/newsfirstlive-kannada/media/post_attachments/wp-content/uploads/2024/11/Mega-Auction-Highest-Paid.jpg)
ಐಪಿಎಲ್​ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಫುಲ್ ಡಿಮ್ಯಾಂಡ್ ಅನ್ನೋ ಸಂಪ್ರದಾಯ ಇತ್ತು. ಆದ್ರೆ, ಈ ಸಂಪ್ರದಾಯ ಈ ಮೆಗಾ ಹರಾಜಿನಲ್ಲಿ ಬ್ರೇಕ್ ಆಗಿದೆ. ನಿರೀಕ್ಷೆಯಂತೆ ಕೆಲ ಸೂಪರ್​ ಸ್ಟಾರ್​ ಆಟಗಾರರಿಗೆ ಜಾಕ್​ಪಾಟ್ ಹೊಡೆದಿದೆ. ಹಾಗಾದ್ರೆ, ಈ ಮೆಗಾ ಹರಾಜಿನ ಟಾಪ್​​ ಪಿಕ್​​ ಯಾರು..? ಬನ್ನಿ ನೋಡೋಣ.
ಐಪಿಎಲ್​ ಮೆಗಾ ಹರಾಜಿನ ಮೊದಲ ದಿನ, ಫ್ರಾಂಚೈಸಿ ಮಾಲೀಕರು ಕೋಟಿ ಕೋಟಿ ಹಣ ಸುರಿದು ಆಟಗಾರರನ್ನು ಖರೀದು ಮಾಡಿದ್ರು. ಕಳೆದ ಸೀಸನ್​ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾಕ್​​, 24.75 ಕೋಟಿ ರೂಪಾಯಿಗೆ ಸೇಲ್​ ಆಗಿ ಐಪಿಎಲ್ ಹರಾಜಿನ ಇತಿಹಾಸದಲ್ಲೇ ದಾಖಲೆ ಬರೆದಿದ್ರು. ಆದ್ರೆ, ಈ ಬಾರಿ ಆ ದಾಖಲೆಯನ್ನು ಭಾರತದ ರಿಷಭ್ ಪಂತ್​ ಬ್ರೇಕ್​ ಮಾಡಿದ್ರು.
/newsfirstlive-kannada/media/post_attachments/wp-content/uploads/2024/09/RISHAB_PANT-4.jpg)
ರಿಷಭ್ ಪಂತ್​; 27 ಕೋಟಿ ರೂಪಾಯಿ
ಈ ಬಾರಿ ಹರಾಜಿನಲ್ಲಿ ರಿಷಭ್ ಪಂತ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇತ್ತು. ವಿಕೆಟ್ ಕೀಪರ್​ನ ಖರೀದಿಗೆಗಾಗಿ ಹರಾಜಿನಲ್ಲಿ ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್​ ನಡೆಸಿದ್ವು. ಪಂತ್ ಹೆಸರು ಬರ್ತಿದ್ದಂತೆ ಲಕ್ನೋ, ಆರ್​ಸಿಬಿ, ಸನ್ ರೈಸರ್ಸ್​ ಹೈದ್ರಾಬಾದ್​ ಪೈಪೋಟಿಗೆ ಇಳಿದ್ವು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​​​ 20.75 ಕೋಟಿಗೆ ​RTM ಅಸ್ತ್ರವನ್ನು ಪ್ರಯೋಗಿಸ್ತು. ಡೆಲ್ಲಿಯ ​RTM ಅಸ್ತ್ರಕ್ಕೆ ಲಕ್ನೋ ಮಾಲೀಕ ಸಂಜಯ್​ ಗೋಯೆಂಕಾ ಸಖತ್ ಟಾಂಗ್ ನೀಡಿದ್ರು. ಒಮ್ಮೆಲೆ 6.25 ಕೋಟಿ ಹೆಚ್ಚುವರಿ ಬಿಡ್ ಮಾಡುವ ಮೂಲಕ 27 ಕೋಟಿಗೆ ಪ್ರೈಸ್​ ಏರಿಸಿದ್ರು. ಇದಕ್ಕೆ ಡೆಲ್ಲಿ ನೋ ಎಂಬ ಬಳಿಕ ಲಕ್ನೋ ತನ್ನ ತೆಕ್ಕೆಗೆ ತೆಗೆದುಕೊಳ್ತು.
