/newsfirstlive-kannada/media/post_attachments/wp-content/uploads/2024/11/IPL-MEGA-AUCTION.jpg)
ಐಪಿಎಲ್​ ಟೂರ್ನಿಯ ಮೆಗಾ ಆಕ್ಷನ್​ ಬಂದೇ ಬಿಡ್ತು. ಇಂದು ಮತ್ತು ನಾಳೆ ಏನಿದ್ರೂ ಝಣ ಝಣ ಕಾಂಚಾಣದ್ದೇ ಸದ್ದು.! ಎರಡು ದಿನಗಳಲ್ಲಿ ಹಲ ಆಟಗಾರರ, ಫ್ರಾಂಚೈಸಿಗಳ ಹಣೆ ಬರಹವೇ ಬದಲಾಗಲಿದೆ. ಬನ್ನಿ ಹಾಗಾದ್ರೆ, ಮೆಗಾ ಆಕ್ಷನ್​ಗೆ ಫ್ರಾಂಚೈಸಿಗಳ ಸಿದ್ಧತೆ ಹೇಗಿದೆ.? ಯಾರ ಬಳಿ ಎಷ್ಟು ಹಣ ಇದೆ.? ಎಷ್ಟು ಸ್ಲಾಟ್​ಗಳಿವೆ.?
IPL ಮೆಗಾ ಹರಾಜಿಗೆ ಕೆಲವೇ ಗಂಟೆಗಳು ಮಾತ್ರ ಬಾಕಿ. 641.5 ಕೋಟಿ ಹಣ, 204 ಸ್ಥಾನ, 1574 ಆಟಗಾರರ ಭವಿಷ್ಯ, ಇಂದು ಮತ್ತು ನಾಳೆ ಸೌದಿ ಅರೇಬಿಯಾದ ಜೆದ್ಹಾನಲ್ಲಿ ನಿರ್ಧಾರವಾಗಲಿದೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-2.jpg)
ಮೆಗಾ ಆಕ್ಷನ್​ಗೆ ಆರ್​​ಸಿಬಿ ಸರ್ವ ಸನ್ನದ್ಧ.!
ಐಪಿಎಲ್​ ರಿಟೈನ್ಶನ್​ ಅವಕಾಶದಲ್ಲಿ ಕೇವಲ ಮೂವರು ಆಟಗಾರರನ್ನ ಉಳಿಸಿಕೊಂಡಿರೋ RCB ಆಕ್ಷನ್​ನಲ್ಲಿ ಆಟಗಾರರ ಬೇಟೆಗೆ ಸಜ್ಜಾಗಿದೆ. ಪಂಜಾಬ್​ ಹೊರತುಪಡಿಸಿದ್ರೆ, ಆರ್​​ಸಿಬಿ ಅತಿ ಹೆಚ್ಚು ಹಣವನ್ನ ತನ್ನ ಪರ್ಸ್​ನಲ್ಲಿ​ ಉಳಿಸಿಕೊಂಡಿದೆ. ಈ ಹಣದಲ್ಲಿ ಸಮರ್ಥ ಆಟಗಾರರನ್ನ ಪಿಕ್​ ಮಾಡಿ ಬಲಿಷ್ಟ ತಂಡ ಕಟ್ಟೋ ಲೆಕ್ಕಾಚಾರ ಆರ್​​ಸಿಬಿಯದ್ದಾಗಿದೆ.
ಮೂವರು ಆಟಗಾರರನ್ನ ರಿಟೈನ್​ ಮಾಡಿಕೊಂಡಿರೋ ಆರ್​​ಸಿಬಿ ಬಳಿಕ 3 ರೈಟ್​ ಟು ಮ್ಯಾಚ್​ ಕಾರ್ಡ್​​ಗಳು ಉಳಿದಿದೆ. 83 ಕೋಟಿ ಹಣ ಪರ್ಸ್​​ನಲ್ಲಿ ಉಳಿದಿದ್ದು, 8 ವಿದೇಶಿ ಆಟಗಾರರ ಸ್ಲಾಟ್​ ಸೇರಿದಂತೆ, ಒಟ್ಟು 22 ಸ್ಲಾಟ್​ಗಳು ಖಾಲಿ ಉಳಿದಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-3.jpg)
ಮುಂಬೈ ಇಂಡಿಯನ್ಸ್ ಪ್ಲ್ಯಾನ್ ಏನು?
