newsfirstkannada.com

ಟ್ಯಾಲೆಂಟ್ ಹಂಟ್​ IPL: ಟೀಂ ಇಂಡಿಯಾಗೆ ಭವಿಷ್ಯದ ಭರವಸೆ ಮೂಡಿಸಿದವ್ರು ಯಾಱರು?

Share :

Published May 29, 2023 at 9:09am

    ಮುಂಬೈ ಪರ ಪ್ರಜ್ವಲಿಸಿದ ವಧೇರಾ, ಮಧ್ವಾಲ್​

    ಗುಜರಾತ್​​ ಗೇಮ್​ಚೇಂಜರ್​​ ಸಾಯಿ ಸುದರ್ಶನ್

    ಧೋನಿ ಗರಡಿಯಲ್ಲಿ ಅರಳಿದ ತುಷಾರ್

ಇಂಡಿಯನ್​ ಪ್ರೀಮಿಯರ್​​ ಲೀಗ್​. 2 ತಿಂಗಳ ಕಾಲ ಕ್ರಿಕೆಟ್​​​ನ ರಸದೌತಣ ಬಡಿಸೋ ಲೀಗ್​ ಮಾತ್ರವಲ್ಲ. ಇದೊಂದು ಟ್ಯಾಲೆಂಟ್​ ಫ್ಯಾಕ್ಟರಿ. ಈ ಸೀಸನ್ ಐಪಿಎಲ್​ನಲ್ಲೂ​​ ಹೊಸ ಹೊಸ ಟ್ಯಾಲೆಂಟ್​​ಗಳು ಐಪಿಎಲ್​ನಲ್ಲಿ ಉದಯಿಸಿದ್ದಾರೆ. ಇಷ್ಟೇ ಅಲ್ಲ, ಭಾರತದ ಭವಿಷ್ಯದ ಭರವಸೆಯಾಗಿ ಎಲ್ಲರನ್ನೂ ಇಂಪ್ರೆಸ್​​ ಮಾಡಿದ್ದಾರೆ.

ಕ್ಷಣಕ್ಷಣಕ್ಕೂ ಕುತೂಹಲ. ಪಂದ್ಯದಿಂದ ಪಂದ್ಯಕ್ಕೆ ಕೌತುಕ ಸೃಷ್ಠಿಸೋ ಐಪಿಎಲ್​ನಿಂದ, ಫ್ಯಾನ್ಸ್​​​ಗೆ​​ ಭರ್ಜರಿ ಎಂಟರ್​ಟೈನ್​ಮೆಂಟ್​ ಸಿಗುತ್ತೆ. ಇನ್ನು ಇದನ್ನ ಆಯೋಜಿಸೋ ಬಿಸಿಸಿಐ ಬೊಕ್ಕಸಕ್ಕೆ ಕೋಟಿ ಕೋಟಿ ಇನ್​ಕಮ್​ ಹರಿದು ಬರುತ್ತೆ. ಆದ್ರೆ, ಅದರ ಜೊತೆಗೆ ಫ್ಯೂಚರ್​ ಟೀಮ್​ ಇಂಡಿಯಾ ಕೂಡ ಇದೇ ಐಪಿಎಲ್​ನಿಂದ ರೆಡಿಯಾಗುತ್ತೆ. ಇದೊಂಥರಾ ಟ್ಯಾಲೆಂಟ್​ ಫ್ಯಾಕ್ಟರಿ. ಈ ಸೀಸನ್​ನಲ್ಲೂ ಹೊಸ ಸ್ಟಾರ್​ಗಳ ಉದಯವಾಗಿದೆ.

ಮುಂಬೈ ಪರ ಪ್ರಜ್ವಲಿಸಿದ ವಧೇರಾ, ಮಧ್ವಾಲ್​
ಮುಂಬೈ ಇಂಡಿಯನ್ಸ್ ಪರ ಆಡಿ ಟೀಮ್​ ಇಂಡಿಯಾದ ಮ್ಯಾಚ್​​ ವಿನ್ನರ್​​ಗಳಾದ ಆಟಗಾರರ ಲಿಸ್ಟ್​ ದೊಡ್ಡದಿದೆ. ಈ ಸೀಸನ್​ನಲ್ಲೂ ಮುಂಬೈ ಪರ ಅಬ್ಬರಿಸಿದ್ದು ನ್ಯೂ ಟ್ಯಾಲೆಂಟ್​ಗಳೇ..! ಲೋವರ್​ ಆರ್ಡರ್​​ನಲ್ಲಿ ಕಣಕ್ಕಿಳಿದು ನೆಹಾಲ್​ ವಧೇರಾ ಮ್ಯಾಜಿಕ್​ ಮಾಡಿದ್ರು.. ಇನ್ನು ಬೌಲಿಂಗ್​ನಲ್ಲಿ ಆಕಾಶ್​ ಮಧ್ವಾಲ್​ ಎಲ್ಲರನ್ನೋ ಬೆಚ್ಚಿ ಬೆರಗಾಗಿಸಿದ್ರು.

