ಒಂದೇ ಒಂದು ಸಿರೀಸ್, 2023 ವಿಶ್ವಕಪ್ ಭವಿಷ್ಯ ನಿರ್ಧಾರ
ಐರ್ಲೆಂಡ್ ವಿರುದ್ಧದ ಟಿ-20 ಪಂದ್ಯ ಯಾರಿಗೆ ಇಂಪಾರ್ಟೆಂಟ್?
ಇಲ್ಲಿ ಅಬ್ಬರಿಸಿದ್ರೆ ವಿಶ್ವಕಪ್ ಟಿಕೆಟ್ ಕನ್ಫರ್ಮ್ ಮಾಡಬಹುದು
ವೆಸ್ಟ್ ಇಂಡೀಸ್ ಟಿ20 ಸರಣಿ ಸೋಲಿನ ಕಹಿಯನ್ನ ಟೀಮ್ ಇಂಡಿಯಾ ಇನ್ನೂ ಮರೆತಿಲ್ಲ. ಆಗಲೇ ಮತ್ತೊಂದು ಅಸೈನ್ಮೆಂಟ್ಗೆ ಸಜ್ಜಾಗಬೇಕಿದೆ. ಇಂದಿನಿಂದ ಭಾರತ-ಐರ್ಲೆಂಡ್ ಚುಟುಕು ದಂಗಲ್ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾದಲ್ಲಿನ ಕೆಲ ಆಟಗಾರರಿಗೆ ಈ ಸರಣಿ ರಹದಾರಿ. ಟಿ20 ಸರಣಿಯಲ್ಲಿ ಕಮಾಲ್ ಮಾಡಿದರಷ್ಟೇ ಒನ್ಡೇ ವಿಶ್ವಕಪ್ಗೆ ಟಿಕೆಟ್ ಗಿಟ್ಟಿಸಿಕೊಳ್ಳಬಹುದು.
ಮೋಸ್ಟ್ ಬ್ಯುಸಿ ತಂಡವೆನಿಸಿರೋ ಟೀಮ್ ಇಂಡಿಯಾ ಅಗೈನ್ ಕೆರಳಿ ನಿಲ್ಲಲು ಸಿದ್ಧವಾಗಿದೆ. ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ ಆರಂಭಗೊಳ್ಳಲಿದೆ. ಈ ಸಿರೀಸ್ ಬುಮ್ರಾ ಬಳಗದ 6 ಆಟಗಾರರಿಗೆ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಇದು ಒನ್ಡೇ ವಿಶ್ವಕಪ್ಗೆ ರಹದಾರಿ. ಚುಟುಕು ದಂಗಲ್ನಲ್ಲಿ ಅಬ್ಬರಿಸಿ, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡ್ತಿದ್ದಾರೆ. ಐರ್ಲೆಂಡ್ ಸಿರೀಸ್ನಲ್ಲಿ ಆರ್ಭಟಿಸಿದ್ರೆ ಯಾವೆಲ್ಲ ಪ್ಲೇಯರ್ಸ್ ವಿಶ್ವಕಪ್ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಬಹುದು ಎನ್ನುವುದೇ ಕುತೂಹಲ.
ತಿಲಕ್ ವರ್ಮಾಗೆ ಸಿಗುತ್ತಾ ವಿಶ್ವಕಪ್ ಆಡುವ ಭಾಗ್ಯ..?
