ಐರ್ಲೆಂಡ್ ವಿರುದ್ಧದ ಮೊದಲ ಟಿ-20 ಮ್ಯಾಚ್ ಹೇಗಿತ್ತು?
ಡೆಬ್ಯು ಪಂದ್ಯದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮಾಲ್..!
ಗೆಲುವಿಗೆ 140 ರನ್ ಗುರಿ ಪಡೆದಿದ್ದ ಟೀಮ್ ಇಂಡಿಯಾ
ನಿರೀಕ್ಷೆಯಂತೆ ಟೀಮ್ ಇಂಡಿಯಾ ಐರಿಸ್ ನಾಡಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಭಾರತದ ಭಾರೀ ಬೌಲಿಂಗ್ಗೆ ಐರ್ಲೆಂಡ್ ಥಂಡಾ ಹೊಡೆಯಿತು. ಈಸಿ ಟಾರ್ಗೆಟ್ ಮೆನ್ ಇನ್ ಬ್ಲೂ ಪಡೆಯ ಮುಂದಿತ್ತು. ವರುಣ ಐರ್ಲೆಂಡ್ಗೆ ಅವಕೃಪೆ ತೋರಿದ್ರೆ ಭಾರತಕ್ಕೆ ವರದಾನವಾಯಿತು. ಬೂಮ್ರಾ ಪಡೆ 2 ರನ್ಗಳ ವಿಕ್ಟರಿ ದಾಖಲಿಸಿ ಗೆಲುವಿನ ನಗೆ ಬೀರಿತು.
ಡಬ್ಲಿನ್‌ನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕರಾರುವಾಕ್ ಆಗಿ ದಾಳಿ ನಡೆಸಿತು. ಐರ್ಲೆಂಡ್ ಅಗ್ರಗಣ್ಯ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ನಡೆಸಿದ್ರೆ, ಬ್ಯಾರಿ ಮೆಕಾರ್ಥಿಯ ಮಿಂಚಿನಾಟ ಆಡಿದರು. ಉತ್ತಮ ಆರಂಭ ಪಡೆದ ಟೀಮ್ ಇಂಡಿಯಾಗೆ ಶಾಕ್ ಆಗಿತ್ತು.
ಬೂಮ್ರಾ ಇಸ್ ಬ್ಯಾಕ್ ವಿಥ್ ಬ್ಯಾಂಗ್..!
ಟಾಸ್ ಗೆದ್ದ ನಾಯಕ ಬೂಮ್ರಾ, ಆತಿಥೇಯ ಐರಿಸ್ ಲೆಕ್ಕಚಾರವನ್ನ ಬುಡಮೇಲು ಮಾಡಿದ್ರು. ಮೊದಲ ಓವರ್ನಲ್ಲೇ ಆರಂಭಿಕ ಬಾಲ್ಬಿರ್ನಿ ಹಾಗೂ ಟಕ್ಕರ್ ವಿಕೆಟ್ ಉರುಳಿಸಿದ ಬೂಮ್ರಾ, ಐರ್ಲೆಂಡ್ಗೆ ಟಕ್ಕರ್ ನೀಡಿದ್ರು. ಆ ಮೂಲಕ ಗ್ರ್ಯಾಂಡ್ ಕಮ್ಬ್ಯಾಕ್ ಮಾಡಿದ್ರು.
ಡೆಬ್ಯು ಮ್ಯಾಚ್ನಲ್ಲಿ ಪ್ರಸಿದ್ದ್ ಕಮಾಲ್
ಬೂಮ್ರಾ ಆರಂಭಿಕ ಯಶಸ್ಸು ನೀಡಿದ ಬೆನ್ನಲ್ಲೇ ದಾಳಿಗಿಳಿದ ಡೆಬ್ಯು ಸ್ಟಾರ್ ಪ್ರಸಿದ್ದ್ ಕೃಷ್ಣ, ಹ್ಯಾರಿ ಟೆಕ್ಟರ್ ಹಾಗೂ ಜಾರ್ಜ್ ಡಾಕ್ರೆಲ್ ಪೆವಿಲಿಯನ್ ಹಾದಿ ತೋರಿದ್ರೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅಪಾಯಕಾರಿ ಪೌಲ್ ಸ್ಟಿರ್ಲಿಂಗ್ಗೆ ಬ್ರೇಕ್ ಹಾಕಿದ್ರು.