/newsfirstlive-kannada/media/post_attachments/wp-content/uploads/2024/11/SHREYAS_IYER-3.jpg)
ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿ
ಹಾಲಿ ಚಾಂಪಿಯನ್ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​​ಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿದಿದ್ದಾಳೆ. ಶ್ರೇಯಸ್​ ಖರೀದಿಗಾಗಿ ಕೊಲ್ಕತ್ತ ನೈಟ್​ ರೈಡರ್ಸ್, ಪಂಜಾಬ್​ ಕಿಂಗ್ಸ್​ , ಡೆಲ್ಲಿ ಕ್ಯಾಪಿಟಲ್ಸ್​ ನೀನಾ ನಾನಾ ಎಂಬಂತೆ ಬಿಡ್ ಮಾಡಿದ್ವು. ಆದ್ರೆ, ಶ್ರೇಯಸ್​ ಅಯ್ಯರ್​ಗಾಗಿ ಕೊನೆವರೆಗೂ ಪಟ್ಟು ಬಿಡದ ಪಂಜಾಬ್, ಬರೋಬ್ಬರಿ 26.75 ಕೋಟಿ ನೀಡಿ ಖರೀದಿಸ್ತು.
/newsfirstlive-kannada/media/post_attachments/wp-content/uploads/2024/11/VENKATESH_IYER.jpg)
ವೆಂಕಟೇಶ್​ ಅಯ್ಯರ್​​; 23.75 ಕೋಟಿ ರೂಪಾಯಿ
ಆಲ್​​ರೌಂಡರ್​ ವೆಂಕಟೇಶ್​ ಅಯ್ಯರ್​ ಖರೀದಿಗೆ ಬಿಡ್ಡಿಂಗ್​ವಾರ್​ ಜೋರಾಗಿ ನಡೆಯಿತು. ಆರಂಭದಲ್ಲಿ ಲಕ್ನೋ ಸೂಪರ್​​ ಜೈಂಟ್ಸ್​ ಹಾಗೂ ಕೆಕೆಆರ್​​ ಖರೀದಿಗಾಗಿ ನೆಕ್​ ಟು ನೆಕ್​ ಫೈಟ್​ ನಡೆಸಿದ್ವು. 7.75 ಕೋಟಿ ಬಳಿಕ ಲಕ್ನೋ ಹಿಂದೆ ಸರಿಯಿತು. ಆಗ ಬಿಡ್ಡಿಂಗ್​ ವಾರ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಂಟ್ರಿ ಕೊಡ್ತು.
ಆರ್​​ಸಿಬಿ ಹಾಗೂ ಕೆಕೆಆರ್​ ವೆಂಕಟೇಶ್​ ಅಯ್ಯರ್​ ಖರೀದಿಗೆ ಜಿದ್ದಿಗೆ ಬಿದ್ದು ಹೋರಾಡಿದ್ವು. ಅಂತಿಮವಾಗಿ 23.50 ಕೋಟಿಗೆ ಆರ್​​ಸಿಬಿ ಸುಸ್ತಾದ್ರೆ, ಬರೋಬ್ಬರಿ 23.75 ಕೋಟಿ ನೀಡಿ ಕೆಕೆಆರ್​ ವೆಂಕಟೇಶ್​ ಅಯ್ಯರ್​ನ ಖರೀದಿ ಮಾಡ್ತು.
/newsfirstlive-kannada/media/post_attachments/wp-content/uploads/2024/11/Arshdeep-1.jpg)
ಆರ್ಷ್​​ದೀಪ್ ಸಿಂಗ್: 18 ಕೋಟಿ ರೂಪಾಯಿ
ಮೆಗಾ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರನೇ ಆರ್ಷ್​ದೀಪ್ ಸಿಂಗ್.. ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರವೇ ಆಡಿದ್ದ ಈತ, ಮತ್ತೆ ತವರಿನ ತಂಡದ ಪಾಲಾಗಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್​ಗಾಗಿ ಗುಜರಾತ್ ಟೈಟನ್ಸ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್​, ಸನ್ ರೈಸರ್ಸ್ ಹೈದ್ರಾಬಾದ್ ಪೈಪೋಟಿ ನಡೆಸಿದ್ವು.
