶಸ್ವಿ ಗೇಮಿಂಗ್​ ಫ್ಲಾಟ್​ಫಾರ್ಮ್​ ಅನ್ನು ರಚಿಸುವ ಮೂಲಕ ಹೆಸರುಗಳಿಸಿದರು.

ಹರ್ಷ್ ಜೈನ್ ಮತ್ತು ಭವಿತ್

ಹರ್ಷ್​ ಜೈನ್​

ಜೈ ಕಾರ್ಪ್​ ಲಿಮಿಟೆಡ್​ನ ಅಧ್ಯಕ್ಷರಾಗಿದ್ದ ಆನಂದ್​​ ಜೈನ್​ರವರ ಮಗನೇ ಹರ್ಷ್ ಜೈನ್​. ಮುಂಬೈನಲ್ಲಿ ಜನಿಸಿದ ಇವರು ಗೇಮಿಂಗ್​ ಮತ್ತು ಕ್ರೀಡೆಯಲ್ಲಿ ಉತ್ಸಾಹಿಯಾಗಿದ್ದರು. ಲಂಡನ್​ನಲ್ಲಿ ಹೈಸ್ಕೂಲ್​ ವ್ಯಾಸಂಗ ಮುಗಿಸಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್​ ಎಂಜಿನಿಯರಿಂಗ್​ನಲ್ಲಿ ಬ್ಯಾಚುರಲ್​ ಆಫ್​ ಸೈನ್ಸ್​​ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು.

ವಿದ್ಯಾಭ್ಯಾಸ ಮುಗಿಸಿದ ಬಳಿಕ ಮೈಕ್ರೋಸಾಫ್ಟ್​ನಲ್ಲಿ ಇಂಟರ್ನ್​ ಆಗಿ ಕೆಲಸ ಮಾಡಿದರು. ಆ ಬಳಿಕ ಭಾರತ ಬಂದು ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದಾಗ ಐಪಿಎಲ್ ಕೂಡ ಆರಂಭವಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ನೇಹಿತ ಭವಿತ್​ ಜೊತೆಗೂಡಿ ಡ್ರೀಮ್​ 11 ಸ್ಟಾರ್ಟ್​ ಅಪ್​ ಪ್ರಾರಂಭಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್​ ಜೈನ್​ ಸಾಹಸಗಾಥೆ ಬಗ್ಗೆ ಓದಲೇಬೇಕು

https://newsfirstlive.com/wp-content/uploads/2024/04/Harsh-Jain.jpg

Load More