ಐಪಿಎಲ್​ನ ಮೋಸ್ಟ್​ ಸಕ್ಸಸ್​​ಫುಲ್​ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳೂ ಹರಾಜಿಗೆ ಭರ್ಜರಿ ಸಿದ್ಧತೆ ನಡೆಸಿವೆ. ಕೋರ್​ ಟೀಮ್​ ಉಳಿಸಿಕೊಂಡಿರೋ ಮುಂಬೈ ಹಾಗೂ ಚೆನ್ನೈ ಯುವ ಆಟಗಾರರ ಮೇಲೆ ಕಣ್ಣಿಟ್ಟಿವೆ. ಇನ್ನು, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೂಡ ಹೊಸ ಆಟಗಾರರ ಬೇಟೆಗೆ ಸಜ್ಜಾಗಿದೆ.
5 ಆಟಗಾರರನ್ನ ರಿಟೈನ್ಸ್​ ಮಾಡಿಕೊಂಡಿರೋ ಮುಂಬೈ ಬಳಿ 1 ಆರ್​​ಟಿಎಮ್​ ಅವಕಾಶ ಉಳಿದಿದೆ. 45 ಕೋಟಿ ಹಣ ಪರ್ಸ್​​ನಲ್ಲಿದ್ದು, 8 ವಿದೇಶಿ ಸ್ಲಾಟ್​ ಸೇರಿದಂತೆ 20 ಸ್ಲಾಟ್​ ಖಾಲಿಯಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-4.jpg)
ಚೆನ್ನೈ ಸೂಪರ್​ ಕಿಂಗ್ಸ್​ ಯಾರನ್ನು ಉಳಿಸಿಕೊಂಡಿದೆ ?
ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ 5 ಆಟಗಾರರನ್ನ ಉಳಿಸಿಕೊಂಡಿದೆ. 1 ಆರ್​​ಟಿಎಮ್​ ಅವಕಾಶವಿದ್ದು, 55 ಕೋಟಿ ಹಣ ಪರ್ಸ್​ನಲ್ಲಿದೆ. ಒಟ್ಟು 20 ಸ್ಲಾಟ್​ ಖಾಲಿಯಿದ್ದು, ಇದ್ರಲ್ಲಿ 7 ವಿದೇಶಿ ಸ್ಲಾಟ್​ಗಳಾಗಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-5.jpg)
ಡೆಲ್ಲಿ ಕ್ಯಾಪಿಟಲ್ಸ್​ ದೈತ್ಯರು ಯಾರು?
ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ 4 ಆಟಗಾರರನ್ನ ಉಳಿಸಿಕೊಂಡಿದ್ದು, 2 ರೈಟ್​ ಟು ಮ್ಯಾಚ್​ ಕಾರ್ಡ್​ ಅವಕಾಶವಿದೆ. 73 ಕೋಟಿ ಹಣ ಪರ್ಸ್​ನಲ್ಲಿದ್ದು, 21 ಸ್ಲಾಟ್​​ಗಳು ಖಾಲಿ ಇದ್ದು, ಅದ್ರಲ್ಲಿ 7 ವಿದೇಶಿ ಸ್ಲಾಟ್​ಗಳಾಗಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-6.jpg)
ಗುಜರಾತ್​ ಟೈಟನ್ಸ್​ ಹಾಕಿರುವ ಯೋಜನೆ ಏನು?
