newsfirstkannada.com

×

ಅಂಬಾನಿ ಫ್ಯಾಮಿಲಿಗೆ ಗುಡ್‌ನ್ಯೂಸ್‌.. ತಾಯಿಯಾಗಲಿದ್ದಾರಾ ರಾಧಿಕಾ ಮರ್ಚೆಂಟ್? ನೀತಾ ಕೇರಿಂಗ್‌ ವಿಡಿಯೋ ವೈರಲ್!

Share :

Published September 9, 2024 at 8:15pm

Update September 9, 2024 at 8:20pm

    ಮುಖೇಶ್ ಅಂಬಾನಿ ಮನೆಯಲ್ಲಿ ಮತ್ತೊಂದು ಶುಭಕಾರ್ಯದ ಸುದ್ದಿ ವೈರಲ್‌!

    ಗಣೇಶ ಹಬ್ಬದಂದು ರಾಧಿಕಾ ಅಂಬಾನಿಯನ್ನು ಕಂಡು ನೆಟ್ಟಿಗರು ಹೇಳಿದ್ದೇನು?

    ಸದ್ಯದಲ್ಲಿಯೇ ತಾಯಿಯಾಗಲಿದ್ದರಾ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್‌?

ಮುಂಬೈ: ಕಳೆದ ಜುಲೈ 12ರಂದು ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರ ಕೈ ಹಿಡಿದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್, ಹಾಲಿವುಡ್‌​​​ ದಂಡೇ ಆ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಯ ವೈಭವ ನೋಡಿದ್ರೆ ಇಂದ್ರಲೋಕವೇ ಧರೆಗಳಿದು ಬಂದಿದೆಯೇನೋ ಅನ್ನುವಷ್ಟು ಅದ್ಧೂರಿ, ವಿಜೃಂಭಣೆಯಿಂದ ನಡೆದಿತ್ತು. ಇದೀಗ ಈ ಕುಟುಂಬ ಮತ್ತೊಂದು ಶುಭಕಾರ್ಯಕ್ಕೆ ಅಣಿಯಾಗುವ ಸಮಯ ಬಂದಿದೆಯಾ ಅನ್ನೋ ಪ್ರಶ್ನೆಗಳನ್ನು ಮೂಡಿಸುತ್ತಿವೆ. ಗಣೇಶ ಹಬ್ಬದ ವೈಭವದಲ್ಲಿ ಮುಳುಗಿದ್ದ ಅಂಬಾನಿ ಫ್ಯಾಮಿಲಿಯ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ರಾಧಿಕಾ ಅಂಬಾನಿ ಸದ್ಯದಲ್ಲಿಯೇ ತಾಯಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಅನಂತ್​ ಅಂಬಾನಿ, ರಾಧಿಕಾಗೆ ಗಣ್ಯರಿಂದ ಸಿಕ್ಕ ಭರ್ಜರಿ ಗಿಫ್ಟ್​ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ! 

ಇದನ್ನೂ ಓದಿ: ಅನಂತ್, ರಾಧಿಕಾ ಲವ್​ ಸ್ಟೋರಿಗೆ ಹೊಸ ಟ್ವಿಸ್ಟ್​; ಬಾಲಿವುಡ್​ ನಟನ ಮಗನಿಗೆ ₹30 ಕೋಟಿ ಗಿಫ್ಟ್​ ಕೊಟ್ರಾ​ ಅಂಬಾನಿ? 

ಇದನ್ನೂ ಓದಿ:ಗಾಬರಿ ಆಗಬೇಡಿ! ಭೂತ ಹ್ಯಾಕರ್ಸ್ ಎಂಟ್ರಿ ಆಗಿದೆ, ಇದು ಸತ್ತ ವ್ಯಕ್ತಿಗಳ ಟಾರ್ಗೆಟ್..! ​

ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಕ್ಷಿಯಾಗಲು ಮುಖೇಶ್ ಅಂಬಾನಿಯ ನಿವಾಸವಾದ ಅಂಟಿಲಿಯಾಗೆ ಬಾಲಿವುಡ್​ನ ಹಲವು ನಟರ ಸಾಕ್ಷಿಯಾಗಿದ್ದರು. ರಾಧಿಕಾ ಹಾಗೂ ಅನಂತ ವಿವಾಹದ ನಂತರ ಮತ್ತೊಂದು ಅದ್ಧೂರಿ ಮಹೋತ್ಸವಕ್ಕೆ ಅಂಟಿಲಿಯಾ ಸಾಕ್ಷಿಯಾಗಿತ್ತು. ಇದೇ ವೇಳೆ ಅನೇಕ ಬಾಲಿವುಡ್ ನಟರು ಬಂದಿದ್ದರಿಂದ ಸಹಜವಾಗಿ ಸೋಷಿಯಲ್ ಮಿಡಿಯಾಗಳಲ್ಲಿ ಅವರ ಫೋಟೋಗಳು ವೈರಲ್ ಆಗಿದ್ದವು. ಆದ್ರೆ ಅದರ ಜೊತೆ ವೈರಲ್ ಆಗಿರುವ ಒಂದು ವಿಡಿಯೋ ರಾಧಿಕಾ ಮರ್ಚೆಂಟ್ ತಾಯಿಯಾಗುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮಟ್ಟಕ್ಕೆ ಹೋಗಿದೆ.

ಇದನ್ನೂ ಓದಿ: ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ

ಮುಖೇಶ್ ಅಂಬಾನಿ ಮನೆಯ ಗಣಪತಿ ಬಪ್ಪಾನನ್ನೂ ನೋಡಲು ಬಾಲಿವುಡ್​ ನಟಿ ಕರೀನಾ ಕಪೂರ್, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ನಟ, ನಟಿಯರು ಬಂದಿದ್ದರು. ಇದೇ ವೇಳೆ ನೀತಾ ಅಂಬಾನಿ ತಮ್ಮ ಸೊಸೆಯನ್ನು ಕೈ ಹಿಡಿದುಕೊಂಡು ಜೋಪಾನವಾಗಿ ಮೀಡಿಯಾಗಳಿರುವತ್ತ ಕರೆದುಕೊಂಡು ಬಂದರು. ಈ ವೇಳೆ ವಿಡಿಯೋದಲ್ಲಿ ರಾಧಿಕಾ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ಅತ್ತಿತ್ತ ಓಡಾಡುತ್ತಿದ್ದರು. ಇದನ್ನು ಗಮನಿಸಿರುವ ನೆಟ್ಟಿಗರು, ರಾಧಿಕಾ ತಾಯಿಯಾಗುತ್ತಿದ್ದಾರೆ ಎಂದು ಕಾಮೆಂಟ್​ಗಳನ್ನ ಹಾಕುತ್ತಿದ್ದಾರೆ.

View this post on Instagram

A post shared by GlamBlitz (@glamblitz_)

ಈ ಒಂದು ವಿಡಿಯೋದಲ್ಲಿ ರಾಧಿಕಾ ಮರ್ಚೆಂಟ್ ಫ್ಲ್ಯಾಟ್ ಸ್ಲಿಪ್ಪರ್ ಧರಿಸಿದ್ದನ್ನು ಹಾಗೂ ಅವರು ನಡೆಯುವ ವೈಖರಿಯನ್ನು ಕಂಡ ನೆಟ್ಟಿಗರು ರಾಧಿಕಾ ಆದಷ್ಟು ಬೇಗ ತಾಯಿಯಾಗಲಿದ್ದಾರೆ ಎಂದೇ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಆದ್ರೆ ಇದು ನಿಜವಾ ಅಥವಾ ಊಹಾಪೋಹಗಳಾ ಅನ್ನೋದು ಸಮಯವಷ್ಟೇ ಉತ್ತರ ಕೊಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಫ್ಯಾಮಿಲಿಗೆ ಗುಡ್‌ನ್ಯೂಸ್‌.. ತಾಯಿಯಾಗಲಿದ್ದಾರಾ ರಾಧಿಕಾ ಮರ್ಚೆಂಟ್? ನೀತಾ ಕೇರಿಂಗ್‌ ವಿಡಿಯೋ ವೈರಲ್!

https://newsfirstlive.com/wp-content/uploads/2024/09/Radhika-Merchant.jpg

Load More