ಕಳೆದ ಬಾರಿಗಿಂತ ಈ ಬಾರಿ ಬ್ರ್ಯಾಂಡ್ವ್ಯಾಲ್ಯೂ ದುಪ್ಪಟ್ಟು
ಐಪಿಎಲ್ ತಂಡಗಳ ಬ್ರ್ಯಾಂಡ್ವ್ಯಾಲ್ಯೂ ಎಷ್ಟಿದೆ..?
No.1 ಬ್ರ್ಯಾಂಡ್ವ್ಯಾಲ್ಯೂ ಇರುವ ತಂಡ ಯಾವ್ದು..?
ಈ ಸೀಸನ್ ಐಪಿಎಲ್ ಅಂತ್ಯದ ಬಳಿಕ ಶ್ರೀಮಂತ ಕ್ರಿಕೆಟ್ ಲೀಗ್ನ ಫ್ರಾಂಚೈಸಿಗಳಿಗೆ ಬಂಪರ್ ಜಾಕ್ ಪಾಟ್ ಹೊಡೆದಿದೆ. ಒಂದು ವರ್ಷದ ಅಂತರದಲ್ಲಿ ತಂಡಗಳ ಇನ್ಕಮ್ ಡಬಲ್ ಆಗಿದೆ. ಐಪಿಎಲ್ ತಂಡಗಳ ಬ್ರ್ಯಾಂಡ್ವ್ಯಾಲ್ಯೂ ಎಷ್ಟಿದೆ? ಯಾವ
ತಂಡದ ಇನ್ಕಮ್ ಎಷ್ಟು.?
ಇಂಡಿಯನ್ ಪ್ರೀಮಿಯರ್ ಲೀಗ್.. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನೋದು ಓಪನ್ ಸೀಕ್ರೆಟ್! ಆಡೋ ಆಟಗಾರರಿಂದ ಹಿಡಿದು, ಕುಣಿಯೋ ಚಿಯರ್ಗರ್ಲ್ಸ್ ವರೆಗೂ ಈ ಟೂರ್ನಿಯಲ್ಲಿ ಝಣ ಝಣ ಕಾಂಚಾಣದ್ದೇ ಸದ್ದು. ಆರಂಭದಿಂದ ಈವರೆಗೂ ವರ್ಷದಿಂದ ವರ್ಷಕ್ಕೆ ಐಪಿಎಲ್ನ ಕ್ರೇಜ್ ಹೆಚ್ಚಾಗ್ತಲೇ ಇದೆ. ಅದ್ರ ಜೊತೆ ಫ್ರಾಂಚೈಸಿಗಳ ಖಜಾನೆ ತುಂಬ್ತಿದೆ.
2023ರ ಸೀಸನ್ನಲ್ಲಿ ಫ್ರಾಂಚೈಸಿಗಳಿಗೆ ಜಾಕ್ ಪಾಟ್
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆರಂಭದಿಂದ ಅಂತ್ಯದವರೆಗೂ ಹಣ ಹೊಳೆಯೇ ಹರಿಯುತ್ತೆ. ಫ್ಯಾನ್ಸ್ ಪ್ರತಿಯೊಂದು ಫೋರ್, ಸಿಕ್ಸ್, ವಿಕೆಟ್ ಅನ್ನ ಹುಚ್ಚೆದ್ದು ಸಂಭ್ರಮಿಸುತ್ತಿದ್ರೆ ಫ್ರಾಂಚೈಸಿಗಳು ಹಾಗೂ ಬಿಸಿಸಿಐ ಲಕ್ಷದ ಲೆಕ್ಕದಲ್ಲಿ ಹಣದ ಲೆಕ್ಕಾಚಾರ ಹಾಕ್ತಿರ್ತಾರೆ. ಕಳೆದ ಸೀಸನ್ನಲ್ಲೂ ಐಪಿಎಲ್ನ ಫ್ರಾಂಚೈಸಿಗಳ ಗಳಿಕೆ ಬಂಪರ್ ಏರಿಕೆ ಕಂಡಿದ್ದು, ಕೋಟಿ- ಕೋಟಿ ಲೆಕ್ಕದಲ್ಲಿ ಬ್ರ್ಯಾಂಡ್ವ್ಯಾಲ್ಯೂ ಹೆಚ್ಚಳ ಕಂಡಿದೆ.
