newsfirstkannada.com

IPL ಕಲರ್​ಫುಲ್​ ಲೋಕ ಅಲ್ವೇ ಅಲ್ಲ! ಇಲ್ಲಿನ ಕರಾಳ ಅಧ್ಯಾಯದ ಬಗ್ಗೆ ನಿಮಗೂ ಗೊತ್ತಿರ್ಲಿ

Share :

25-05-2023

  ಬಂದ್ರೆ ಕೋಟಿ.. ಕೋಟಿ... ಯಾಮಾರಿದ್ರೆ ಟಾಟಾ ಬೈ ಬೈ..!

  ಬ್ಯಾಕ್​ ಟು ಬ್ಯಾಕ್​ ಪಂದ್ಯ, ರೆಸ್ಟ್​ ಬಗ್ಗೆ ಕೇಳಂಗಿಲ್ಲ..!

  ಯಾಮಾರಿದ್ರೆ ಬ್ಯಾಂಕ್​ ಬ್ಯಾಲೆನ್ಸ್​​ ಬೀಳುತ್ತೆ ಗುನ್ನ..!

ಇಂಡಿಯನ್​ ಪ್ರೀಮಿಯರ್​ ಲೀಗ್​, ಮುಕ್ತಾಯದ ಹಂತ ತಲುಪಿದೆ. ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಯಾವ ತಂಡ ಕಪ್​ ಗೆಲ್ಲುತ್ತೆ ಅನ್ನೋ ಪ್ರಿಡಿಕ್ಷನ್​ಗಳು ಜೋರಾಗಿವೆ. ಈ ಅಬ್ಬರದ ನಡುವೆ ಹಲ ಆಟಗಾರರ ಭವಿಷ್ಯ ಸೈಲೆಂಟ್​ ಆಗೇ ಮುಗಿದೇ ಹೋಗೋ ಹಂತ ತಲುಪಿದೆ. ಇದು ಭರ್ಜರಿ ಎಂಟರ್​ಟೈನ್​ಮೆಂಟ್​ ನೀಡಿ ರಂಜಿಸೋ ಕಲರ್​ ಫುಲ್​ ಲೀಗ್​ನ ಇನ್ನೊಂದು ಮುಖ.!

ಬಂದ್ರೆ ಕೋಟಿ.. ಕೋಟಿಯಾಮಾರಿದ್ರೆ ಟಾಟಾ ಬೈ ಬೈ..!

ಐಪಿಎಲ್ ಆಡಿದ್ರೆ​ ಕೋಟಿ ಕೋಟಿ ದುಡ್ಡು ಬರುತ್ತೆ. ಇದ್ರಲ್ಲಿ ನೋ ಡೌಟ್​..! ಫ್ರಾಂಚೈಸಿಗಳು ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯುತ್ವೆ. ಏನೋ ಆಗಿದ್ದ ಪ್ಲೇಯರ್ಸ್​​​​​ ರಾತ್ರೋ ರಾತ್ರಿ ಶ್ರೀಮಂತರಾಗ್ತಾರೆ. ಜಿಂದಗಿನೇ ಬದಲ್​​​​​​​​ಗಯಾ ಅಂತಾರೆ. ಆದ್ರೆ, ಇದೆಲ್ಲದರ ಜೊತೆ ರಿಸ್ಕ್​ ಕೂಡ ಫ್ರಿ ಆಗೇ ಬಂದಿರುತ್ತೆ, ಸ್ವಲ್ಪ ಯಾಮಾರಿದ್ರೂ ಕರಿಯರ್​​ ಖತಃ ಆಗಿಬಿಡುತ್ತೆ ಗೊತ್ತಾ.?

ಬ್ಯಾಕ್ಟು ಬ್ಯಾಕ್ಪಂದ್ಯ, ರೆಸ್ಟ್​ ಬಗ್ಗೆ ಕೇಳಂಗಿಲ್ಲ..!

ಹೌದು… ಅಭಿಮಾನಿಗಳ ಪಾಲಿಗೆ ಐಪಿಎಲ್ ಅಂದ್ರೆ, 2 ತಿಂಗಳ ಕಾಲ ಕ್ರಿಕೆಟ್​ ಜಾತ್ರೆ. ಸುಮಾರು 2 ತಿಂಗಳ ಕಾಲ ಎಂಟರ್​​ಟೈನ್​ಮೆಂಟ್​ ಮಿಸ್ಸೇ ಇಲ್ಲ. ಆದ್ರೆ, ಇದೇ ವೇಳೆ ಪ್ಲೇಯರ್ಸ್​ ಬ್ಯಾಕ್​ ಟು ಬ್ಯಾಕ್​ ಪಂದ್ಯಗಳನ್ನಾಡಬೇಕಾಗುತ್ತೆ. ಒಂದು ಪಂದ್ಯವನ್ನಾಡಿದ ಬಳಿಕ, ಪ್ರಾಕ್ಟಿಸ್​​ ಸೆಷನ್​. ಪ್ರಾಕ್ಟಿಸ್​ ಸೆಷನ್​ ಮುಗಿದ್ರೆ ಮತ್ತೆ ಮ್ಯಾಚ್​​. ಆಟಗಾರರ 2 ತಿಂಗಳ ರೂಟಿನ್​ ಹೀಗೆ ಇರುತ್ತೆ.. ಇದರಿಂದ ದೈಹಿಕ ಆರೋಗ್ಯ ಕುಂದಲಿದೆ. ಈ ಸೀಸನ್​ನಲ್ಲಿ ಆಗಿರುವ ಸ್ಟ್ರೆಸ್​ ಫ್ರಾಕ್ಚರ್​ನ ಪ್ರಕರಣಗಳೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.!

