newsfirstkannada.com

ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

Share :

Published May 18, 2024 at 2:56pm

  ಮೇ- 18 ಅಂದರೆ ವಿರಾಟ್​ ಕೊಹ್ಲಿ ಬ್ಯಾಟಿಂಗ್​ಗೆ ಅಚ್ಚುಕಟ್ಟಾದ ದಿನ

  ಆರ್​ಸಿಬಿ ಮಾಡಿದ ಆ ಎಕ್ಸ್​ ಪೋಸ್ಟ್​ ಬ್ಯಾಟಿಂಗ್ ಆರ್ಭಟ ಹೇಳುತ್ತದೆ

  ಮಳೆ ಬಾರದೆ ಇದ್ರೆ ಸಿಎಸ್​ಕೆ ಟೀಮ್​ಗೆ ನಕ್ಷತ್ರ ಕಾಣೋದು ಗ್ಯಾರಂಟಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್​ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ ಚೆನ್ನೈ ವಿರುದ್ಧ ಮ್ಯಾಚ್​ ಗೆಲ್ಲಬೇಕು ಎನ್ನುವುದು ಬಹುತೇಕ ಆರ್​​ಸಿಬಿ ಫ್ಯಾನ್ಸ್​ಗಳ ಆಶಯವಾಗಿದೆ. ಅದರಂತೆ ಇಂದು ಸಂಜೆ ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ರಣರೋಚಕ ಪಂದ್ಯ ನಡೆಯುತ್ತಿದ್ದು ಇದರಲ್ಲಿ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಧಗಧಗ ಉರಿಯೋದು ಪಕ್ಕಾ ಎನ್ನಲಾಗ್ತಿದೆ. ಏಕೆಂದರೆ ಆರ್​ಸಿಬಿ ಫ್ರಾಂಚೈಸಿ ಮಾಡಿರೋ ಆ ಒಂದು ಎಕ್ಸ್​ ಪೋಸ್ಟ್​ ಇತಿಹಾಸವನ್ನು ಕೆದಕಿದೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್.. ಸಿಎಸ್​ಕೆ ವಿರುದ್ಧ ಪಂದ್ಯ ನಡೆಯುವ ಮೊದಲೇ ವಿಘ್ನ.. ವಿಘ್ನ..!

ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್​ ಅಕೌಂಟ್​ನಲ್ಲಿ ಒಂದು ಪೋಸ್ಟ್​ವೊಂದನ್ನ ಶೇರ್ ಮಾಡಿದೆ. ಇದರಲ್ಲಿ ದಿನಾಂಕ 18 ರಂದು ನಡೆದ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಮಾಡಿದ್ದಾರೆ. ಹಗಲಿನಲ್ಲೇ ಎದುರಾಳಿ ತಂಡಕ್ಕೆ ನಕ್ಷತ್ರಗಳನ್ನು ತೋರಿಸಿದ್ದಾರೆ. ಬೆಂಗಳೂರು ತಂಡದ ಇತಿಹಾಸ ಕೆದಕಿ ನೋಡಿದಾಗ ಕಿಂಗ್​ ಕೊಹ್ಲಿ ಮೇ 18ನೇ ದಿನಾಂಕದಂದು ಅಕ್ಷರಶಃ ವಿಶ್ವರೂಪ ತಾಳಿದ್ದಾರೆ.

ಇದನ್ನೂ ಓದಿ: ಚೆನ್ನೈ ತಂಡದಲ್ಲಿ ಹೊಂಚು ಹಾಕಿ ಕುಳಿತ ಬಾಂಬೆ ಬಾಯ್ಸ್​​.. ಪಂದ್ಯದ ವೇಳೆ ಆರ್​ಸಿಬಿಗೆ ವಿಲನ್ ಆಗ್ತಾರಾ..!

 • 2013 ಮೇ 18 ರಂದು ಸಿಎಸ್​ಕೆ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕೇವಲ 29 ಎಸೆತದಲ್ಲಿ ಹಾಫ್​ ಸೆಂಚುರಿ (57) ಸಿಡಿಸಿ ನಾಟೌಟ್​ ಆಗಿ ಉಳಿದ್ದಾರೆ.
 • 2016ರ ಮೇ 18 ರಂದು ಪಂಜಾಬ್​ ತಂಡದ ಜೊತೆ ಕೇವಲ 50 ಎಸೆತಗಳಲ್ಲಿ ಸೆಂಚುರಿ (113) ಸಿಡಿಸಿ ಮಿಂಚಿದ್ದಾರೆ.
 • ಕಳೆದ ವರ್ಷ ಅಂದರೆ 2023 ಮೇ 18 ರಂದು ಕೊಹ್ಲಿ ಮತ್ತೆ ಬ್ಯಾಟಿಂಗ್​ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಹೈದ್ರಾಬಾದ್​ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿ ಮೈದಾನದಲ್ಲಿ ಸಂಭ್ರಮಿಸಿದ್ದಾರೆ.

ಐಪಿಎಲ್​ನಲ್ಲಿ ಮೇ 18 ರ ಇತಿಹಾಸ ಹೀಗೆ ಹೇಳುತ್ತದೆ ಎಂದರೆ ಇಂದು ಚೆನ್ನೈ ತಂಡದ ವಿರುದ್ಧ ವಿರಾಟ್​ ಕೊಹ್ಲಿ ಆರ್ಭಟಿಸೋ ಮುನ್ಸೂಚನೆ ಎಲ್ಲ ಇದೆ. ಒಂದು ವೇಳೆ ಮಳೆ ಬಾರದೇ ಇದ್ದರೇ ಸಿಎಸ್​ಕೆ ಟೀಮ್​ ಮೇಲೆ ಕಿಂಗ್ ಕೊಹ್ಲಿ ಎರಗುವುದಂತೂ ಗ್ಯಾರಂಟಿ ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

https://newsfirstlive.com/wp-content/uploads/2024/05/VIRAT_KOHLI_BATTING_1.jpg

Load More