ತಿಲಕ್ ವರ್ಮಾ ಆಡಿದ ಡೆಬ್ಯು ಸಿರೀಸ್ನಲ್ಲಿ ರಾಕಿಂಗ್ ಪರ್ಫಾಮೆನ್ಸ್ ನೀಡಿ ಸೆಲೆಕ್ಟರ್ಸ್ ಗಮನ ಸೆಳೆದಿದ್ದಾರೆ. 20ರ ಆ್ಯಂಗ್ರಿ ಯಂಗ್ಮ್ಯಾನ್ ಐರಿಷ್ ನಾಡಲ್ಲಿ ಜಬರ್ದಸ್ತ್ ಆಟವಾಡಿದ್ರೆ ವಿಶ್ವಕಪ್ ರೇಸ್ಗೆ ಎಂಟ್ರಿಕೊಡಲಿದ್ದಾರೆ. ಕ್ಯಾಪ್ಟನ್ ರೋಹಿತ್ಗೆ ತಿಲಕ್ರನ್ನ ವಿಶ್ವಕಪ್ನಲ್ಲಿ ಆಡಿಸುವ ಒಲವಿದೆ. ಕ್ರಿಕೆಟ್ ಎಕ್ಸ್ಫರ್ಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್ ಕೂಡ ಹೈದ್ರಾಬಾದ್ ಪುತ್ತರ್ ಪರ ಬ್ಯಾಟ್ ಬೀಸಿದ್ದಾರೆ. ಐರ್ಲೆಂಡ್ ಸರಣಿಯನ್ನ ಎನ್ಕ್ಯಾಶ್ ಮಾಡಿಕೊಂಡ್ರೆ ವಿಶ್ವಕಪ್ ಆಡುವ ಬಿಗ್ ಡ್ರೀಮ್ ನನಸಾಗಲಿದೆ.
ಖಚಿತವಿಲ್ಲ ವಿಶ್ವಕಪ್ ಟಿಕೆಟ್..ಆಡಿದರಷ್ಟೇ ಬುಮ್ರಾ ಸೇಫ್..!
ವರ್ಷದ ಬಳಿಕ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಐರ್ಲೆಂಡ್ ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಬುಮ್ರಾಗೆ ವಿಶ್ವಕಪ್ ಟಿಕೆಟ್ ಫಿಕ್ಸ್ ಎಂದಲ್ಲ. ಬೆನ್ನು ನೋವಿನಿಂದ ರಿಕವರಿ ಆಗಿ ತಂಡಕ್ಕೆ ಮರಳಿರೋ ಬುಮ್ರಾ ವಿಕೆಟ್ ಗೊಂಚಲು ಕಟ್ಟಬೇಕಿದೆ. ಹಳೇ ರಿದಮ್ ಮರುಕಳಿಸೋದ್ರ ಜೊತೆ ಫಿಟ್ನೆಸ್ ಕಾಯ್ದುಕೊಳ್ಳುವುದು ಅನಿವಾರ್ಯ. ಬುಮ್ರಾ ಎಷ್ಟು ಫಿಟ್ ಆಗಿದ್ದಾರೆ, ಎಷ್ಟು ಪರಿಣಾಮಕಾರಿ ಆಗಿ ಬೌಲಿಂಗ್ ಮಾಡಬಲ್ಲರು ಅನ್ನೋದಕ್ಕೆ ಐರ್ಲೆಂಡ್ ಸರಣಿಯಲ್ಲಿ ಆನ್ಸರ್ ಸಿಗಲಿದೆ.
ಕೃಷ್ಣಗೆ ಇರೊದೊಂದೇ ಚಾನ್ಸ್.. ಮಾಡ್ತಾರಾ ಮ್ಯಾಜಿಕ್..?
ಕಮ್ಬ್ಯಾಕರ್ ಪ್ರಸಿದ್ಧ್ ಕೃಷ್ಣಗೆ ಐರ್ಲೆಂಡ್ ಸರಣಿ ಡು ಆರ್ ಡೈ ಅಂದ್ರು ತಪ್ಪಲ್ಲ. ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿರೋ ಕನ್ನಡದ ಕಲಿ ಒಂದೇ ಸಿರೀಸ್ನಲ್ಲಿ ಕೆಪಾಸಿಟಿ ಪ್ರೂವ್ ಮಾಡಬೇಕಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ವಿಶ್ವಕಪ್ ಆಡುವುದು ಫಿಕ್ಸ್. ಹೀಗಾಗಿ ಪ್ರಸಿದ್ಧ್ಗೆ ಮೊದಲ ಬ್ಯಾಕ್ಅಪ್ ಬೌಲರ್ ಆಗಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಐರ್ಲೆಂಡ್ ಸರಣಿಯಲ್ಲಿ ಫ್ಲಾಫ್ ಶೋ ನೀಡಿದ್ರೆ ಆ ಅವಕಾಶವು ಕಮರಿ ಹೋಗಲಿದೆ.
