newsfirstkannada.com

ಒಡಿಶಾ ರೈಲು ದುರಂತದ ಹಿಂದಿದೆ ವಿಧ್ವಂಸಕ ಸಂಚು? 10 ಮಂದಿ ಸದಸ್ಯರ ಸಿಬಿಐ ತಂಡದಿಂದ ತನಿಖೆ ಚುರುಕು

Share :

06-06-2023

    CBI ತನಿಖೆಗೆ ವಹಿಸಿರುವ ಹಿಂದಿನ ಕಾರಣವೇನು?

    ಇದರ ಹಿಂದಿದೆಯ ವಿಧ್ವಂಸಕ ಸಂಚು?

    ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ-ಮೋದಿ

ಓಡಿಶಾದ ತ್ರಿವಳಿ ರೈಲು ದುರಂತ ನಡೆದ ಜಾಗದಲ್ಲಿ ಇನ್ನೂ ಕೂಡ ಸಾವಿರಾರು ಪ್ರಯಾಣಿಕರ ಆಕ್ರಂದನ. ಕುಟುಂಬಸ್ಥರ ರೋದನ ಮಾರ್ಧನಿಸುತ್ತಿದೆ. ಇಂತ ದೊಡ್ಡ ದುರಂತಕ್ಕೆ ಕಾರಣವೇನು ಅನ್ನೋದನ್ನ ಪತ್ತೆ ಹಚ್ಚಲು ಸಿಬಿಐ ಅಖಾಡಕ್ಕಿಳಿದಿದೆ. ಅಷ್ಟಕ್ಕೂ ಈ ಕೇಸ್​ನ್ನ ಸಿಬಿಐಗೆ ವಹಿಸೋದಕ್ಕೂ ಕಾರಣಗಳಿವೆ.

ಓಡಿಶಾದ ಬಾಲಾಸೋರ್​ನಲ್ಲಿ ನಡೆದ ದಶಕದ ಭೀಕರ ತ್ರಿವಳಿ ರೈಲು ದುರಂತದ ಬಗ್ಗೆ ತನಿಖೆ ನಡೆಸಲು ಅಖಾಡಕ್ಕೆ ಸಿಬಿಐ ಇಳಿದಿದೆ. 288 ಮಂದಿಯ ಉಸಿರು ನಿಲ್ಲಿಸಿದ ಹಾಗೂ ಸಾವಿರಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ ಈ ದುರ್ಘಟನೆ ಹಿಂದೆ ವಿಧ್ವಂಸಕ ಕೃತ್ಯದ ಅನುಮಾನವಿದೆ. ಅಲ್ಲದೇ ನಿನ್ನೆ ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸ್ಸು ಮಾಡಿದ ಬೆನ್ನಲ್ಲೇ ಕೇಂದ್ರ ತನಿಖಾ ತಂಡ ರಂಗಪ್ರವೇಶ ಮಾಡಿದೆ.

ಅಖಾಡಕ್ಕಿಳಿದ 10 ಸದಸ್ಯರನ್ನೊಳಗೊಂಡ ಸಿಬಿಐ ತಂಡ

10 ಸದಸ್ಯರನ್ನೊಳಗೊಂಡ ಸಿಬಿಐ ತಂಡ ಬಾಲಾಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ ಅಂತ ರೈಲ್ವೆ ಇಲಾಖೆ ತಿಳಿಸಿದೆ.

ಸಿಬಿಐ ತನಿಖೆಗೆ ವಹಿಸಿರುವ ಹಿಂದಿನ ಕಾರಣವೇನು?

ಸದ್ಯ ದೇಶದ ಜನರ ಹೃದಯವನ್ನ ಓಡಿಶಾದ ಈ ರೈಲು ದುರಂತ ಕಣ್ಣೀರಿನಲ್ಲಿ ತೇಲುವಂತೆ ಮಾಡಿದೆ. ಇಷ್ಟೆಲ್ಲ ಸಾವು ನೋವಿಗೆ ಕಾರಣವಾಗಿರುವುದರ ಹಿಂದೆ ವಿಧ್ವಂಸಕ ಸಂಚಿದೆ ಅಂತ ರೈಲ್ವೇ ಇಲಾಖೆ ಈ ಕೇಸ್​ನ್ನ ಸಿಬಿಐಗೆ ವಹಿಸಿದೆ. ಮಾತ್ರವಲ್ಲದೇ ದುರಂತದಲ್ಲಿ ಕ್ರಿಮಿನಲ್‌ಗಳು ಭಾಗಿಯಾಗಿದ್ದಾರೆ ಅಂತ ಮೊನ್ನೆಯಷ್ಟೇ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಅಲ್ಲದೇ ಅಪಘಾತದ ಮೂಲ ಕಾರಣ ಮತ್ತು ಅದಕ್ಕೆ ಕಾರಣವಾದ ಅಪರಾಧಿಗಳನ್ನು ಗುರುತಿಸಲಾಗಿದೆ. ನಾನು ವಿವರಗಳನ್ನು ಈಗಲೇ ನೀಡಲ್ಲ. ವರದಿ ಬರಲಿ ಅಂತ ವೈಷ್ಣವ್ ಹೇಳಿದ್ರು. ಈ ಬೆನ್ನಲ್ಲೇ ಈ ದುರಂತ ಆಗಿದ್ದಲ್ಲ ಇದು ವಿಧ್ವಂಸಕ ಸಂಚು ಅನ್ನೋ ಮಾತು.. ಚರ್ಚೆ ದೇಶಾದ್ಯಂತ ಬಿರುಗಾಳಿಯ ರೂಪದಲ್ಲಿ ಅಪ್ಪಳಿಸುತ್ತಿವೆ. ಅಷ್ಟಕ್ಕೂ ದುರಂತದ ಹಿಂದೆ ವಿಧ್ವಂಸಕ ಸಂಚು ರೂಪಿಸಲಾಗಿತ್ತು ಅನ್ನೋ ಅನುಮಾನ ಯಾಕೆ ಬಂತು ಅನ್ನೋದನ್ನ ನೋಡೋದಾದ್ರೆ.

