ಐರ್ಲೆಂಡ್ ಸಿರೀಸ್ ಯುವ ಆಟಗಾರರ ಭವಿಷ್ಯ ಬದಲಿಸುತ್ತಾ..?
ಶಿವಂ ದುಬೆಗೆ ಸವಾಲು, ಸಂಜು ಸ್ಯಾಮ್ಸನ್ಗೆ ಕೊನೆ ಅವಕಾಶ
ಡೆಬ್ಯೂ ಕನಸು ಕಾಣ್ತಿರುವ ಯಂಗ್ಸ್ಟಾರ್ಸ್ ಮುಂದಿದೆ ಚಾಲೆಂಜ್
ಐಪಿಎಲ್ ಪರ್ಫಾಮೆನ್ಸ್ ಮೂಲಕ ಗಮನ ಸೆಳೆದಿದ್ದ ಈ ಆಟಗಾರರು, ಈಗ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಇಲ್ಲಿ ಆಡೋ ಆಟಕ್ಕೆ, ಈ ಕ್ರಿಕೆಟಿಗರ ಹಣೆಬರಹವನ್ನೇ ಬದಲಿಸುವ ತಾಕತ್ತಿದೆ. ಹಾಗಾದ್ರೆ, ಐರ್ಲೆಂಡ್ ಸರಣಿ ಯಾವೆಲ್ಲ ಐಪಿಎಲ್ ಸ್ಟಾರ್ಗಳಿಗೆ ಮೋಸ್ಟ್ ಇಂಪಾರ್ಟೆಂಟ್ ಅನ್ನೋದು ಗೊತ್ತಾ..?
ಐಪಿಎಲ್ನಿಂದ ಜೀವನವನ್ನೇ ಬದಲಿಸಿಕೊಂಡ ಯುವ ಆಟಗಾರರು, ಇದೀಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಐರ್ಲೆಂಡ್ ಟೂರ್ನಲ್ಲಿ ಈ ಯಂಗ್ಗನ್ಗಳ ಪಾಲಿಗೆ ಸಿಕ್ಕಾಪಟ್ಟೆ ಇಂಪಾರ್ಟೆಂಟ್. ಇಲ್ಲಿ ಮಿಂಚಿದ್ರೆ, ಕರಿಯರ್ಗೆ ಮತ್ತೊಂದು ತಿರುವು ಸಿಗಲಿದೆ.
ಕ್ಯಾಪ್ಟನ್ಸಿ ಸ್ಕಿಲ್ಸ್ ನಿರೂಪಿಸಬೇಕಿದೆ ಋತುರಾಜ್.!
ಕಳೆದ 4 ಐಪಿಎಲ್ ಸೀಸನ್ಗಳಲ್ಲಿ ರನ್ ಕೊಳ್ಳೆ ಹೊಡೆದಿರುವ ಋತುರಾಜ್, ಕನ್ಸಿಸ್ಟೆನ್ಸಿ ಪರ್ಫಾರ್ಮರ್. ಟೀಮ್ ಇಂಡಿಯಾ ಪರ 9 ಟಿ20, 2 ಏಕದಿನ ಪಂದ್ಯಗಳನ್ನಾಡಿರುವ ಋತುರಾಜ್ಗೆ ಐರ್ಲೆಂಡ್ ಟೂರ್ನಲ್ಲಿ ಉಪನಾಯಕ ಪಟ್ಟ ಒಲಿದಿದೆ. ಮುಂದಿನ ಏಷ್ಯನ್ ಗೇಮ್ಸ್ಗೆ ನಾಯಕನಾಗಿ ಆಯ್ಕೆಯಾಗಿರೋ, ಋತುರಾಜ್, ಐರ್ಲೆಂಡ್ ಟೂರ್ನಲ್ಲಿ ಕ್ಯಾಪ್ಟನ್ಸಿ ಸ್ಕಿಲ್ಸ್ ನಿರೂಪಿಸಬೇಕಿದೆ.
ರಿಂಕು ಸಿಂಗ್ ಬದಲಿಸಿಕೊಳ್ತಾರಾ ಭವಿಷ್ಯ..?
