newsfirstkannada.com

ಒಬ್ಬರೇ ಟ್ರೋಫಿ ಸ್ವೀಕರಿಸಲಿಲ್ಲ.. ರಾಯುಡು ನಿವೃತ್ತಿ ಸ್ಮರಣೀಯವಾಗಿಸಲು ಮರೆಯದ ಧೋನಿ..!

Share :

30-05-2023

    ಗೆದ್ದ ಖುಷಿಯಲ್ಲಿ ಇಬ್ಬರು ಆಟಗಾರರ ಮರೆಯದ ಧೋನಿ

    ಜಡೇಜಾ, ರಾಯುಡುಗೆ ಸ್ಪೆಷಲ್ ಖುಷಿ ಪಡಿಸಿದ ತಲಾ

    CSK ಕ್ಯಾಂಪ್​ನಲ್ಲಿ ಕಪ್ ಗೆದ್ದ ಸಂಭ್ರಮ ಹೇಗಿತ್ತು..?

‘ಧೋನಿ ಅಂದ್ರೆ ಕ್ಯಾಪ್ಟನ್, ಕ್ಯಾಪ್ಟನ್ಸಿ ಅಂದ್ರೆ ಧೋನಿ’. ತಂಡವನ್ನು ಹೇಗೆ ಕಟ್ಟಬೇಕು, ಕಟ್ಟಿದ ಮೇಲೆ ಅದನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂದು ಜಾಗತ್ತಿಗೆ ಸಾರಿದವರ ಸಾಲಿನಲ್ಲಿ ಧೋನಿ ಕೂಡ ಒಬ್ಬರು ಅಂದರೆ ತಪ್ಪಾಗಲ್ಲ. ಯಾಕಂದ್ರೆ ಅವರಲ್ಲಿರುವ ಟೀಂ ಸ್ಪಿರಿಟ್, ನಾಯಕತ್ವದ ಗುಣ ಬೆಟ್ಟದಷ್ಟಿದೆ.

ಐಪಿಎಲ್ 2023 ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡಿದು ಸಿಎಸ್​ಕೆ ಟ್ರೋಫಿಗೆ ಮುತ್ತಿಟ್ಟಿತು. ಮೈದಾನದಲ್ಲಿ ಆಟಗಾರರ ಸೆಲೆಬ್ರೇಷನ್ ಬಳಿಕ ಟ್ರೋಫಿ ವಿತರಣೆಯ ಎಂಡಿಂಗ್ ಸೆರೆಮನಿ ನಡೆಯಿತು. ಅಂತೆಯೇ ದಿಗ್ಗಜ ಹರ್ಷ ಬೋಗ್ಲೆ ಟ್ರೋಫಿ ಪಡೆಯಲು ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ವೇದಿಕೆ ಮೇಲೆ ಕರೆಯುತ್ತಾರೆ. ಅಂತೆಯೇ ವೇದಿಕೆ ಮೇಲೆ ಬಂದ ಧೋನಿ, ಅಂಬಟಿ ರಾಯುಡು ಮತ್ತು ತಂಡಕ್ಕೆ ಗೆಲುವು ತಂದ್ಕೊಟ್ಟ ಜಡೇಜಾರನ್ನು ಬರಲು ಹೇಳ್ತಾರೆ.

ಕೊನೆಗೆ ವೇದಿಕೆಯ ಒಂದು ಭಾಗದಲ್ಲಿ ನಿಂತ ಧೋನಿ, ಜಡೇಜಾ ಮತ್ತು ಅಂಬಟಿ ರಾಯುಡು ಅವರು ಟ್ರೋಫಿ ಪಡೆದುಕೊಳ್ಳಿ ಎಂದು ಹೇಳ್ತಾರೆ. ಅದರಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಟ್ರೋಫಿಯನ್ನು ನೀಡುತ್ತಾರೆ. ನಂತರ ಎಲ್ಲರೂ ಕಪ್​ ಹಿಡಿದು ಪೋಸ್ ನೀಡುತ್ತಾರೆ. ಇದಾದ ಬೆನ್ನಲ್ಲೇ, ಎಲ್ಲಾ ಆಟಗಾರರು ವೇದಿಕೆಗೆ ಬಂದು ಸಂಭ್ರಮಿಸುತ್ತಾರೆ.

ಅಂಬಟಿ ರಾಯುಡುಗೆ ನಿನ್ನೆ ಕೊನೆಯ ಐಪಿಎಲ್ ಪಂದ್ಯ. ಮೊನ್ನೆಯಷ್ಟೇ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಐಪಿಎಲ್​ ಟೂರ್ನಿಯಲ್ಲಿ ರಾಯುಡು ಸಿಎಸ್​ಕೆ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳ ಜೊತೆ ಇದ್ದರು. ಎರಡೂ ತಂಡಗಳ ಜೊತೆ ಸೇರಿ ಒಟ್ಟು 14 ಆವೃತ್ತಿಯನ್ನು ಆಡಿರುವ ರಾಯುಡು 204 ಪಂದ್ಯಗಳನ್ನು ಆಡಿದ್ದಾರೆ. ರಾಯುಡುಗೆ ಇದೇ ಕೊನೆಯ ಐಪಿಎಲ್​ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ವೇದಿಕೆ ಮೇಲೆ ಕರೆಸಿ ಕಪ್ ತೆಗೆದುಕೊಳ್ಳುವಂತೆ ಹೇಳಿರೋದು ವಿಶೇಷವಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಒಬ್ಬರೇ ಟ್ರೋಫಿ ಸ್ವೀಕರಿಸಲಿಲ್ಲ.. ರಾಯುಡು ನಿವೃತ್ತಿ ಸ್ಮರಣೀಯವಾಗಿಸಲು ಮರೆಯದ ಧೋನಿ..!

https://newsfirstlive.com/wp-content/uploads/2023/05/IPL2023-2-1.jpg

Load More