newsfirstkannada.com

ಪಾಕ್​​ ವಿರುದ್ಧ ಪಂದ್ಯ.. ಕೊಹ್ಲಿ, ರೋಹಿತ್​​ ಅಲ್ಲ.. ಇವರೇ ಟೀಂ ಇಂಡಿಯಾದ ನಿಜವಾದ ಹೀರೋಗಳು!

Share :

03-09-2023

    ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್​ ಟೂರ್ನಿ

    ಪಾಕ್​​ ವಿರುದ್ಧ ಪಂದ್ಯದಲ್ಲಿ ಕೈಕೊಟ್ಟ ರೋಹಿತ್​, ಕೊಹ್ಲಿ!

    ಟೀಂ ಇಂಡಿಯಾ ಕೈ ಹಿಡಿದಿದ್ದೇ ಈ ಇಬ್ಬರು ಹೀರೋಗಳು

ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟೀಂ ಇಂಡಿಯಾ, ಪಾಕ್​​ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಭಾರತ, ಪಾಕ್​​ ಕ್ರಿಕೆಟ್​​ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ. ಹೀಗಿದ್ದರೂ ಟೀಂ ಇಂಡಿಯಾಗೆ ಸ್ಟಾರ್​​ ಕ್ರಿಕೆಟರ್​​​ ವಿರಾಟ್​ ಕೊಹ್ಲಿ, ಕ್ಯಾಪ್ಟನ್​​ ರೋಹಿತ್​​​​ ಶರ್ಮಾ ಹೊರತಾಗಿ ಇಬ್ಬರು ರಿಯಲ್​ ಹೀರೋಗಳು ಸಿಕ್ಕಿದ್ದಾರೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ಇಡೀ ಕ್ರೀಡಾ ಲೋಕವೇ ಚರ್ಚೆ ನಡೆಸುತ್ತಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಹೀಗಾಗಿ ಇಡೀ ದೇಶವೇ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಮೇಲಿಟ್ಟಿದ್ದ ನಿರೀಕ್ಷೆ ಹುಸಿ ಆಯ್ತು. ಕ್ರೀಸ್​ಗೆ ಬಂದ ರೋಹಿತ್ ಶರ್ಮಾ, ವಿರಾಟ್​​ ಹೆಚ್ಚು ಹೊತ್ತು ಬ್ಯಾಟ್​ ಬೀಸಲಿಲ್ಲ. ಬದಲಿಗೆ ಇಬ್ಬರು ಕಡಿಮೆ ರನ್​ಗೆ ಔಟಾದರು. ರೋಹಿತ್ ಕೇವಲ 11 ರನ್​ಗೆ ಔಟ್ ಆದ್ರೆ, ವಿರಾಟ್​ 4 ರನ್​ಗೆ ವಿಕೆಟ್​ ಒಪ್ಪಿಸಿದರು.

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಶುಭ್ಮನ್​ ಗಿಲ್​​, ಶ್ರೇಯಸ್​​ ಅಯ್ಯರ್ ಹೀಗೆ ಬ್ಯಾಕ್​ ಟು ಬ್ಯಾಕ್​ ವಿಕೆಟ್​​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಕೈ ಹಿಡಿದಿದ್ದು ಮಾತ್ರ ಇಶಾನ್​​ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ. ಇಬ್ಬರು ಭರ್ಜರಿ ಬ್ಯಾಟಿಂಗ್ ಮಾಡಿ ಪಾಕ್ ಬೌಲರ್​ಗಳ ಬೆವರಿಳಿಸಿದರು. ಈ ಮೂಲಕ ಟೀಂ ಇಂಡಿಯಾ 48.5 ಓವರ್​ಗಳಲ್ಲಿ 266 ರನ್​ ಪೇರಿಸಲು ಸಹಕಾರಿಯಾದರು.

ಇಶಾನ್​ ಕಿಶನ್​​, ಹಾರ್ದಿಕ್​​ ಪಾಂಡ್ಯ ನಿಜವಾದ ಹೀರೋಗಳು!

ಇಶಾನ್​​ ಕೇವಲ 81 ಬಾಲ್​​ನಲ್ಲಿ 9 ಫೋರ್​​, 2 ಬಿಗ್​​ ಸಿಕ್ಸರ್ ಸಮೇತ 82 ರನ್​​​​ ಬಾರಿಸಿ ಟೀಂ ಇಂಡಿಯಾ ಕೈ ಹಿಡಿದರು. ಜತೆಗೆ ಇಶನ್​ಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್​ ಪಾಂಡ್ಯ ಕೂಡ 90 ಎಸೆತದಲ್ಲಿ 87 ರನ್ ಸಿಡಿದರು. 1 ಬಿಗ್​ ಸಿಕ್ಸರ್​​, 7 ಫೋರ್​​ ಬಾರಿಸಿದ ಹಾರ್ದಿಕ್​​ ಎಲ್ಲೂ ಎಡವದೆ ನಿಧಾನಕ್ಕೆ ಬ್ಯಾಟ್​ ಬೀಸಿ ಭಾರತ ತಂಡವು ಲಯ ಕಂಡುಕೊಳ್ಳಲು ಕಾರಣರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​​ ವಿರುದ್ಧ ಪಂದ್ಯ.. ಕೊಹ್ಲಿ, ರೋಹಿತ್​​ ಅಲ್ಲ.. ಇವರೇ ಟೀಂ ಇಂಡಿಯಾದ ನಿಜವಾದ ಹೀರೋಗಳು!

https://newsfirstlive.com/wp-content/uploads/2023/09/Rohit_Kohli.jpg

Load More