ಸನ್ ರೈಸರ್ಸ್ ಹೈದ್ರಾಬಾದ್​ 15.75 ಕೋಟಿಗೆ ಬಿಡ್ ಮಾಡಿದ್ದಾಗ ಬಿಡ್ಡಿಂಗ್ ವಾರ್​ಗೆ ಎಂಟ್ರಿ ನೀಡಿದ ಪಂಜಾಬ್ ಕಿಂಗ್​​, RTM ಮೂಲಕ 2.25 ಕೋಟಿ ಹೆಚ್ಚುವರಿ ಹಣ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯ್ತು.
/newsfirstlive-kannada/media/post_attachments/wp-content/uploads/2024/08/Chahal-1.jpg)
ಯಜುವೇಂದ್ರ ಚಹಲ್: 18 ಕೋಟಿ ರೂಪಾಯಿ
ಯಜುವೇಂದ್ರ ಚಹಲ್​ಗೆ ಬಂಪರ್ ಫ್ರೈಜ್​​ ಸಿಕ್ಕಿದೆ. ಈ ಮ್ಯಾಚ್ ವಿನ್ನರ್ ಸ್ಪಿನ್ನರ್​​ಗಾಗಿ ಗುಜರಾತ್ ಟೈಟನ್ಸ್​, ಚೆನ್ನೈ ಸೂಪರ್ ಕಿಂಗ್ಸ್​, ಪಂಜಾಬ್ ಕಿಂಗ್ಸ್​ ನಾನಾ ನೀನಾ ಎಂಬಂತೆ ಬಿಡ್ ಮಾಡಿದ್ವು. ತ್ರಿಕೋನ ಫೈಟ್​​ಗೆ ಆರ್​ಸಿಬಿ ಕೂಡ ಎಂಟ್ರಿ ಕೊಟ್ಟಿತ್ತು. ಆದ್ರೆ, ಬಂದಷ್ಟೇ ವೇಗವಾಗಿ ಹಿಂದೆ ಸರಿಯಿತು. ಆದ್ರೆ, ಕೊನೆಯ ತನಕ ಸನ್ ರೈಸರ್ಸ್ ಹೈದ್ರಾಬಾದ್, ಲಕ್ನೋ ಸೂಪರ್ ಜೈಂಟ್ಸ್​ ಜೊತೆ ಹೋರಾಟ ನಡೆಸಿದ ಪಂಜಾಬ್ ಕಿಂಗ್ಸ್​, 18 ಕೋಟಿಗೆ ಚಹಲ್​​ರನ್ನ ತೆಕ್ಕೆಗೆ ತೆಗೆದುಕೊಳ್ತು.
/newsfirstlive-kannada/media/post_attachments/wp-content/uploads/2024/04/Butler.jpg)
ಜೋಸ್ ಬಟ್ಲರ್: 15.75 ಕೋಟಿ ರೂಪಾಯಿ
ವಿದೇಶಿ ಆಟಗಾರರ ಪೈಕಿ ಜೋಸ್ ಬಟ್ಲರ್ ಬಾಸ್ ಆಗಿ ಮೆರೆದಾಡಿದರು. ಈ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್​ಗಾಗಿ ರಾಜಸ್ಥಾನ್ ರಾಯಲ್ಸ್​, ಗುಜರಾತ್ ಟೈಟನ್ಸ್​, ಪಂಜಾಬ್ ಕಿಂಗ್ಸ್​, ಲಕ್ನೋ ಸೂಪರ್ ಜೈಂಟ್ಸ್​ ಬಿಡ್ಡಿಂಗ್​​ ವಾರ್​​​ ನಡೆಸಿದ್ವು. ಆದ್ರೆ, ಕೊನೆಯ ತನಕ ಪಟ್ಟು ಬಿಡದ ಗುಜರಾತ್ ಟೈಟನ್ಸ್​, 15.75 ಕೋಟಿಗೆ ಖರೀದಿಸುವಲ್ಲಿ ಯಶಸ್ವಿಯಾಯ್ತು. ಒಟ್ಟಿನಲ್ಲಿ, ಈ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಮುಗಿಬಿದ್ದು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದ್ವು. ಐಪಿಎಲ್​ನ ಮಿಲಿಯನ್ ಡಾಲರ್ ಟೂರ್ನಿ ಅನ್ನೋದು ಅದಕ್ಕೆ ಅಲ್ವಾ.?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us