ಚಾಂಪಿಯನ್ ಚೆನ್ನೈ ಆದಾಯ ಬಂಪರ್ ಏರಿಕೆ.!
16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಮಾಲ್ ಮಾಡ್ತು. ಬ್ಯಾಟಿಂಗ್, ಬೌಲಿಂಗ್ ಎಲ್ಲರದಲ್ಲೂ ಆಟಗಾರರು ಮಿಂಚಿದ್ರು. ಇದ್ರ ಜೊತೆಗೆ ಟೂರ್ನಿಯೂದ್ದಕ್ಕೂ ಕ್ಯಾಪ್ಟನ್ ಧೋನಿಯ ಜಾತ್ರೆಯೇ ನಡೀತು. ಫೈನಲ್ ಪಂದ್ಯದಲ್ಲಿ ಗುಜರಾತ್ ಮಣಿಸಿ ಚೆನ್ನೈ ಚಾಂಪಿಯನ್ ಕೂಡ ಆಯ್ತು.. ಇದೆಲ್ಲಾ ಎಲ್ಲರಿಗೂ ಗೊತ್ತಿರೋದೆ.. ಇದ್ರ ಜೊತೆಗೆ ಸಿಎಸ್ಕೆ ಫ್ರಾಂಚೈಸಿ ಆದಾಯ ಕೂಡ ಭರ್ಜರಿ ಏರಿಕೆ ಕಂಡಿದೆ. ಇದು ಹೊಸ ವಿಚಾರ.
ಕಪ್ ಗೆಲ್ಲದಿದ್ರೂ ಕುಂದಿಲ್ಲ ಆರ್ಸಿಬಿ ಗಳಿಕೆ
ಕಳೆದ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವಲ್ಲಿ ಫೇಲ್ ಆಯ್ತು. ಆದ್ರೆ ಗಳಿಕೆಯಲ್ಲಿ ಮಾತ್ರ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆಗಿದೆ. ಹೊಸದಾಗಿ ಹೊರ ಬಿದ್ದಿರೋ ರಿಪೋರ್ಟ್ ಪ್ರಚಾರ ಚಾಂಪಿಯನ್ ಚೆನ್ನೈ ಬಿಟ್ರೆ, ಈ ಸೀಸನ್ನಲ್ಲಿ ಆರ್ಸಿಬಿನೇ ಅತಿ ಹೆಚ್ಚು ಹಣಗಳಿಸಿರೋದು.
ಫ್ರಾಂಚೈಸಿಗಳ ಬ್ರ್ಯಾಂಡ್ವ್ಯಾಲ್ಯೂ
2022ರ ಅಂತ್ಯಕ್ಕೆ 1203 ಕೋಟಿಯಷ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ನ ಬ್ರ್ಯಾಂಡ್ವ್ಯಾಲ್ಯೂ 2023ರ ಐಪಿಎಲ್ ಅಂತ್ಯದ ಬಳಿಕ 1747 ಕೋಟಿಯಷ್ಟಾಗಿದೆ. 1054 ಕೋಟಿ ಇದ್ದ ಆರ್ಸಿಬಿ ಬ್ರ್ಯಾಂಡ್ ವ್ಯಾಲ್ಯೂ 1607 ಕೋಟಿಗೆ ಏರಿಕೆಯಾಗಿದೆ. 1162 ಕೋಟಿಯಷ್ಟಿದ್ದ ಮುಂಬೈ ಇಂಡಿಯನ್ಸ್ ತಂಡದ ಬ್ರ್ಯಾಂಡ್ವ್ಯಾಲ್ಯೂ 1565 ಕೋಟಿದಾಟಿದ್ರೆ, ಕೆಕೆಆರ್ ಫ್ರಾಂಚೈಸಿಯ ಬ್ರ್ಯಾಂಡ್ವ್ಯಾಲ್ಯೂ 1005 ಕೋಟಿಯಿಂದ 1491 ಕೋಟಿಗೆ ಏರಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರ್ಯಾಂಡ್ವ್ಯಾಲ್ಯೂ 684 ಕೋಟಿಯಿಂದ 1096 ಕೋಟಿಗೆ ಏರಿಕೆ ಕಂಡಿದೆ.