ರಿಂಕು ಸಿಂಗ್.. ಎಕ್ಸ್-ಫ್ಯಾಕ್ಟರ್ ಪ್ಲೇಯರ್.. ಐಪಿಎಲ್ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಮೂಲಕವೇ ಸದ್ದು ಮಾಡಿದ್ದ ರಿಂಕು, ದಿ ಬೆಸ್ಟ್ ಫಿನಿಷರ್ ಅನಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ 5ನೇ ಕ್ರಮಾಂಕದಲ್ಲಿ ಮಾಡಿದ್ದ ಚಮತ್ಕಾರವೇ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಡಿದ್ರೆ, ರಿಂಕು ಸಿಂಗ್ರ ಭವಿಷ್ಯ ಬದಲಾಗೋದ್ರಲ್ಲಿ ಎರಡು ಮಾತಿಲ್ಲ. ಟೀಮ್ ಇಂಡಿಯಾದ ಟಿ20 ತಂಡದಲ್ಲಿ 5ನೇ ಕ್ರಮಾಂಕ ಬಡವಾಗಿದೆ. ಹೀಗಾಗಿ ರಿಂಕು ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಮುಂದುವರಿಸಿದ್ರೆ, ಟಿ20 ವಿಶ್ವಕಪ್ನಲ್ಲಿ ಸ್ಥಾನ ಗ್ಯಾರಂಟಿ.
ಜಿತೇಶ್ ಶರ್ಮಾಗೂ ಸಿಕ್ಕಿದೆ ಅತ್ಯುತ್ತಮ ಅವಕಾಶ..!
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮೇಲೂ ನಿರೀಕ್ಷೆಗಳ ಬೆಟ್ಟವೇ ಇದೆ. ರಿಷಭ್ ಅನುಪಸ್ಥಿತಿ, ಇಶಾನ್ ಕಿಶನ್ ಇನ್ಕನ್ಸಿಸ್ಟೆನ್ಸಿ, ಸಂಜು ಸ್ಯಾಮ್ಸನ್ ವೈಫಲ್ಯ ತಂಡಕ್ಕೆ ಕಾಡ್ತಿದೆ. ಈಗೇನಾದ್ರೂ, ಉತ್ತಮ ಪವರ್ ಹಿಟ್ಟಿಂಗ್ ಸ್ಕಿಲ್ಸ್ ಹೊಂದಿರುವ ಈ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಿಂಚಿದ್ರೆ, ಸ್ಥಾನ ಸೀಲ್ ಮಾಡಿಕೊಳ್ಳುವ ಅವಕಾಶವಿದೆ.
ಶಿವಂ ದುಬೆಗೆ ಆಗುತ್ತಾ ಲೈಫ್ ಚೇಂಜಿಂಗ್ ಸಿರೀಸ್..|
ಹಲವು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿರುವ ಶಿವಂ ದುಬೆಗೆ ಇದು ಡು ಆರ್ ಡೈ ಸಿರೀಸ್. ಐಪಿಎಲ್ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿ ಗಮನ ಸೆಳೆದಿರೋ ದುಬೆ, ಈ ಪ್ರವಾಸದಲ್ಲೂ ಮಿಂಚಬೇಕಿದೆ. ಈ ಒಂದು ಸರಣಿಯಲ್ಲಿ ದುಬೆ, ಎದುರಾಳಿಯನ್ನ ದಂಗು ಬಡಿಸಿದ್ರೆ, 2024ರ ಟಿ20 ವಿಶ್ವಕಪ್ ಟಿಕೆಟ್ ಗಿಟ್ಟಿಸಿದರೂ ಅಚ್ಚರಿ ಪಡಬೇಕಿಲ್ಲ.
ಸತತ ವೈಫಲ್ಯ ಅನುಭವಿಸ್ತಿರುವ ಸಂಜು ಸ್ಯಾಮ್ಸನ್ಗೂ ಇದು ಅಗ್ನಿಪರೀಕ್ಷೆಯ ಕಣ. ಈ ಒಂದು ಸರಣಿಯಲ್ಲಿ ಸಂಜು ವೈಫಲ್ಯ ಅನುಭವಿಸಿದ್ರೆ, ಸ್ಯಾಮ್ಸನ್ ಟೀಮ್ ಇಂಡಿಯಾದಿಂದ ಔಟ್ ಆಗೋದು ಖಾಯಂ. ಐರ್ಲೆಂಡ್ ಸರಣಿ ಹೈವೋಲ್ಟೇಜ್ ಎನಿಸದಿದ್ದರೂ, ಟೀಮ್ ಇಂಡಿಯಾದ ಕೆಲ ಆಟಗಾರರ ಪಾಲಿಗೆ ಲೈಫ್ ಚೇಜಿಂಗ್ ಸಿರೀಸ್ ಆಗಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