Advertisment

ಹರಾಜಿಗೆಂದೇ RCB ಬಾಕಿ ಉಳಿಸಿಕೊಂಡಿದೆ ಬಹುದೊಡ್ಡ ಮೊತ್ತ.. CSK, SRH​ ಬಳಿ ಎಷ್ಟು ಕೋಟಿ ಇದೆ ಗೊತ್ತಾ?

author-image
AS Harshith
Updated On
ಹರಾಜಿಗೆಂದೇ RCB ಬಾಕಿ ಉಳಿಸಿಕೊಂಡಿದೆ ಬಹುದೊಡ್ಡ ಮೊತ್ತ.. CSK, SRH​ ಬಳಿ ಎಷ್ಟು ಕೋಟಿ ಇದೆ ಗೊತ್ತಾ?
Advertisment
  • ಇಂದು ಐಪಿಎಲ್​ 2024 ಹರಾಜು ಪ್ರಕ್ರಿಯೆ
  • ಆರ್​ಸಿಬಿ ತಂಡ ಸೇರುವ ಆಟಗಾರರು ಯಾರು?
  • ಹರಾಜಿಗಾಗಿ KKR​ ಎಷ್ಟು ಕೋಟಿ ಉಳಿಸಿಕೊಂಡಿದೆ ಗೊತ್ತಾ?

IPL2024: ಇಂದು ಐಪಿಎಲ್​ 2024 ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ತಂಡಗಳು ಆಟಗಾರರನ್ನು ಖರೀದಿಸುವ ಯೋಚನೆಯಲ್ಲಿವೆ. ಹಾಗಾಗಿ ಇಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ತಂಡಗಳಿಗೆ ಯಾರನೆಲ್ಲಾ ಖರೀದಿಸಬೇಕು ಎಂಬ ಮುಂದಾಲೋಚನೆ ಮಾಡಿದೆ. ಪ್ರತಿ ತಂಡಗಳು ತಮ್ಮ ಬಜೆಟ್​ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ.

Advertisment

ಅಂದಹಾಗೆಯೇ ಆರ್​ಸಿಬಿ ಸೇರಿ 10 ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಸದ್ಯ ಆರ್​ಸಿಬಿ ತಂಡವು 40.75 ಕೋಟಿ ಉಳಿಸಿಕೊಂಡಿದ್ದು, ಅದರಲ್ಲಿ ಆಟಗಾರರನ್ನು ಖರೀದಿಸಲಿದೆ. ಸದ್ಯ ಆರ್​ಸಿಬಿ 7 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಅಷ್ಟು ಮಾತ್ರವಲ್ಲದೆ, ಇಂದಿನ ಹರಾಜಿಗಾಗಿ ಅತಿ ಹೆಚ್ಚು ಹಣವನ್ನು ಉಳಿಸಿಕೊಂಡಿರುವ ಟೀಂ ಇದಾಗಿದೆ.

ಆರ್​ಸಿಬಿ ನಂತರದ ಸ್ಥಾನದಲ್ಲಿ ಸನ್​ ರೈಸರ್ಸ್​ ತಂಡ ಕಾಣಿಸಿಕೊಂಡಿದೆ. ಇದರ ಬಳಿ 34 ಕೋಟಿ ಬಾಕಿ ಉಳಿದಿದ್ದು, ಬಜೆಟ್​ಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿದೆ.

ಅದರಂತೆಯೇ ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡ ಕೂಡ 32.7 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಇಂದಿನ ಹರಾಜಿನಲ್ಲಿ ಯಾರನೆಲ್ಲ ತಮ್ಮ ತಂಡಕ್ಕೆ ಸೇರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Advertisment

ಅತ್ತ ಚೆನ್ನೈ ಸೂಪರ್​ ಕಿಂಗ್ಸ್​ ಕೂಡ 31.4 ಕೋಟಿ ಮೊತ್ತವನ್ನು ಇಟ್ಟುಕೊಂಡಿದ್ದು, ಇಂದಿನ ಹರಾಜಿನ ಮೇಲೆ ಭಾರೀ ನೀರಿಕ್ಷೆಯಿದೆ.


">November 26, 2023

ಇನ್ನು ಪಂಜಾಬ್​ ಬಳಿ 29.1 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್​ 28.95 ಕೋಟಿ, ಮುಂಬೈ ಇಂಡಿಯನ್ಸ್​ ಬಳಿ 15.25, ರಾಜಸ್ಥಾನ್​ ರಾಯನ್ಸ್​ 14.5 ಕೋಟಿ, ಲಕ್ನೋದ ಜೊತೆಗೆ 13.9 ಕೋಟಿ ಇದ್ದರೆ, ಗುಜರಾತ್​ ಟೈಟಾನ್ಸ್​ ಬಳಿ 13.85 ಕೋಟಿ ಉಳಿಸಿಕೊಂಡಿದೆ. ಈ ಎಲ್ಲಾ ತಂಡಗಳು ಇಂದಿನ ಹರಾಜಿನಲ್ಲಿ ಸೂಕ್ತರಾದ ಆಟಗಾರರನ್ನು ತಂಡಕ್ಕೆ ಖರೀದಿಸಲಿವೆ.

Advertisment
Advertisment
Advertisment
Advertisment