103.4% ಹೆಚ್ಚಾದ ರಾಜಸ್ಥಾನ್ ರಾಯಲ್ಸ್ ಬ್ರ್ಯಾಂಡ್ವ್ಯಾಲ್ಯೂ
ಆಶ್ಚರ್ಯ ಅನ್ನಿಸಿದ್ರು ಇದು ಸತ್ಯ. ರಾಜಸ್ಥಾನ ತಂಡದ ಆದಾಯ ರಾಯಲ್ ಆಗಿ ಏರಿಕೆ ಕಂಡಿದೆ. 2022ಕ್ಕೆ ಹೋಲಿಸಿದ್ರೆ, 2023ರ ಅಂತ್ಯದಲ್ಲಿ ಶೇಕಡಾ 103.4% ರಷ್ಟು ಆದಾಯ ಹೆಚ್ಚಿದೆ. 2022ರ ಅಂತ್ಯಕ್ಕೆ 667 ಕೋಟಿಯಷ್ಟಿದ್ದ ಸನ್ರೈಸರ್ಸ್ ಹೈದ್ರಾಬಾದ್ನ ಬ್ರ್ಯಾಂಡ್ವ್ಯಾಲ್ಯೂ, 2023ರ ಐಪಿಎಲ್ ಅಂತ್ಯದ ಬಳಿಕ 1054 ಕೋಟಿಯಷ್ಟಾಗಿದೆ. 486 ಕೋಟಿ ಇದ್ದ ರಾಜಸ್ಥಾನ್ ರಾಯಲ್ಸ್ ಬ್ರ್ಯಾಂಡ್ ವ್ಯಾಲ್ಯೂ 988 ಕೋಟಿಗೆ ಏರಿಕೆಯಾಗಿದೆ. ಕಿಂಗ್ಸ್ ಪಂಜಾಬ್ ಫ್ರಾಂಚೈಸಿಯ ಬ್ರ್ಯಾಂಡ್ವ್ಯಾಲ್ಯೂ 519 ಕೋಟಿಯಿಂದ 741 ಕೋಟಿಗೆ ಏರಿಕೆ ಕಂಡಿದೆ.
ಇದಿಷ್ಟೇ ಅಲ್ಲ.. 2 ವರ್ಷದ ಹಿಂದೆ ಐಪಿಎಲ್ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡಗಳೂ ಗಳಿಕೆಯಲ್ಲಿ ಕಮಾಲ್ ಮಾಡಿವೆ. ಗುಜರಾತ್ 988 ಕೋಟಿಯ ಬ್ರ್ಯಾಂಡ್ವ್ಯಾಲ್ಯೂ ಹೊಂದಿದ್ರೆ ಲಕ್ನೋ ತಂಡ ಬ್ರ್ಯಾಂಡ್ವ್ಯಾಲ್ಯೂ 684 ಕೋಟಿಯಾಗಿದೆ.
ಒಟ್ಟಾರೆಯಾಗಿ ಈ ಗಳಿಕೆ ಲಿಸ್ಟ್ ಹೊರ ಬೀಳೋದ್ರೊಂದಿಗೆ ಐಪಿಎಲ್, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಮಾತ್ರವಲ್ಲ.. ಶ್ರೀಮಂತ ಸ್ಪೋರ್ಟ್ಸ್ ಲೀಗ್ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಈ ವರ್ಷದ ಆದಾಯ ನೋಡ್ತಾ ಇದ್ರೆ, ಫುಟ್ಬಾಲ್ ಲೀಗ್ಗಳನ್ನೂ ಬೀಟ್ ಮಾಡೋದ್ರಲ್ಲಿ ಅನುಮಾನವೇ ಬೇಡ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್