ಅಗ್ನಿ ಅನಾಹುತದ ಹಿಂದೆ ಬಿಜೆಪಿ ಕೈವಾಡ ಎಂದಿದ್ದ ಕಾಂಗ್ರೆಸ್
ಬೆಂಕಿ ಬಿದ್ದಿದ್ದು ಉದ್ದೇಶಪೂರ್ವಕವಾಗಿ ಅನ್ನೋ ಅನುಮಾನ?
ಟ್ವೀಟ್ ನೋಡಿ ಕೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ
ಬೆಂಗಳೂರು: ಬಿಬಿಎಂಪಿ ಕ್ವಾಲಿಟಿ ಕಂಟ್ರೋಲ್ ರೂಮ್‌ಗೆ ನಿನ್ನೆ ಬೆಂಕಿ ಬಿದ್ದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರ ಕಾವೇರುತ್ತಿದ್ದಾಗ ಈ ಬೆಂಕಿ ಅವಘಡ ನಡೆದಿದ್ದು, ಕಾಂಗ್ರೆಸ್, ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಬಿಎಂಪಿ ಕೊಠಡಿಗೆ ಬೆಂಕಿ ಬಿದ್ದಿದ್ದು ಆಕಸ್ಮಿಕವೋ? ಉದ್ದೇಶಪೂರ್ವಕವೋ ಅನ್ನೋ ಶಂಕೆಯ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಿನ್ನೆ ಸಂಜೆ ಬಿಬಿಎಂಪಿ ಕೊಠಡಿಗೆ ಬೆಂಕಿ ಬಿದ್ದ ಕೂಡಲೇ ರಾಜ್ಯ ಕಾಂಗ್ರೆಸ್ ಘಟಕ ಒಂದು ಟ್ವೀಟ್ ಮಾಡಿತ್ತು. ಅಗ್ನಿ ಅನಾಹುತದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ನೇರವಾಗಿ ಆರೋಪಿಸಲಾಗಿತ್ತು. 40% ಕಮಿಷನ್ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ಈ ಬೆನ್ನಲ್ಲೇ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ ಷಡ್ಯಂತ್ರ. ಭ್ರಷ್ಟ್ರಾಚಾರ ದಾಖಲೆಗಳಿಗೆ ಬೆಂಕಿ ಇಟ್ಟು ಬಚಾವಾಗಲು ಬಿಜೆಪಿ ಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್ ನೋಡಿ ಕೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೂಡಲೇ ಅದನ್ನ ತೆಗೆದು ಹಾಕಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ತನ್ನ ಟ್ವೀಟ ಅನ್ನು ಹಿಂತೆಗೆದುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್ ಅವರು, ಅದು ಹುಡುಗರು ಏನೋ ಹಾಗೇ ಟ್ವೀಟ್ ಮಾಡಿದ್ದಾರೆ. ಆದ್ರೆ ನಾನು ಅದನ್ನ ವಾಪಸ್ ತೆಗೆದುಕೊಳ್ಳೋಕೆ ಹೇಳಿದ್ದೇನೆ. ಬೆಂಗಳೂರಿನಲ್ಲಿ ನಾನು ಇರಲಿಲ್ಲ, ನಾನು ಹೊರಗಡೆ ಇದ್ದೆ. ಮೊದಲು ಎಲ್ಲಾ ಟ್ವೀಟ್ ನಾನೇ ನೊಡ್ತಿದ್ದೆ ಆದ್ರೆ ನಾನು ಹೊರಗಡೆ ಹೋಗಿದ್ದೆ ಎಂದರು.
ಇದನ್ನೂ ಓದಿ: BBMP ಪ್ರಯೋಗಾಲಯಕ್ಕೆ ಬೆಂಕಿ ಬಿದ್ದ ಕೇಸ್ಗೆ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್.. ಇದು ‘ಬೆಂಕಿ’ ರಾಜಕೀಯ..!
ಇನ್ನು, ಬಿಬಿಎಂಪಿ ಕಚೇರಿಯಲ್ಲಿ ಯಾವುದೇ ಫೈಲ್‌ಗಳಿಗೆ ತೊಂದರೆ ಆಗಿಲ್ಲ. ಎಲ್ಲವನ್ನೂ ಶಿಫ್ಟ್ ಮಾಡಲಾಗುತ್ತಿದೆ. ಬಹಳ ಜಾಗರೂಕತೆಯಿಂದ ಇದ್ದೇವೆ. ನಾನು ಈಗಲೇ ಮುಕ್ತಾಯಕ್ಕೆ ಬರೋದಿಲ್ಲ. ಈಗಾಗಲೇ ಭದ್ರತೆಯನ್ನ ಒದಗಿಸಲಾಗಿದೆ. ನಿನ್ನೆ ರಾತ್ರಿ 12 ಗಂಟೆ ತನಕ ನಾನು ಅಲ್ಲೇ ಇದ್ದೆ. ಅಧಿಕಾರಿಗಳಿಗೆ ಏನು ಡೈರೆಕ್ಷನ್ ಕೊಡಬೇಕೋ ಅದನ್ನ ಕೊಟ್ಟಿದ್ದೇನೆ. ತನಿಖೆ ನಂತರ ನಿಮಗೆ ಹೇಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