ಟೀಂ ಇಂಡಿಯಾದ 8ನೇ ಕ್ರಮಾಂಕದಲ್ಲಿ ಯಾರು ಆಡಬೇಕು?
ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಪ್ಲೇಯರ್ ಇರ್ಫಾನ್ ಹೀಗಂದ್ರು!
ಈತನೇ ಟೀಂ ಇಂಡಿಯಾಗೆ ಬೇಕು ಎಂದು ಇರ್ಫಾನ್ ಪಠಾಣ್!
ಸದ್ಯದಲ್ಲೇ 2023 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಸದ್ಯ ಏಷ್ಯಾಕಪ್ ಗೆದ್ದಿರೋ ಟೀಂ ಇಂಡಿಯಾ ಹೇಗಾದರೂ ಮಾಡಿ ವಿಶ್ವಕಪ್ ಗೆಲ್ಲಲೇಬೇಕು ಎಂದು ಮುಂದಾಗಿದೆ. ಈ ಮಧ್ಯೆ ಟೀಂ ಇಂಡಿಯಾದಲ್ಲಿ 8ನೇ ಕ್ರಮಾಂಕದಲ್ಲಿ ಯಾರು ಆಡಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಮಾತಾಡಿದ್ದಾರೆ.
ಈ ಸಂಬಂಧ ಮಾತಾಡಿದ ಇರ್ಫಾನ್ ಪಠಾಣ್, 8ನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಡಲೇಬೇಕು. ಇವರು ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರೋ ಅಕ್ಷರ್ ಪಟೇಲ್ ಪ್ಲೇಯಿಂಗ್ ಎಲೆವೆನ್ನಲ್ಲಿ ಆಡಬೇಕು ಎಂದರು.
ಶಾರ್ದೂಲ್ ಠಾಕೂರ್, ವಾಶಿಂಗ್ಟನ್ ಸುಂದರ್ ಅವರಿಗಿಂತಲೂ ಅಕ್ಷರ್ ಉತ್ತಮ ಆಯ್ಕೆ. ಇವರು ರವೀಂದ್ರ ಜಡೇಜಾಗಿಂತಲೂ ಭಿನ್ನವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದ್ದರಿಂದ ಇವರಿಗೆ ಚಾನ್ಸ್ ಕೊಡಿ ಎಂದು ಹೇಳಿದರು.
ಅಕ್ಷರ್ ಪಟೇಲ್ ಪರ್ಫಾಮೆನ್ಸ್ ಹೇಗಿತ್ತು..?
ಇದುವರೆಗೂ ಅಕ್ಷರ್ ಪಟೇಲ್ 34 ಏಕದಿನ ಪಂದ್ಯ ಆಡಿದ್ದಾರೆ. ಜತೆಗೆ 20.04 ಸರಾಸರಿಯಲ್ಲಿ 481 ರನ್ ಗಳಿಸಿದ್ದಾರೆ. ಕಳೆದ ವರ್ಷ ಬ್ಯಾಟರ್ ಆಗಿ ಗಮನಾರ್ಹ ಪ್ರದರ್ಶನ ನೀಡಿದ್ದು, ಅದರಲ್ಲೂ 6 ಪಂದ್ಯಗಳಲ್ಲಿ 120 ಸ್ಟ್ರೈಕ್ ರೇಟ್ನೊಂದಿಗೆ 168 ರನ್ ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