newsfirstkannada.com

ಯುವ ಬೌಲರ್​ಗೆ ಟಿಪ್ಸ್ ನೀಡಿದ ಕ್ಯಾಪ್ಟನ್​ ಬುಮ್ರಾ.. ಕಮಾಲ್ ಮಾಡ್ತಾರಾ ಗುರು-ಶಿಷ್ಯ..!?

Share :

18-08-2023

    ಭಾರತ ತಂಡದ ನಾಯಕತ್ವ ವಹಿಸಲಿರೋ ಬುಮ್ರಾ

    ಮುಖೇಶ್​ ಕುಮಾರ್​​​ಗೆ ಬುಮ್ರಾ ಹೇಳಿದ್ದಾದ್ರೂ ಏನು?

    ತಂಡವನ್ನು ಹೇಗೆ ಮುನ್ನಡೆಸ್ತಾರೆ ಬುಮ್ರಾ, ಕುತೂಹಲ

ಇಂದಿನಿಂದ ಭಾರತ-ಐರ್ಲೆಂಡ್​​ ಟಿ20 ಸರಣಿ ಆರಂಭಗೊಳ್ಳಲಿದೆ. ಮೆನ್​ ಇನ್ ಬ್ಲೂ ಪಡೆ ಐರಿಶ್​​ ಸಂಹಾರಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಕ್ಯಾಪ್ಟನ್ ಜಸ್​ಪ್ರೀತ್ ಬುಮ್ರಾ ಮುಖೇಶ್​ ಕುಮಾರ್​​ಗೆ ಬೌಲಿಂಗ್​​ ಟಿಪ್ಸ್ ನೀಡಿದ್ದಾರೆ. ಟ್ರೈನಿಂಗ್ ಸೆಷನ್​​​​ ವೇಳೆ ಮುಖೇಶ್​ ಕುಮಾರ್​ ಜೊತೆ ಮಾತನಾಡುತ್ತಿರುವ ಬುಮ್ರಾ ಉಪಯುಕ್ತ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದರೊಂದಿಗೆ ಕ್ಯಾಪ್ಟನ್ ಬುಮ್ರಾ ಸರಣಿ ಆರಂಭಕ್ಕೂ ಮುನ್ನವೇ ಯುವ ವೇಗಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಂದಿನಿಂದ ಆರಂಭಗೊಳ್ಳುವ 3 ಪಂದ್ಯಗಳ ಟಿ20 ಸರಣಿ ಆಗಸ್ಟ್​​ 23ಕ್ಕೆ ಮುಕ್ತಾಯಗೊಳ್ಳಲಿದೆ. ಬೆನ್ನಿನ ಗಾಯದಿಂದ ಚೇತರಿಸಿಕೊಂಡು ಬುಮ್ರಾ ತಂಡಕ್ಕೆ ನಾಯಕತ್ವ ವಹಿಸಿಕೊಂಡು ಆಗಮಿಸಿದ್ದಾರೆ.

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬುಮ್ರಾ ಭಾರತ ತಂಡದ ನಾಯಕತ್ವ ವಹಿಸುತ್ತಿದ್ದು ಯಾವ ರೀತಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುವುದು ಕ್ರಿಕೆಟ್​ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯುವ ಬೌಲರ್​ಗೆ ಟಿಪ್ಸ್ ನೀಡಿದ ಕ್ಯಾಪ್ಟನ್​ ಬುಮ್ರಾ.. ಕಮಾಲ್ ಮಾಡ್ತಾರಾ ಗುರು-ಶಿಷ್ಯ..!?

https://newsfirstlive.com/wp-content/uploads/2023/08/BUMRAH-1.jpg

Load More