newsfirstkannada.com

ಮತ್ತೊಂದು ಗ್ಯಾಂಗ್​ಸ್ಟರ್​ ಸ್ಟೋರಿಯಲ್ಲಿ ಯಶ್ ಅಭಿನಯ, ಡೈರೆಕ್ಟರ್​ ಕನ್ನಡದವರಲ್ಲ, ಮತ್ಯಾರು?

Share :

15-06-2023

  ಯಶ್​ ಅವರ 19ನೇ ಸಿನಿಮಾಕ್ಕಾಗಿ ಕಾದು ಕಳಿತ ಫ್ಯಾನ್ಸ್​

  ಮುಂದಿನ ಸಿನಿಮಾದ ಬಗ್ಗೆ ಅಪ್​ಡೇಟ್​ ಬಿಟ್ಟು ಕೊಡದ ಯಶ್​

  ರಾಕಿಂಗ್​ ಸ್ಟಾರ್​ ಮುಂದಿನ ಸಿನಿಮಾ ನರ್ತನ್ ಜೊತೆಯಲ್ಲ

ಎಲ್ಲವೂ ಅಂದ್ಕೊಂಡಂತೆ ಆಗಿದ್ದರೇ ‘ಮಫ್ತಿ’ ಖ್ಯಾತಿಯ ನರ್ತನ್ ಜೊತೆ ಯಶ್ ಹೊಸ ಸಿನಿಮಾ ಮಾಡಬೇಕಿತ್ತು. ಸಮಯ, ಸಂದರ್ಭ ಬದಲಾದ ಕಾರಣದಿಂದ ನರ್ತನ್ ಜೊತೆಗಿನ ಚಿತ್ರ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹಾಗಾಗಿ ಯಶ್ ಮುಂದಿನ ಚಿತ್ರ ನಿರ್ದೇಶಿಸುವ ಅವಕಾಶ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ಗೆ ಹೋಗಿದೆ.

ಅಷ್ಟಕ್ಕೂ ಈ ಗೀತಾ ಮೋಹನ್ ದಾಸ್ ಯಾರು? ಯಾವ ಸಿನಿಮಾಗಳನ್ನ ಮಾಡಿದ್ದಾರೆ ಅಂತ ಕೇಳಿದ್ರೆ ಇದುವರೆಗೂ ಒಂದು ಶಾರ್ಟ್ ಫಿಲಂ ಹಾಗೂ 2 ಫೀಚರ್ ಫಿಲಂ ನಿರ್ದೇಶಿಸಿದ್ದಾರೆ. ಬರೀ ನಿರ್ದೇಶನ ಮಾತ್ರವಲ್ಲ ನಟನೆಯಲ್ಲೂ ಗೀತಾ ಅವರದ್ದು ದೊಡ್ಡ ಹೆಸರು. 2014ರಲ್ಲಿ ತೆರೆಗೆ ಬಂದಿದ್ದ ‘ಲಾಯರ್ಸ್ ಡೈಸ್’ ಚಿತ್ರಕ್ಕೆ 2 ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2019ರಲ್ಲಿ ‘ಮೂತನ್’ ಎನ್ನುವ ಚಿತ್ರ ಮಾಡಿದ್ದು, ಹಲವು ಫಿಲಂ ಫೆಸ್ಟಿವಲ್​ಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ಯಶ್ ಅವರು ಗೀತು ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ

ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರಗಳಿಗೆ ನ್ಯಾಷನಲ್ ಅವಾರ್ಡ್ ಬಂದಿದೆ ಅನ್ನೋದು ಬಿಟ್ರೆ ಕಮರ್ಷಿಯಲ್ ಆಗಿ ಅಷ್ಟೇನೂ ಹೆಸರು ಇಲ್ಲ. ಹಾಗಿದ್ದರೂ ಯಶ್ ಅವರು ಗೀತು ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ಗ್ಯಾಂಗ್​ಸ್ಟರ್ ಕಥೆ ಎಂದು ಹೇಳಲಾಗುತ್ತಿದೆ.

ಕೆಜಿಎಫ್ ಗ್ಯಾಂಗ್​ಸ್ಟರ್ ಸಿನಿಮಾ. ಕೆಜಿಎಫ್ ಆದಮೇಲೆ ಯಶ್ ಮಾಡಿದ್ರೆ ಅಂಥದ್ದೇ ಕಥೆ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ಸಿನಿಮಾಶಾಸ್ತ್ರಜ್ಞರ ಅಭಿಪ್ರಾಯ. ಯಶ್ ಕೂಡ ಅಂಥದ್ದೇ ಕಥೆಗಾಗಿ ಸರ್ಚ್ ಮಾಡುತ್ತಿದ್ರು. ಇಂಥಾ ಸಮಯದಲ್ಲಿ ಗೀತು ಮೋಹನ್ ದಾಸ್ ಹೇಳಿದ ಕಥೆ ರಾಕಿಂಗ್ ಸ್ಟಾರ್​ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಆ ಕಾರಣಕ್ಕಾಗಿಯೇ ಯಶ್​ ಅವರು ಡೈರೆಕ್ಟರ್ ನೇಮ್​ಗಿಂತ ಆ ಕಥೆಯನ್ನೇ ಹೆಚ್ಚು ನಂಬುತ್ತಿದ್ದಾರೆ ಎನ್ನಲಾಗ್ತಿದೆ.