ಗುಜರಾತ್​​ ಗೇಮ್​ಚೇಂಜರ್​​ ಸಾಯಿ ಸುದರ್ಶನ್
ಕಳೆದ ಐಪಿಎಲ್​ ಸೀಸನ್​​ನಲ್ಲಿ ಕೆಲವೇ ಪಂದ್ಯಗಳನ್ನಾಡಿದ್ದ ಸಾಯಿ ಸುದರ್ಶನ್​ ಫ್ರಾಂಚೈಸಿಯಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ರು. ಅದೇ ಕಾನ್ಫಿಡೆನ್ಸ್​​ನಲ್ಲಿ ಈ ಸೀಸನ್​ನಲ್ಲೂ ಫ್ರಾಂಚೈಸಿ ಅವಕಾಶ ನೀಡ್ತು. ಆ ಅವಕಾಶವನ್ನ ಸುದರ್ಶನ್​ ಎರಡೂ ಕೈಯಿಂದ ಬಾಚಿಕೊಂಡ್ರು. ಗೇಮ್​ ಚೇಂಜಿಂಗ್​​ ಇನ್ನಿಂಗ್ಸ್​​ ಕಟ್ಟಿದ ಯಂಗ್​ ಬ್ಯಾಟರ್​​ 44.33 ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದ್ರು.

ಮಿಸ್ಟ್ರಿ ಮ್ಯಾಜಿಕ್​ ಮಾಡಿದ ಸುಯಶ್​ ಶರ್ಮಾ..!
ಈ ಸೀಸನ್​ ಸರ್​​ಪ್ರೈಸ್​​ ಪ್ಯಾಕೇಜ್​ ಈ ಮಿಸ್ಟ್ರಿ ಸ್ಪಿನ್ನರ್​ ಸುಯಶ್​ ಶರ್ಮಾ.. ಕೊಲ್ಕತ್ತಾ ನೈಟ್​​ ರೈಡರ್ಸ್​ ಕಳಪೆ ಪ್ರದರ್ಶನ ನೀಡ್ತು. ಆದ್ರೆ ಕಳಪೆ ಪ್ರದರ್ಶನದ ನಡುವೆಯೂ ಮಿಂಚಿದ್ದು ಈ ಸುಯಶ್​ ಶರ್ಮಾ. ತನ್ನ ಮಿಸ್ಟ್ರಿ ಎಸೆತಗಳಿಂದ ಬ್ಯಾಟ್ಸ್​ಮನ್​ಗಳನ್ನ ಕಕ್ಕಾಬಿಕ್ಕಿಯಾಗಿದ ಸುಯಶ್​​, ವಿಕೆಟ್​ ಭೇಟೆಯಾಡಿದ್ರು.. ಇಷ್ಟೇ ಅಲ್ಲ.. ಬ್ಯಾಟ್ಸ್​ಮನ್​ಗಳ ಗೇಮ್​ನಲ್ಲಿ ಎಕಾನಮಿಕಲ್​ ಸ್ಪೆಲ್​ ಹಾಕಿ ಸೈ ಎನಿಸಿಕೊಂಡ್ರು.

ಈ ಸೀಸನ್​ನ ಆರಂಭಿಕ ಪಂದ್ಯಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಯಾಕಪ್ಪಾ ಈ ತುಷಾರ್​ ದೇಶಪಾಂಡೆಗೆ ಅವಕಾಶ ನೀಡ್ತಿದೆ ಅಂದವರೇ ಹೆಚ್ಚು. ಆದ್ರೆ ಈಗ ಈತನೇ ಗೇಮ್​ಚೇಂಜರ್​. ನಾಯಕ ಧೋನಿ ಗರಡಿಯಲ್ಲಿ ಪಳಗಿದ ತುಷಾರ್​ ದೇಶಪಾಂಡೆ, ಘಟಾನುಘಟಿ ಬ್ಯಾಟ್ಸ್​ಮನ್​ಗಳಿಗೆ ಸವಾಲಾಗಿದ್ದಾರೆ. 15 ಪಂದ್ಯಗಳಲ್ಲಿ 21 ವಿಕೆಟ್​ ಕಬಳಿಸಿ ಎಲ್ಲರಿಂದ ಶಹಬ್ಬಾಸ್​ ಎನಿಸಿಕೊಂಡಿದ್ದಾರೆ.