ರೈಲು ದುರಂತದ ಹಿಂದೆ ವಿಧ್ವಂಸಕ ಸಂಚು?

ಬಾಲಾಸೋರ್​ನಲ್ಲಿ ಮುಖ್ಯ ಮಾರ್ಗದಲ್ಲಿ ಹೋಗಬೇಕಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅದರ ಬದಲು ಬೇರೆ ಟ್ರ್ಯಾಕ್ ಅಂದ್ರೆ ಲೂಪ್ ಲೈನ್‌ಗೆ ಹೇಗೆ ಬಂತು ಅನ್ನೋ ಅನುಮಾನ ಮೂಡಿದೆ. ಹೌರಾದಿಂದ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್ ಮುಖ್ಯ ಮಾರ್ಗದಲ್ಲಿ ಹಾದು ಹೋಗುತ್ತಿತ್ತು. ಈ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ದಾರಿ ಮಾಡಿಕೊಡಲು ಗೂಡ್ಸ್ ರೈಲನ್ನು ಲೂಪ್ ಲೈನ್‌ಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ನೇರವಾಗಿ ಮುಖ್ಯ ಮಾರ್ಗದಲ್ಲಿ ಹೋಗಬೇಕಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ನೇರವಾಗಿ ಹೋಗಿಲ್ಲ. ಲೂಪ್ ಲೈನ್‌ಗಳನ್ನು ಹೆಚ್ಚು ರೈಲುಗಳಿದ್ದಾಗ ಅವುಗಳ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾಗುತ್ತದೆ. ಈ ಲೂಪ್ ಲೈನ್‌ಗಳು ಸಾಮಾನ್ಯವಾಗಿ 750 ಮೀಟರ್ ಉದ್ದವಿದ್ದು, ಗೂಡ್ಸ್​ ರೈಲುಗಳಿಗೆ ತೆರಳಲು ಅವಕಾಶ ಕಲ್ಪಿಸುತ್ತದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ನೇರವಾಗಿ ಹೋಗುವ ಬದಲು ಲೂಪ್ ಲೈನ್‌ಗೆ ಹೋಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದುರಂತ ಸಂಭವಿಸಿದೆ. ಗೂಡ್ಸ್ ರೈಲಿಗೆ ಅಪ್ಪಳಿಸಿದ ಪರಿಣಾಮ, ಅದರ ಕೆಲವು ಬೋಗಿಗಳು ಬೆಂಗಳೂರು-ಹೌರಾ ರೈಲು ಚಲಿಸುತ್ತಿದ್ದ ಅಪ್ ಲೈನ್‌ಗೆ ಎಸೆಯಲ್ಪಟ್ಟು ಕೊನೆಯ 2 ಬೋಗಿಗಳಿಗೆ ಡಿಕ್ಕಿ ಹೊಡೆದಿವೆ. ಇಲ್ಲಿ ರೈಲ್ವೆಯ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯು ವಿಫಲ-ಸುರಕ್ಷಿತ ವ್ಯವಸ್ಥೆಯಾಗಿದೆ. ಸಿಸ್ಟಮ್ ವಿಫಲವಾದ ಅಪರೂಪದ ಸಂದರ್ಭದಲ್ಲಿ, ಅದು ಸುರಕ್ಷಿತ ಭಾಗದಲ್ಲಿ ವಿಫಲಗೊಳ್ಳುತ್ತದೆ. ಇದರರ್ಥ ಎಕ್ಸ್‌ಪ್ರೆಸ್ ರೈಲು ಕೆಂಪು ಸಿಗ್ನಲ್ ಪಡೆದಿರಬೇಕು ಮತ್ತು ನಿಲುಗಡೆ ಮಾಡಿದ ಗೂಡ್ಸ್ ರೈಲಿರುವ ಮಾರ್ಗದಲ್ಲಿ ಹೋಗಬಾರದು. ಆದ್ರೆ ಇಲ್ಲಿ ಹೀಗಾಗಿದ್ದಕ್ಕೆ ರೈಲ್ವೇ ಇಲಾಖೆ ಕೇಸ್​ನ್ನ ಸಿಬಿಐಗೆ ವಹಿಸಿದೆ.

ಇನ್ನು ಪ್ರಧಾನಿ ಮೋದಿ ಕೂಡ ದುರಂತದ ಮರುದಿನ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದ್ರು. ಇವೆಲ್ಲ ಕಾರಣದಿಂದಾಗಿ ಓಡಿಸ್ಸಾದ ತ್ರಿವಳಿ ರೈಲು ದುರಂತದ ಹಿಂದೆ ವಿಧ್ವಂಸಕ ಸಂಚಿದೆ ಅಂತ ರೈಲ್ವೇ ಇಲಾಖೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದೆ. ಸದ್ಯ ಸಿಬಿಐ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು ವರದಿ ಬಂದ ಬಳಿಕವೇ ದುರಂತದ ಸತ್ಯಾಸತ್ಯಯೆ ಬಯಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಡಿಶಾ ರೈಲು ದುರಂತದ ಹಿಂದಿದೆ ವಿಧ್ವಂಸಕ ಸಂಚು? 10 ಮಂದಿ ಸದಸ್ಯರ ಸಿಬಿಐ ತಂಡದಿಂದ ತನಿಖೆ ಚುರುಕು

https://newsfirstlive.com/wp-content/uploads/2023/06/Odisha-Train.jpg

Load More