ಹಾಲಿ ಚಾಂಪಿಯನ್​​ ಕೊಲ್ಕತ್ತಾ ನೈಟ್​ ರೈಡರ್ಸ್​ ಕೂಡ ಹೊಸ ಆಟಗಾರರ ಬೇಟೆಗೆ ಸಜ್ಜಾಗಿದೆ. ಗುಜರಾತ್​ ಟೈಟನ್ಸ್​, ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಉಳಿಸಿಕೊಂಡಿರೋ ತಲಾ 69 ಕೋಟಿಗಳಲ್ಲೇ ಹರಾಜಿನ ಕಣದಲ್ಲಿ ಆಟವಾಡಲು ಸಜ್ಜಾಗಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-7.jpg)
ಕೊಲ್ಕತ್ತಾ ಕೈಯಲ್ಲಿ ಎಷ್ಟು ಸ್ಲಾಟ್​ಗಳಿವೆ?
ರಿಟೈನ್​ ಅವಕಾಶದಲ್ಲಿ 6 ಆಟಗಾರಿಗೆ ಮಣೆ ಹಾಕಿರೋ ಕೊಲ್ಕತ್ತಾ ನೈಟ್​​ ರೈಡರ್ಸ್​​ ಬಳಿ ಯಾವುದೇ ಆರ್​​ಟಿಎಮ್​ ಅವಕಾಶ ಉಳಿದಿಲ್ಲ. 51 ಕೋಟಿ ಹಣ ಬಾಕಿ ಉಳಿದಿದ್ದು, ಒಟ್ಟು 19 ಖಾಲಿ ಸ್ಲಾಟ್​ಗಳಿವೆ. ಇದ್ರಲ್ಲಿ 6 ಸ್ಲಾಟ್​ ವಿದೇಶಿ ಸ್ಲಾಟ್​ಗಳಿವೆ.
ಲಕ್ನೋ ಸೂಪರ್ ಜೈಂಟ್ಸ್​ ಎಷ್ಟು ಅವಕಾಶವಿದೆ?
ಲಕ್ನೋ ಸೂಪರ್​ ಜೈಂಟ್ಸ್​​ 5 ಆಟಗಾರರನ್ನ ರಿಟೈನ್​​ ಮಾಡಿಕೊಂಡಿದ್ದು, 1 ಆರ್​​ಟಿಎಮ್​ ಅವಕಾಶವಿದೆ. 69 ಕೋಟಿ ಹಣದಲ್ಲಿ ಪರ್ಸ್​​ನಲ್ಲಿದ್ದು, 7 ವಿದೇಶಿ ಸ್ಲಾಟ್​ ಸೇರಿದಂತೆ ಒಟ್ಟು 20 ಖಾಲಿ ಸ್ಲಾಟ್​ಗಳಿವೆ.
5 ಆಟಗಾರರನ್ನ ರಿಟೈನ್​ ಮಾಡಿಕೊಂಡಿರೋ ಗುಜರಾತ್​​ ಟೈಟನ್ಸ್​ ಬಳಿ 1 ಆರ್​​ಟಿಎಮ್​ ಅವಕಾಶ ಉಳಿದಿದೆ. 69 ಕೋಟಿ ಹಣ ಫ್ರಾಂಚೈಸಿ ಬಳಿಕ ಉಳಿದಿದ್ದು, 7 ವಿದೇಶಿ ಸ್ಲಾಟ್​ ಸೇರಿ ಒಟ್ಟು 20 ಸ್ಲಾಟ್​ಗಳು ಬಾಕಿ ಉಳಿದಿದೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-1.jpg)
ಪಂಜಾಬ್​ ಕಿಂಗ್ಸ್​ ಹಾಕಿಕೊಂಡಿದೆ ಈ ಪ್ಲ್ಯಾನ್
10 ಫ್ರಾಂಚೈಸಿಗಳ ಪೈಕಿ ಅತಿ ಹೆಚ್ಚು ಹಣವನ್ನ ಹೊಂದಿರೋ ಪಂಜಾಬ್​ ಕಿಂಗ್ಸ್​​​ ಮೆಗಾ ಆಕ್ಷನ್​ನಲ್ಲಿ ಮೆಗಾ ಬೇಟೆಯಾಡಲು ಸಜ್ಜಾಗಿದೆ. ಇನ್ನು, ರಾಜಸ್ಥಾನ್​ ರಾಯಲ್ಸ್​​, ಸನ್​ರೈಸರ್ಸ್​​​ ಹೈದ್ರಾಬಾದ್​​ ಆಟಗಾರರ ಬೇಟೆಗೆ ಸೈಲೆಂಟ್​ ಆಗಿ ಸಜ್ಜಾಗಿವೆ.
