ಬ್ಲೂ ಜೆರ್ಸಿಗೆ ಗುಡ್ಬೈ ಹೇಳುತ್ತಾರಾ ಮುಂಬೈ ಮಾಜಿ ಕ್ಯಾಪ್ಟನ್?
ಮೈದಾನದಲ್ಲಿ ಎಲ್ಲ ಪ್ಲೇಯರ್ಸ್ಗೆ ಮಾರ್ಗದರ್ಶನ ಬೇಕಾಗಿದೆ
ರೋಹಿತ್ ಮೇಲೆ ಕಾವ್ಯ ಮಾರನ್ ಕಣ್ಣಿಟ್ಟಿದ್ದು ಯಾಕೆ ಗೊತ್ತಾ.?
ಮುಂಬೈ ಇಂಡಿಯನ್ಸ್ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು 2025ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಜರ್ಸಿ ಧರಿಸಿ ಕಣ್ಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಭಾರತಕ್ಕೆ ಟಿ20 ಟ್ರೋಫಿ ಗೆದ್ದುಕೊಟ್ಟ ಮೇಲೆ ಸಾಕಷ್ಟು ಐಪಿಎಲ್ ತಂಡಗಳು ರೋಹಿತ್ ಮೇಲೆ ಕಣ್ಣಿಟ್ಟಿವೆ. ತಮ್ಮ ಟೀಮ್ನ ನಾಯಕನನ್ನಾಗಿ ಮಾಡಿಕೊಳ್ಳಲು ಕಾತುರದಿಂದಿವೆ. ಅದರಂತೆ ಈ ಬಾರಿ ರೋಹಿತ್ ಮೇಲೆ ಹೈದರಾಬಾದ್ ಓನರ್ ಕಾವ್ಯ ಮಾರನ್ ಪರವಾಗಿ ಕಣ್ಣಿಟ್ಟಿದ್ದಾರೆ.
ಸನ್ರೈಸರ್ಸ್ ಹೈದ್ರಾಬಾದ್ ಟೀಮ್ ಈಗಾಗಲೇ ಎರಡು ಬಾರಿ ಟ್ರೋಫಿಯನ್ನು ಗೆದ್ದುಕೊಂಡರು ಕಳೆದ ಬಾರಿ ಫೈನಲ್ನಲ್ಲಿ ಸೋತು ಹೋಗಿದೆ. ಹೀಗಾಗಿ ತಂಡವನ್ನು ಮುನ್ನಡೆಸಲು ಪ್ರಬಲ ನಾಯಕನ ಹುಡುಕಾಟದಲ್ಲಿದೆ. ತಂಡದಲ್ಲಿ ಯಂಗ್ ಪ್ಲೇಯರ್ಸ್ ಹೆಚ್ಚಾಗಿದ್ದು ಮೈದಾನದಲ್ಲಿ ಅವರಿಗೆ ಮಾರ್ಗದರ್ಶನ ನೀಡುವ, ಹೀಗೆ ಆಡಬೇಕು ಎಂದು ಹೇಳುವ ಉತ್ತಮ ಆಟಗಾರನ ಅವಶ್ಯಕತೆ ಇದೆ. ಇದರಿಂದ ಹೈದ್ರಾಬಾದ್ ಫ್ರಾಂಚೈಸಿಯ ಓನರ್ ಕಾವ್ಯ ಮಾರನ್ ಆವರು ರೋಹಿತ್ ಶರ್ಮಾರನ್ನ ಖರೀದಿ ಮಾಡಬಹುದು ಎಂದು ಐಪಿಎಲ್ ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
2025ರ ಮೆಗಾ ಆಕ್ಷನ್ನಲ್ಲಿ ರೋಹಿತ್ ಶರ್ಮಾ ಒಂದು ವೇಳೆ ಇದ್ದರೇ ಭಾರೀ ಬೆಲೆಗೆ ಹರಾಜು ಆಗಬಹುದು. ಹಿಟ್ಮ್ಯಾನ್ರನ್ನ ರಿಟೈನ್, ರಿಲೀಸ್ ಮಾಡುವುದು ಮುಂಬೈ ತಂಡಕ್ಕೆ ಬಿಟ್ಟಿದ್ದು. ಆದರೆ ನಾಯಕ ಸ್ಥಾನ ಕಸಿದುಕೊಂಡ ಮೇಲೆ ರೋಹಿತ್ ಶರ್ಮಾ ಮುಂಬೈ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ಕಸಿದುಕೊಂಡು ಇನ್ನೊಬ್ಬರಿಗೆ ನೀಡಿದ್ದು ಅವಮಾನ ಎನಿಸಿದೆ. ಹೀಗಾಗಿ ಈ ಬಾರಿ ಹೈದ್ರಾಬಾದ್ ಪರ ಆರೆಂಜ್ ಜೆರ್ಸಿ ಧರಿಸಿ ರೋಹಿತ್ ಅಖಾಡಕ್ಕೆ ಇಳಿಯಲಿದ್ದಾರೆ ಅಂತ ಐಪಿಎಲ್ ವಲಯದಿಂದ ಕೇಳಿ ಬರುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