2 ಕೈಯಿಂದ ಸುವರ್ಣಾವಕಾಶ ಬಾಚಿಕೊಳ್ತಾರಾ ಸುಂದರ್..?
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಇದು ಬೆಸ್ಟ್ ಚಾನ್ಸ್. ಕೀ ಪ್ಲೇಯರ್ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ಗೆ ರೆಸ್ಟ್ ನೀಡಲಾಗಿದೆ. ತಂಡದಲ್ಲಿ ಯಾರು ಆಫ್ ಸ್ಪಿನ್ನರ್ಗಳಿಲ್ಲ. ಇದ್ದ ಲೆಜೆಂಡ್ರಿ ಸ್ಪಿನ್ನರ್ ಅಶ್ವಿನ್ ವಿಶ್ವಕಪ್ ಆಡಲ್ಲ. ಸುಂದರ್ ಆಫ್ ಸ್ಪಿನ್ ಜೊತೆ ಲೋವರ್ ಆರ್ಡರ್ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಐರ್ಲೆಂಡ್ ಸಾಲಿಡ್ ಪಫಾಮೆನ್ಸ್ ನೀಡಿ ಗೋಲ್ಡನ್ ಚಾನ್ಸ್ ಅನ್ನ 2 ಕೈಯಿಂದ ಬಾಚಿಕೊಳ್ತಾರಾ, ಇಲ್ಲ ಕೈಚೆಲ್ತಾರಾ ಅನ್ನೋದು ಅವರ ಆಟದ ಮೇಲೆನೆ ನಿಂತಿದೆ.
ಮುಖೇಶ್ VS ಆರ್ಷ್ದೀಪ್..ಯಾರಿಗಿದೆ ಚಾನ್ಸ್..?
ಇನ್ನು ಯುವವೇಗಿ ಅರ್ಷ್ದೀಪ್ ಸಿಂಗ್ ಹಾಗೂ ಮುಖೇಶ್ ಕುಮಾರ್ಗು ಐರ್ಲೆಂಡ್ ಸಿರೀಸ್ ವೆರಿ ವೆರಿ ಇಂಪಾರ್ಟೆಂಟ್. ಇಬ್ಬರಿಗೆ ವಿಶ್ವಕಪ್ ಪ್ರಮುಖ ತಂಡದಲ್ಲಿ ಸ್ಥಾನ ಸಿಗದಿದ್ರೂ ಬ್ಯಾಕ್ಅಪ್ ಕೋಟಾದಲ್ಲಿ ಸ್ಥಾನ ಪಡೆಯಬಹುದು. ಅದು ಒಬ್ಬರಿಗೆ ಮಾತ್ರ ಅವಕಾಶವಿದೆ. ಆ ಅದೃಷ್ಟವಂತ ಯಾರು?. ಅರ್ಷ್ದೀಪಾ ಇಲ್ಲ ಮುಖೇಶ್ ಕುಮಾರ್ ಆ..? ಅನ್ನೋದು ಟಿ20 ಸರಣಿಯಲ್ಲಿ ನಿರ್ಧಾರವಾಗಲಿದೆ.
ಐರ್ಲೆಂಡ್ ಟಿ20 ಸಿರೀಸ್ ಮೇಲಿನ 6 ಆಟಗಾರರಿಗೆ ಅಗ್ನಿಪರೀಕ್ಷೆಯ ಕಣಜ. ಈ ಚಕ್ರವ್ಯೂಹ ಬೇಧಿಸಿ ವಿಶ್ವಕಪ್ ಅಖಾಡಕ್ಕೆ ಎಂಟ್ರಿಕೊಡೋಱರು ಅನ್ನೋದನ್ನ ಕಾದುನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