ಇದನ್ನೂ ಓದಿ:IPL 2025 Auction: ಈ ಸಲ ಕಪ್ ನಮ್ಮದಾಗಿಸಲು ಬಲಿಷ್ಠ ತಂಡ ಕಟ್ಟುತ್ತಾ RCB? ಹೇಗಿದೆ ಲೆಕ್ಕಾಚಾರ?
ಕೇವಲ ಇಬ್ಬರು ಆಟಗಾರರನ್ನ ಉಳಿಸಿಕೊಂಡಿರುವ ಪಂಜಾಬ್​ ಕಿಂಗ್ಸ್​ 4 ಆರ್​​​​ಟಿಎಮ್​ ಅವಕಾಶ ಹೊಂದಿದೆ. ಬರೋಬ್ಬರಿ 110.5 ಕೋಟಿ ಹಣ ಫ್ರಾಂಚೈಸಿ ಬಳಿಯಿದ್ದು, 8 ವಿದೇಶಿ ಆಟಗಾರರ ಸ್ಲಾಟ್​ ಸೇರಿದಂತೆ ಒಟ್ಟು 23 ಸ್ಲಾಟ್​ಗಳು ಖಾಲಿಯಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-8.jpg)
ರಾಜಸ್ಥಾನ ರಾಯಲ್ಸ್​ನಲ್ಲಿ 6 ಆಟಗಾರರು ರಿಟೈನ್
ಹರಾಜಿಗೂ ಮುನ್ನ 6 ಆಟಗಾರರನ್ನ ರಿಟೈನ್​ ಮಾಡಿರೋ ರಾಜಸ್ಥಾನ್​ ರಾಯಲ್ಸ್​ ಬಳಿ ಆರ್​​ಟಿಎಮ್​ ಅವಕಾಶವಿಲ್ಲ. 41 ಕೋಟಿ ಹಣ ಉಳಿದಿದ್ದು, ಒಟ್ಟು 19 ಸ್ಲಾಟ್​ ಖಾಲಿಯಿದೆ. ಇದ್ರಲ್ಲಿ, 7 ವಿದೇಶಿ ಆಟಗಾರರ ಸ್ಲಾಟ್​ ಆಗಿವೆ.
/newsfirstlive-kannada/media/post_attachments/wp-content/uploads/2024/11/IPL-MEGA-AUCTION-9.jpg)
ಹೈದ್ರಾಬಾದ್​ ಯಾರಿಗೆ ಮಣೆ ಹಾಕಲಿದೆ ?
5 ಆಟಗಾರರನ್ನ ರಿಟೈನ್​ ಮಾಡಿರೋ ಸನ್​ರೈಸರ್ಸ್​​ ಹೈದ್ರಾಬಾದ್​ ಬಳಿಕ 1 ಆರ್​​ಟಿಎಮ್​ ಉಳಿದಿದೆ. 45 ಕೋಟಿ ಪರ್ಸ್​ನಲ್ಲಿದ್ದು, 20 ಖಾಲಿ ಸ್ಲಾಟ್​​ಗಳ ಪೈಕಿ 5 ವಿದೇಶಿ ಆಟಗಾರರ ಸ್ಲಾಟ್​ ಆಗಿವೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ಸೌದಿ ಅರೇಬಿಯಾದ ಜೆದ್ಹಾನಲ್ಲಿ ಝಣ ಝಣ ಕಾಂಚಾಣದ ಸದ್ದು ಜೋರಾಗಿ ಕೇಳಲಿದೆ. ಕೋಟಿ ಕೋಟಿಯ ಸುರಿಮಳೆಯೇ ಆಟಗಾರರ ಮೇಲೆ ಸುರಿಯಲಿದ್ದು, ಯಾವ ಫ್ರಾಂಚೈಸಿ ಯಾವ ಆಟಗಾರನನ್ನ ಬುಟ್ಟಿಗೆ ಹಾಕಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us