ಪಂಜಾಬ್​ಗೆ ಪವರ್​​​ ತುಂಬಿದ ಪ್ರಭ್​​ಸಿಮ್ರನ್​
ಈ ಸೀಸನ್​ನಲ್ಲಿ ಪಂಜಾಬ್​ ಕಿಂಗ್ಸ್​​ಗೆ ಯಂಗ್​ಸ್ಟರ್​ ಪ್ರಭ್​ಸಿಮ್ರನ್​ ಸಿಂಗ್​ ಪವರ್​ ತುಂಬಿದ್ರು. 2019ರಿಂದ ಐಪಿಎಲ್​ ಆಡ್ತಿದ್ರು, ಟ್ಯಾಲೆಂಟ್​ಗೆ ತಕ್ಕ ಅವಕಾಶ ಈ ಆಟಗಾರನಿಗೆ ಸಿಕ್ಕಿರಲಿಲ್ಲ. ಆದ್ರೆ ಈ ಸೀಸನ್​ನಲ್ಲಿ ಟ್ಯಾಲೆಂಟ್​ ನಂಬಿದ ಕ್ಯಾಪ್ಟನ್​​ ಶಿಖರ್​​ ಧವನ್​, ಎಲ್ಲಾ 14 ಪಂದ್ಯಗಳಲ್ಲೂ ಚಾನ್ಸ್​ ನೀಡಿದ್ರು. ಕ್ಯಾಪ್ಟನ್​ ನಂಬಿಕೆ ಹುಸಿಗೊಳಿಸದ ಪ್ರಭ್​ಸಿಮ್ರನ್​, ಈ ಸೀಸನ್​ನಲ್ಲಿ ಸೆಂಚುರಿ ಸಹಿತ 358 ರನ್​ ಗಳಿಸಿದ್ರು.

ಈ ಸೀಸನ್​ನಲ್ಲಿ ಮೊದಲ ಬಾರಿ ಅಖಾಡಕ್ಕಿಳಿದ ರಾಜಸ್ಥಾನ್​ ರಾಯಲ್ಸ್​ನ ಧೃವ್​ ಜುರೇಲ್​, ಅಬ್ಬರಿಸಿ ಬೊಬ್ಬಿರಿಯಲಿಲ್ಲ. ಆಡಿದ ಕೆಲವೇ ಇನ್ನಿಂಗ್ಸ್​ನಲ್ಲಿ ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ಎಸ್ಪೆಷಲಿ ಒತ್ತಡದ ಸಂದರ್ಭದಲ್ಲಿ ಧೃವ್​ ಆಡಿದ ರೀತಿಗೆ ದಿಗ್ಗಜ ಆಟಗಾರರೇ ಸಲಾಂ ಎಂದಿದ್ದಾರೆ. ಯಶ್​ ಠಾಕೂರ್​, ಕನ್ನಡಿಗ ವೈಶಾಕ್​ ವಿಜಯ್​ಕುಮಾರ್​ ಕೂಡ ಇಂಪ್ರೆಸ್​ ಮಾಡಿದ್ದಾರೆ. ಸದ್ಯ ಇರೋ ಚಿಕ್ಕ-ಪುಟ್ಟ ತಪ್ಪುಗಳನ್ನ ತಿದ್ದಿಕೊಂಡ್ರೆ, ಮುಂದೊಂದು ದಿನ ಭಾರತದ ಪರ ಆಡೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಟ್ಯಾಲೆಂಟ್ ಹಂಟ್​ IPL: ಟೀಂ ಇಂಡಿಯಾಗೆ ಭವಿಷ್ಯದ ಭರವಸೆ ಮೂಡಿಸಿದವ್ರು ಯಾಱರು?

https://newsfirstlive.com/wp-content/uploads/2023/05/IPL2023-5.jpg

Load More