ಗೀತುಗೆ ಗ್ಯಾಂಗ್​ಸ್ಟರ್​ ಸಿನಿಮಾ ಮಾಡೋ ಸಾಮರ್ಥ್ಯ ಇದ್ಯಾ? 

ಈಗ ಚರ್ಚೆ ಆಗ್ತಿರೋ ವಿಷ್ಯ ಒಂದೇ. ಈ ಹಿಂದೆ ಕಂಟೆಂಟ್ ಸಿನಿಮಾಗಳನ್ನ ಮಾಡಿರುವ ಗೀತು ಅವರಿಗೆ ಗ್ಯಾಂಗ್​ಸ್ಟರ್​ ಸಿನಿಮಾ ಮಾಡೋ ಸಾಮರ್ಥ್ಯ ಇದ್ಯಾ? ಕೆಜಿಎಫ್​ನಿಂದ ಬ್ರ್ಯಾಂಡ್ ಆಗಿರೋ ಯಶ್ ಅವರನ್ನ ಹ್ಯಾಂಡಲ್ ಮಾಡೋಕೆ ಸಾಧ್ಯನಾ? ಒಂದು ವೇಳೆ ಗೀತು ಮೋಹನ್ ದಾಸ್ ಜೊತೆ ಸಿನಿಮಾ ಮಾಡಿದ್ದೇ ಆದ್ರೆ ಇದರಿಂದ ರಾಕಿ ಅಭಿಮಾನಿಗಳಿಗೋಗು ಸಂದೇಶವೇನು? ಅನ್ನೊ ಪ್ರಶ್ನೆಗಳಿಗೆ ನಿಜಕ್ಕೂ ಉತ್ತರವಿಲ್ಲ.

ಯಶ್ ಸಿನಿಮಾ ಅಂದ್ರೆ ಈಗ ಸಪರೇಟ್ ಮಾರ್ಕೆಟ್ ಸೃಷ್ಟಿಯಾಗಿದೆ. ಯಶ್ ಸಿನಿಮಾಗಳು ಅಂದ್ರು ಅದಕ್ಕೊಂದು ಮಿನಿಮಮ್ ಬೆಲೆ ಅನ್ನೋ ಟ್ರೆಂಡ್ ಕ್ರಿಯೇಟ್ ಆಗಿದೆ. ಇಂತಹ ಸಮಯದಲ್ಲಿ ಪ್ಯಾನ್ ಇಂಡಿಯಾಗೆ ಗೊತ್ತಿಲ್ಲದ ಹಾಗೂ ಕಮರ್ಷಿಯಲ್ ಆಗಿ ಅಷ್ಟೊಂದು ಅನುಭವವಿಲ್ಲದ ನಿರ್ದೇಶಕಿ ಜೊತೆ ಸಿನಿಮಾ ಮಾಡೋ ನಿರ್ಧಾರ ಯಶ್ ಪಾಲಿಗೆ ದೊಡ್ಡ ರಿಸ್ಕ್ ಅನಿಸ್ತಿಕೊಳ್ತಿದೆ. ಆದರೂ ಈ ರಾಕಿಂಗ್ ಸ್ಟಾರ್ ಇಂಥಾ ಡಿಸಿಷನ್ ಯಾಕೆ ಅನ್ನೋದಕ್ಕೆ ಕಾರಣಗಳಿಲ್ಲದೇ ಹೋದರೂ, ಹೊಸ ನಿರ್ದೇಶಕಿಯೊಂದಿಗೆ ಸಿನಿಮಾ ಮಾಡೋದ್ರಿಂದ ಯಶ್​ಗೆ ಫ್ರೀಡಂ ಸಿಗಬಹುದು ಅಥವಾ ಡೈರೆಕ್ಟರ್ ಯಾರೇ ಇರಲಿ, ಪ್ರೊಡ್ಯೂಸರ್ ಯಾರೇ ಆಗಿರಲಿ ನನ್ನ ಸಿನಿಮಾ ಗೆಲ್ಲುತ್ತೆ ಅನ್ನೋ ಮೆಸೇಜ್ ಕೊಡುವ ಲೆಕ್ಕಾಚಾರಾನ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಅದೇನೇ ಇರಲಿ, ಯಶ್ ಆದಷ್ಟೂ ಬೇಗ 19ನೇ ಸಿನಿಮಾ ಶುರು ಮಾಡಲಿ. ತಮ್ಮ ಹೊಸ ಚಿತ್ರದ ಬಗ್ಗೆ ಅಪ್​ಡೇಟ್ ಕೊಡಲಿ ಅನ್ನೋದಂದೇ ರಾಕಿ ಫ್ಯಾನ್ಸ್​ ಬಳಗದ ಬಹುದೊಡ್ಡ ಕೋರಿಕೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೊಂದು ಗ್ಯಾಂಗ್​ಸ್ಟರ್​ ಸ್ಟೋರಿಯಲ್ಲಿ ಯಶ್ ಅಭಿನಯ, ಡೈರೆಕ್ಟರ್​ ಕನ್ನಡದವರಲ್ಲ, ಮತ್ಯಾರು?

https://newsfirstlive.com/wp-content/uploads/2023/06/YASH_GEETHA.jpg

Load More