ಮೆಕಾರ್ಥಿ ಮಿಂಚು.. ಭಾರತಕ್ಕೆ 140 ರನ್ಗಳ ಟಾರ್ಗೆಟ್
59 ರನ್ಗೆ 6 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಐರ್ಲೆಂಡ್, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ಕರ್ಟಿಸ್ ಕ್ಯಾಂಫರ್ ಜೊತೆಗೂಡಿದ ಬ್ಯಾರಿ ಮೆಕಾರ್ಥಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 7 ವಿಕೆಟ್ಗೆ 57 ರನ್ಗಳ ಜೊತೆಯಾಟವಾಡಿ ಚೇತರಿಕೆ ನೀಡಿದರು.
ಈ ಬೆನ್ನಲ್ಲೇ ಕರ್ಟಿಸ್ ಕ್ಯಾಂಫರ್ 39 ರನ್ಗೆ ವಿಕೆಟ್ ಒಪ್ಪಿಸಿದರು. ಓ ಬಳಿಕ ಏಕಾಂಗಿ ಹೋರಾಟ ನಡೆಸಿದ ಬ್ಯಾರಿ ಮೆಕಾರ್ಥಿ, 33 ಎಸೆತಗಳಲ್ಲಿ ತಲಾ 4 ಸಿಕ್ಸರ್, ಬೌಂಡರಿ ಒಳಗೊಂಡ 51 ರನ್ ಚಚ್ಚಿದರು. ಪರಿಣಾಮ ಐರ್ಲೆಂಡ್ 7 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತು.
ಭಾರತಕ್ಕೆ ಜೈಸ್ವಾಲ್-ಋತು ಸಾಲಿಡ್ ಓಪನಿಂಗ್!
140 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಜೈಸ್ವಾಲ್- ಋತುರಾಜ್ ಉತ್ತಮ ಆರಂಭ ನೀಡಿದ್ರು. ಆದ್ರೆ, 3 ಬೌಂಡರಿ, 1 ಸಿಕ್ಸರ್ ಒಳಗೊಂಡ 24 ರನ್ ಗಳಿಸಿದ್ದ ಜೈಸ್ವಾಲ್, ತಂಡದ ಮೊತ್ತ 46 ಆಗಿದ್ದಾಗ ಕ್ರೆಗ್ ಯಂಗ್ಗೆ ವಿಕೆಟ್ ಒಪ್ಪಿಸಿದ್ರೆ. ಈ ಬೆನ್ನಲ್ಲೇ ಬಂದ ತಿಲಕ್ ವರ್ಮಾ, ಬಂದ ಹಾದಿಗೆ ಸುಂಕವಿಲ್ಲ ಎಂಬಂತೆ ಪೆಲಿಯನ್ಗೆ ಹೆಜ್ಜೆ ಹಾಕಿದರು.
ಡೆಕ್ವರ್ಥ್ ಲೂಯಿಸ್ ಅನ್ವಯ ಭಾರತಕ್ಕೆ 2 ರನ್ ಜಯ
ಟೀಮ್ ಇಂಡಿಯಾ 6.5 ಓವರ್ಗಳಲ್ಲಿ 47 ರನ್ ಗಳಿಸಿದ್ದಾಗ ಪಂದ್ಯಕ್ಕೆ ಅಡ್ಡಿ ಪಡಿಸಿತು. ಎಡೆಬಿಡದೇ ಮಳೆ ಸುರಿದಿದ್ದರಿಂದ ಪಂದ್ಯ ಮತ್ತೆ ಆರಂಭಗೊಳ್ಳಲಿಲ್ಲ. ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತ ತಂಡ 2 ರನ್ಗಳ ಜಯಭೇರಿ ಬಾರಿಸ್ತು. ಆ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