ಯಾಮಾರಿದ್ರೆ ಬ್ಯಾಂಕ್ಬ್ಯಾಲೆನ್ಸ್​​ ಬೀಳುತ್ತೆ ಗುನ್ನ..!

ಒಂದೆಡೆ ಬ್ಯಾಕ್​ ಟು ಬ್ಯಾಕ್​ ಪಂದ್ಯಗಳು.. ಇನ್ನೊಂದೆಡೆ ಫ್ಯಾಮಿಲಿ, ರಾಜ್ಯ, ದೇಶಗಳನ್ನ ಬಿಟ್ಟು ಬಂದ ಬೇಸರ ಆಟಗಾರರಲ್ಲಿ ಇರುತ್ತೆ. ಇದರ ಜೊತೆಗೆ ಐಪಿಎಲ್​ನಲ್ಲಿ ಪರ್ಫಾಮ್​ ಮಾಡಲೇ ಬೇಕಾದ ಒತ್ತಡ ಎಲ್ಲಾ ಪ್ಲೇಯರ್ಸ್​ ಮೇಲಿರುತ್ತೆ. ಯಾಕಂದ್ರೆ, ಇಲ್ಲೇನಾದ್ರೂ ಪ್ಲಾಫ್​ ಆದ್ರೆ, ಕ್ರಿಕೆಟ್​​ ಕರಿಯರ್​ಗೆ ಕೊನೆ ಮೊಳೆ ಬೀಳಲಿದೆ. ಅಟ್ಟರ್​ಪ್ಲಾಫ್​ ಆದ್ರಂತೂ ನ್ಯಾಷನಲ್​ ಟೀಮ್​ನಿಂದ ಹೊರಬೀಳೋದು ಕನ್ಫರ್ಮ್. ಇನ್ನು, ಮತ್ತೆ ಐಪಿಎಲ್​ ಕಾಂಟ್ರ್ಯಾಕ್ಟ್​ ಸಿಗುತ್ತೆ ಅನ್ನೋದಂತೂ ಹಗಲುಗನಸು..! ಅಲ್ಲಿಗೆ ಬ್ಯಾಂಕ್​ ಬ್ಯಾಲೆನ್ಸ್​​ಗೂ ಗುನ್ನ ಬೀಳೋದು ಪಕ್ಕಾ..!

ಇಂಜುರಿಯಾದ್ರೆ ಕಥೆ ಹರೋ ಹರ.!

ಸತತ ಕ್ರಿಕೆಟ್​ ಆಡೋದ್ರಿಂದ ಇಂಜುರಿ ಆಗೋ ಸಾಧ್ಯತೆ ಅತಿ ಹೆಚ್ಚು ಇರುತ್ತೆ. ಅಪ್ಪಿ ತಪ್ಪಿ ಇಂಜುರಿಗೆ ತುತ್ತಾದ್ರೆ, ಮುಗೀತು ಕಥೆ. ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದು ಇಂಜುರಿಗೆ ತುತ್ತಾದ ಜೋಫ್ರಾ ಆರ್ಚರ್​, ಮಹತ್ವದ ಆ್ಯಷಸ್​ ಟೆಸ್ಟ್​ ಸರಣಿಯಿಂದ ಈಗಾಗಲೇ ಹೊರ ಬಿದ್ದಿದ್ದಾರೆ. ಇನ್ನು ಲಕ್ನೋ ತಂಡದ ನಾಯಕನಾಗಿದ್ದ ರಾಹುಲ್​, ಸರ್ಜರಿಗೆ ಒಳಗಾಗಿ 6ರಿಂದ 7 ತಿಂಗಳು ಕ್ರಿಕೆಟ್​ನಿಂದ ದೂರವಾಗಿದ್ದಾರೆ. ಇದು ಸದ್ಯಕ್ಕಿರೋ ತಾಜಾ ಎಕ್ಸಾಂಪಲ್​.

