newsfirstkannada.com

ಗ್ಯಾಸ್ ಚೇಂಬರ್ ಆಗಿದ್ಯಾ ದೆಹಲಿ? ಉಸಿರುಗಟ್ಟೋ ಪರಿಸ್ಥಿತಿಗೆ ಆಪ್ ಸರ್ಕಾರವೇ ಕಾರಣ ಎಂದ BJP

Share :

03-11-2023

    ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 600-700ಕ್ಕೂ ಹೆಚ್ಚು

    ಕೇಜ್ರಿವಾಲ್ ಆಡಳಿತದಲ್ಲಿ ದೆಹಲಿ ಗ್ಯಾಸ್ ಚೇಂಬರ್ ಎಂದ ಬಿಜೆಪಿ

    ಪ್ರಾಥಮಿಕ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನರು ಉಸಿರಾಡೋಕೂ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯ ಹಲವೆಡೆ ವಾಯು ಗುಣಮಟ್ಟ ಸೂಚ್ಯಂಕ 600-700ಕ್ಕೂ ಹೆಚ್ಚಾಗಿದೆ. ಆನಂದ್‌ ವಿಹಾರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 999ಕ್ಕೆ ತಲುಪಿದ್ದು, ಅಪಾಯದ ಮುನ್ಸೂಚನೆ ನೀಡಿದೆ. ಇದರಿಂದ ವಾಯು ಮಾಲಿನ್ಯ ಗಂಭೀರ ಸ್ವರೂಪಕ್ಕೆ ತಿರುಗಿದೆ.

ದೆಹಲಿ ವಾಯುಮಾಲಿನ್ಯ ಹಿಂದೆಂದೂ ಕಾಣದ ಸ್ಥಿತಿಗೆ ತಲುಪಿರೋದು ಆತಂಕಕ್ಕೆ ಕಾರಣವಾಗಿದೆ. ಈ ವಾತಾವರಣದಲ್ಲಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪ್ರಾಥಮಿಕ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿದೆ. ಕಟ್ಟಡ ನಿರ್ಮಾಣ ಕಾಮಗಾರಿ, ಕೆಲವು ಡೀಸೆಲ್ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ.

ಇನ್ನು, ದೆಹಲಿ ವಾಯುಮಾಲಿನ್ಯದ ವಾತಾವರಣ ರಾಜಕೀಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ. ಆಪ್ ನಾಯಕರು ಕೇಂದ್ರ ಸಚಿವರು ಎಲ್ಲಿದ್ದಾರೆ ಎಂದು ಬಿಜೆಪಿ ನಾಯಕರತ್ತ ಬೊಟ್ಟು ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಈ ಪರಿಸ್ಥಿತಿಗೆ ದೆಹಲಿಯ ಆಮ್ ಆದ್ಮಿ ಸರ್ಕಾರವೇ ಕಾರಣ ಎನ್ನುತ್ತಿದ್ದಾರೆ.

ಬಿಜೆಪಿ ನಾಯಕ ಶೆಹ್ಜಾದ್ ಪೂನಾವಾ ಅವರು, ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಡಳಿತದಲ್ಲಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಕೇಜ್ರಿವಾಲ್ ಅವರು ಕಳೆದ 4-5 ವರ್ಷಗಳಲ್ಲಿ ವಾಯು ಮಾಲಿನ್ಯ ಗುಣಮಟ್ಟವನ್ನು ನಿಯಂತ್ರಿಸುವ ಭರವಸೆ ನೀಡಿದ್ದರು. ಆದ್ರೀಗ ಪಕ್ಕದ ಪಂಜಾಬ್ ಸರ್ಕಾರವೇ ಬೆಂಕಿ ಹಚ್ಚುವ ಮೂಲಕ ಮಾಲಿನ್ಯಕ್ಕೆ ಕಾರಣವಾಗಿದೆ. ಇಷ್ಟಾದರೂ ಆಪ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ದೆಹಲಿಯ ಈ ಪರಿಸ್ಥಿತಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರವೇ ಕಾರಣ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾಸ್ ಚೇಂಬರ್ ಆಗಿದ್ಯಾ ದೆಹಲಿ? ಉಸಿರುಗಟ್ಟೋ ಪರಿಸ್ಥಿತಿಗೆ ಆಪ್ ಸರ್ಕಾರವೇ ಕಾರಣ ಎಂದ BJP

https://newsfirstlive.com/wp-content/uploads/2023/11/Delhi-Pollution.jpg

Load More