newsfirstkannada.com

×

VIDEO: ಪೊಲೀಸ್‌ ಸಮವಸ್ತ್ರದಲ್ಲೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಫಜೀತಿಗೆ ಸಿಲುಕಿದ ಜೋಡಿ; ಆಮೇಲೆ ಏನಾಯ್ತು?

Share :

Published September 19, 2023 at 5:33pm

    ಹಲವು ಪರ-ವಿರೋಧ ಚರ್ಚೆಗೆ ಕಾರಣವಾದ ಪ್ರೀ ವೆಡ್ಡಿಂಗ್ ಹೊಸ ಚಿತ್ರ

    ತಮ್ಮ ಇಲಾಖೆಯ ಸಮವಸ್ತ್ರ ಹಾಗೂ ಕಾರುಗಳನ್ನು ಬಳಸಿಕೊಂಡ ದಂಪತಿ

    ಪೊಲೀಸ್ ಕಪಲ್ಸ್‌ ಪ್ರೀ ವೆಡ್ಡಿಂಗ್ ಫೋಟೋಶೂಟ್​ ಸಖತ್ ವೈರಲ್​

ಹೈದರಾಬಾದ್: ಇತ್ತೀಚೆಗೆ ಡಿಫರೆಂಟ್‌ ಪ್ರೀ ವೆಡ್ಡಿಂಗ್​ ಫೋಟೋಶೂಟ್​ಗಳು ಸಖತ್ ವೈರಲ್​ ಆಗುತ್ತಿವೆ. ಎಲ್ಲಿ ನೋಡಿದರು ಬೇರೆ, ಬೇರೆ ಲೊಕೇಷನ್​ನಲ್ಲಿ, ಭಿನ್ನ ವಿಭಿನ್ನ ಥೀಮ್​ಗಳಲ್ಲಿ ನವ ಜೋಡಿಗಳು ಫೋಟೋಗೆ ಪೋಸ್​ ಕೊಟ್ಟು ಗಮನ ಸೆಳೆಯುತ್ತಿದ್ದಾರೆ. ಇಲ್ಲೊಂದು ಪೊಲೀಸ್‌ ಜೋಡಿ ಪೊಲೀಸ್​ ಇಲಾಖೆಯ ಸಮವಸ್ತ್ರವನ್ನು ಬಳಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದೆ. ಪೊಲೀಸ್ ಜೋಡಿ ಖಡಕ್ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುವಂತೆ ಮಾಡಿದೆ.

ಇದನ್ನು ಓದಿ: Video: ಗಣೇಶನನ್ನೇ ಕದ್ದ ಕಳ್ಳ.. ಒಂದಲ್ಲ, ಎರಡಲ್ಲ 10 ಮೂರ್ತಿ ಹೊತ್ತು ಜೂಟ್​!

ಹೈದರಾಬಾದ್‌ ಮೂಲದ ಈ ಪೊಲೀಸ್​​​​ ದಂಪತಿ ತಮ್ಮ ಪ್ರೀ ವೆಡ್ಡಿಂಗ್ ಫೋಟೋಶೂಟ್​ಗೆ ಇಲಾಖೆಯ ಸಮವಸ್ತ್ರವನ್ನು ಬಳಸಿಕೊಂಡಿದ್ದಾರೆ. ಈ ನವಜೋಡಿ ಒಂದೇ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ, ತಮ್ಮ ಪ್ರಿ ವೆಡ್ಡಿಂಗ್​​ ಫೋಟೋಶೂಟ್​​​​ನಲ್ಲಿ ಇಲಾಖೆಯ ಸಮವಸ್ತ್ರ, ಮತ್ತು ಕಾರುಗಳನ್ನು ಬಳಸಿಕೊಂಡಿದ್ದಾರೆ.

ಸದ್ಯ ಪೊಲೀಸ್ ಜೋಡಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಇಬ್ಬರು ಇಲಾಖೆ ವಸ್ತ್ರಗಳನ್ನ ದುರುಪಯೋಗ ಮಾಡ್ಕೊಂಡಿದ್ದಾರೆ ಅಂತ ಕಿಡಿ ಕಾರುತ್ತಿದ್ದರೆ, ಮತ್ತೊಂದೆಡೆ ಕೆಲವರು ತುಂಬಾ ಚೆನ್ನಾಗಿದೆ ಅಂತ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ಈ ಫೋಟೋ ಶೂಟ್​ ಹಲವು ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಹೈದರಾಬಾದ್‌ ಸಿಟಿ ಪೊಲೀಸ್ ಕಮಿಷನರ್‌ ಸಿ.ವಿ ಆನಂದ್ ಅವರೂ ಈ ಜೋಡಿ ಪೋಟೋ ಶೂಟ್‌ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈ ದಂಪತಿ ಅನುಮತಿ ಕೇಳದೇ ಪೊಲೀಸ್ ಇಲಾಖೆಯ ಕಾರು, ಸಮವಸ್ತ್ರಗಳನ್ನ ಬಳಸಿಕೊಂಡಿದ್ದು ತಪ್ಪು. ಅನುಮತಿ ಕೇಳಿದ್ರೆ ನಾನು ಬೆಂಬಲಿಸುತ್ತಿದ್ದೆ. ಆದರೂ ಈ ಜೋಡಿ ಬಹಳ ದೊಡ್ಡ ತಪ್ಪು ಮಾಡಿಲ್ಲ. ನಾನು ಇವರಿಗೆ ಆಶೀರ್ವಾದ ಮಾಡ್ತೀನಿ. ಆದ್ರೆ, ಅನುಮತಿ ಇಲ್ಲದೇ ಬೇರೆ ಯಾರೂ ಈ ರೀತಿಯ ಫೋಟೋಶೂಟ್ ಮಾಡದಂತೆ ಎಚ್ಚರಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪೊಲೀಸ್‌ ಸಮವಸ್ತ್ರದಲ್ಲೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಫಜೀತಿಗೆ ಸಿಲುಕಿದ ಜೋಡಿ; ಆಮೇಲೆ ಏನಾಯ್ತು?

https://newsfirstlive.com/wp-content/uploads/2023/09/photoshoot.jpg

Load More