newsfirstkannada.com

ಸಿಎಂ ಸಿದ್ದು ಸರ್ಕಾರದ ಬುಡಕ್ಕೆ ವರ್ಗಾವಣೆ ದಂಧೆ ಬಾಂಬ್; ಡಾ.ಯತೀಂದ್ರರನ್ನೇ ಟಾರ್ಗೆಟ್​​ ಮಾಡ್ತಿರೋದೇಕೆ ಕುಮಾರಸ್ವಾಮಿ?

Share :

30-06-2023

    ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ವರ್ಗಾವಣೆ ದಂಧೆಯ ಮಸಿ

    ಸಿಎಂ ಸಿದ್ದು, ಡಿಸಿಎಂ ಉತ್ತರಿಸಬೇಕು ಅಂತ ಬಿಜೆಪಿ ಪಟ್ಟು

    ಡಾ.ಯತೀಂದ್ರರನ್ನೇ ಟಾರ್ಗೆಟ್​ ಮಾಡುತ್ತಿದ್ದಾರಾ ಹೆಚ್​ಡಿಕೆ?

ಬೆಂಗಳೂರು: ಗ್ಯಾರಂಟಿಗಳ ಗುಂಗಲ್ಲಿ ಕಳೆದೋಗಿರೋ ಸರ್ಕಾರಕ್ಕೆ ವರ್ಗಾವಣೆ ದಂಧೆಯ ಆರೋಪ ಸುತ್ತಿಕೊಂಡಿದೆ. ಜೆಡಿಎಸ್‌-ಬಿಜೆಪಿ ಎರಡೂ ಒಂದಾಗಿ ಈಗಷ್ಟೇ ಅಂಬೆಗಾಲಿಡ್ತಿರೋ ಸಿದ್ದರಾಮಯ್ಯ ಸರ್ಕಾರಕ್ಕೆ ದಂಧೆಯ ಸೋಂಕನ್ನ ಮೆತ್ತುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರವನ್ನೇ ಹಿಡಿದು ಕೈ ನಾಯಕರನ್ನ ಕುಟುಕುತ್ತಿದ್ದಾರೆ. ವಿಪಕ್ಷಗಳ ಈ ಆರೋಪಕ್ಕೆ ಆಡಳಿತ ಪಕ್ಷದ ಸಚಿವರು ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಕಳೆದ ಸರ್ಕಾರವನ್ನ ಕಾಡಿದ್ದ ಕಮಿಷನ್ ಭೂತ ಇದೀಗ ಸಿದ್ದರಾಮಯ್ಯ ಸರ್ಕಾರದ ಬೆನ್ನೇರಿದೆ. ಅಕ್ರಮ ನಡೆದಿದ್ಯೋ ಇಲ್ವೋ? ಆದ್ರೆ, ವಿಪಕ್ಷಗಳ ನಾಯಕರ ಬಾಯಲ್ಲಿ ದಂಧೆ ಎಂಬ ಶಬ್ದ ನಲಿದಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಮುಖಕ್ಕೆ ವರ್ಗಾವಣೆ ದಂಧೆಯ ಮಸಿ ಮೆತ್ತುವ ಮಾತುಗಳನ್ನ ಕಮಲ-ದಳ ನಾಯಕರು ಮಾತಾಡ್ತಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಪೋಸ್ಟಿಂಗ್ ದಂಧೆ ಸರ್ಕಾರವೇ?

ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ್ಸಂಟೇಜ್‌ ಆರೋಪವನ್ನ ಮಾಡುತ್ತಲೇ ಇದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲೂ ದಂಧೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಹಸ್ತಪಾಳಯವನ್ನ ಕಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವರ್ಗಾವಣೆ ದಂಧೆಯ ಬಾಣ ಬಿಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಇದೇ ವರ್ಗಾವಣೆ ದಂಧೆಯ ಆರೋಪವನ್ನೇ ಅಸ್ತ್ರ ಮಾಡಿಕೊಟ್ಟಿದ್ದಾರೆ.