ಒಂದು ಓವರ್​​, ಒಂದು ಬಾಲ್​, ಕ್ಷಣ ಕ್ಷಣಕ್ಕೂ ಆತಂಕ.!

ಐಪಿಎಲ್​ ಆಡೋ ಆಟಗಾರರ ಹಣೆ ಬರಹ ಒಂದು ಓವರ್​. ಒಂದು ಬಾಲ್​. ಒಂದು ಸಿಕ್ಸರ್​​.. ಕ್ಷಣ ಕ್ಷಣಕ್ಕೂ ಬದಲಾಗುತ್ತೆ. ಜೀರೋ ಆಗಿದ್ದವ ಹೀರೋ ಆಗ್ತಾನೆ. ಅದ್ರ ಜೊತೆಗೆ ಹೀರೋ ಆಗಿದ್ದವನು ಕೂಡ ಜೀರೋ ಆಗ್ತಾನೆ. ಇದಕ್ಕೆ ಈ ಸೀಸನ್​ನ ಒಂದು ಓವರ್​ನಲ್ಲಿ 5 ಸಿಕ್ಸರ್​ ಬಾರಿಸಿ ಹಿರೋ ಆದ ರಿಂಕು ಸಿಂಗ್​, ಹೊಡೆಸಿಕೊಂಡು ವಿಲನ್​ ಆದ ಯಶ್​ ದಯಾಳ್​ ಕಥೆಯೇ ಸಾಕ್ಷಿ. ರಿಂಕು ಸಿಂಗ್​ ಟೀಮ್​ ಇಂಡಿಯಾ ಕದ ತಟ್ತಾ ಇದ್ರೆ, ಪ್ಲಾಫ್​ ಶೋ ನೀಡಿದ ಯಶ್​ ದಯಾಳ್​, ಡಿಪ್ರೆಶನ್​ಗೆ ಹೋಗಿ ಒದ್ದಾಡ್ತಿದ್ದಾರೆ.

ಮಾನಸಿಕ ಆರೋಗ್ಯದ ಕಥೆ.. ಅದೊಂದು ವ್ಯಥೆ..!

ಹೌದು..! ಐಪಿಎಲ್​ನಲ್ಲಿ ನೀಡೋ ಪ್ರದರ್ಶನ ಭವಿಷ್ಯವನ್ನೇ ನಿರ್ಧರಿಸುತ್ತೆ. ಪ್ಲಾಫ್​ ಶೋ ನೀಡಿದ್ರೆ, ಏನಪ್ಪಾ ಕಥೆ ಅನ್ನೋ ಚಿಂತೆಯೇ ಸಾಕು, ಆಟಗಾರರ ಆಟವನ್ನೇ ಹಾಳು ಮಾಡಿಬಿಡುತ್ತೆ. ಭವಿಷ್ಯದ ಅಭದ್ರತೆಗೆ ಸಿಲುಕಿ ಒದ್ದಾಡ್ತಿರುವ ನಮ್ಮ ಮಯಾಂಕ್​ ಅಗರ್​ವಾಲ್​, ಮನೀಷ್​ ಪಾಂಡೆ, ದೇವದತ್ ಪಡಿಕ್ಕಲ್​​​ ಆಟವನ್ನ ನೀವೆ ನೋಡಿದ್ದಿರಲ್ವಾ..?

ಇಷ್ಟೇ ಅಲ್ಲ. ಐಪಿಎಲ್​ನಿಂದ ಆಗೋ ನೆಗೆಟಿವ್​ ಇಂಪ್ಯಾಕ್ಟ್​​ಗಳ ಲಿಸ್ಟ್​ ಇನ್ನೂ ದೊಡ್ಡದಿದೆ. ಇತ್ತೀಚೆಗಂತೂ ಒಂದೇ ಒಂದು ಪ್ಲಾಫ್​ ಶೋ ನೀಡಿದ್ರೆ ಸಾಕು. ಆಟಗಾರರನ್ನ ಗುರಿಯಾಗಿಸಿ ಮಾಡೋ ಟ್ರೋಲ್​ಗಳು, ಟೀಕೆಗಳಂತೂ ಇದಕ್ಕೆ ಇನ್ನಷ್ಟು ಕುಗ್ಗಿಸ್ತವೆ. ಹೀಗಾಗಿ ಈ ವಿಚಾರದಲ್ಲಿ ಅಭಿಮಾನಿಗಳೂ ಕೂಡ ಜವಾಬ್ದಾರಿಯನ್ನ ಅರಿಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ಕಲರ್​ಫುಲ್​ ಲೋಕ ಅಲ್ವೇ ಅಲ್ಲ! ಇಲ್ಲಿನ ಕರಾಳ ಅಧ್ಯಾಯದ ಬಗ್ಗೆ ನಿಮಗೂ ಗೊತ್ತಿರ್ಲಿ

https://newsfirstlive.com/wp-content/uploads/2023/05/IPL-1.jpg

Load More