ಇದೀಗ ಇದೇ ವರ್ಗಾವಣೆ ಬ್ರಹ್ಮಾಸ್ತ್ರವನ್ನೇ ಹಿಡಿದು ಕಾಂಗ್ರೆಸ್‌ಗೆ ನಿಮ್ಮದೇನು ಪೋಸ್ಟಿಂಗ್ ದಂಧೆ ಸರ್ಕಾರವೇ ಅಂತಾ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ವರ್ಗಾವಣೆ ದಂಧೆ ಆರೋಪದ ಬಗ್ಗೆ ಸಿಎಂ, ಡಿಸಿಎಂ ಉತ್ತರಿಸಬೇಕು ಅಂತಾ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ. ಇತ್ತ ವರ್ಗಾವಣೆ ದಂಧೆ ಮೂಲಕ ಐದು ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್‌ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡಿದೆ ಅಂತಾ ಅಶೋಕ್ ಗುಡುಗಿದ್ದಾರೆ.

ಸುಖಾ ಸುಮ್ಮನೆ ಏಕೆ ಯತೀಂದ್ರರನ್ನ ಟಾರ್ಗೆಟ್ ಮಾಡ್ತೀರಾ?

ಕಾಂಗ್ರೆಸ್ ಸರ್ಕಾರದಲ್ಲೂ ದೊಡ್ಡ ಮಟ್ಟದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೆಚ್‌.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಬುಡಕ್ಕೆ ವರ್ಗಾವಣೆ ದಂಧೆ ಬಾಂಬ್ ಇಟ್ಟಿದ್ರು. ಅಲ್ಲದೇ ವರ್ಗಾವಣೆ ದಂಧೆ ಆರೋಪಕ್ಕೆ ಮಾಜಿ ಶಾಸಕ ಯತೀಂದ್ರರನ್ನ ಎಳೆದು ತಂದಿದ್ರು. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರೋ ಆರೋಪಗಳಿಗೆ ಸಚಿವ ಎಂ.ಬಿ ಪಾಟೀಲ್ ಕೌಂಟರ್‌ ಕೊಟ್ಟಿದ್ದಾರೆ. ಸುಖಾ ಸುಮ್ಮನೆ ಯತೀಂದ್ರರನ್ನ ಯಾಕೆ ಇದ್ರಲ್ಲಿ ಎಳೆದು ತರ್ತೀರಾ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಕಮಿಷನ್ ಆರೋಪಕ್ಕೆ ರಾಜ್ಯದಲ್ಲಿ ಅಧಿಕಾರವನ್ನೇ ಕಳೆದುಕೊಂಡ ಬಿಜೆಪಿ ಈಗ ಕಾಂಗ್ರೆಸ್ ಸ್ಟ್ರಾಟಜಿಯನ್ನೇ ಪಾಲಿಸುತ್ತಿದೆ. ದಂಧೆ, ಹಗರಣಗಳ ಸುಳಿಯಲ್ಲಿ ಸಿದ್ದು ಸರ್ಕಾರವನ್ನ ಸಿಲುಕಿಸೋ ಹುನ್ನಾರದಲ್ಲಿ ವಿಪಕ್ಷಗಳು ತೊಡಗಿವೆ. ಇದೀಗ ಲೋಕಸಭೆ ಚುನಾವಣೆ ಹೊತ್ತಲ್ಲಿ ಈ ವರ್ಗಾವಣೆ ದಂಧೆ ಆರೋಪಕ್ಕೆ ಸಿದ್ದರಾಮಯ್ಯ, ಡಿಕೆಶಿ ಅಂಡ್ ಟೀಂ ಹೇಗೆ ತಿರುಗೇಟು ಕೊಡುತ್ತೆ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದು ಸರ್ಕಾರದ ಬುಡಕ್ಕೆ ವರ್ಗಾವಣೆ ದಂಧೆ ಬಾಂಬ್; ಡಾ.ಯತೀಂದ್ರರನ್ನೇ ಟಾರ್ಗೆಟ್​​ ಮಾಡ್ತಿರೋದೇಕೆ ಕುಮಾರಸ್ವಾಮಿ?

https://newsfirstlive.com/wp-content/uploads/2023/06/YATINDRA.jpg

Load More