newsfirstkannada.com

ಸ್ನೇಹಕ್ಕೆ ಸ್ನೇಹ..!! ಡ್ರೆಸ್ಸಿಂಗ್​ ರೂಮ್​ನ ಇಂಟರೆಸ್ಟಿಂಗ್ ಸ್ಟೋರಿ ಇದು..!

Share :

08-06-2023

  ಇಬ್ಬರ ನಡುವೆ ಸದಾಕಾಲ ಹೊಡೆದಾಟ, ಗುದ್ದಾಟ..!

  ಶತಕ ಸಿಡಿಸಿದ ಗಿಲ್​ ಕಪಾಳಕ್ಕೆ ಬಾರಿಸಿದ್ದ ಕಿಶನ್​..!

  ಸ್ಟ್ರಿಕ್ಟ್​​ ಮೇಷ್ಟ್ರು ದ್ರಾವಿಡ್ ಇವರಿಗೆ ಗುರು.​​.!

ರೋಹಿತ್​ VS ​ ಕೊಹ್ಲಿ, ದ್ರಾವಿಡ್​​ VS ರೋಹಿತ್​. ಸೀನಿಯರ್ಸ್​​ VS ಜೂನಿಯರ್ಸ್​​.. ಹೀಗೆ ಅವ್ರನ್ನ ಕಂಡ್ರೆ ಇವರಿಗೆ ಆಗಲ್ಲ. ಇವರನ್ನ ಕಂಡ್ರೆ ಅವ್ರಿಗೆ ಆಗಲ್ಲ. ಈ ತರದ ಸುದ್ದಿಗಳೇ ಟೀಮ್​ ಇಂಡಿಯಾ ವಿಚಾರದಲ್ಲಿ ಹೆಚ್ಚು ಸುದ್ದಿಯಾಗ್ತವೆ. ಆದರೆ ಇದು ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನ ಒಂದು ಸ್ಪೆಷಲ್​ ಸ್ಟೋರಿ!!

ಇದೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಂದಿಗೂ ಬಿಡಿಸಲಾಗದ ಕೆಲ ಬಾಂಧವ್ಯಗಳು ಬೆಸೆದಿವೆ. ಕಪಿಲ್​ ದೇವ್-ಸುನಿಲ್​ ಗವಾಸ್ಕರ್​​ರಂತಹ ದಿಗ್ಗಜರಿಂದ ಹಿಡಿದು ಧೋನಿಯ ಕಾಲದವರೆಗೆ ಜೀವದ ಗೆಳೆಯರ ದೊಡ್ಡ ಪಟ್ಟಿಯೇ ಇದೆ. ಇದೀಗ ಮುಂದಿನ ಜನರೇಷನ್​ಗೂ ಇದು ವಿಸ್ತರಿಸೋದು ಕನ್ಫರ್ಮ್ ಆಗಿದೆ.

ಟೀಮ್​ ಇಂಡಿಯಾದ ಭವಿಷ್ಯದ ತಾರೆಗಳಾದ ಇಶಾನ್​ ಕಿಶನ್​ & ಶುಭ್​ಮನ್​ ಗಿಲ್​ ಜೋಡಿಯ ಬಗ್ಗೆನೇ. ಆನ್​ಫೀಲ್ಡ್​ನಲ್ಲಿ ತಮ್ಮ ಅಬ್ಬರದ ಆಟದಿಂದಲೇ ಬೌಲರ್​ಗಳ ಬೆವರಿಳಿಸೋ ಈ ಜೋಡಿ ಆಫ್​ ದ ಫೀಲ್ಡ್​ನಲ್ಲಿ ಫುಲ್​ ಜಾಲಿ ಜಾಲಿ. ಇವರಿಬ್ಬರ ಫ್ರೆಂಡ್​ ಶಿಪ್ ಬಗ್ಗೆ ಹೇಳೋಕೆ ಪದಗಳೇ ಇಲ್ಲ ಬಿಡಿ. ಇವರಿಬ್ರು ಜೊತೆಗಿದ್ರೆ, ತರ್ಲೆ, ತಮಾಷೆಗೆ ಮಿತಿನೇ ಇರಲ್ಲ.. ಜೊತೆಗಿದ್ದವರಿಗೂ ಅನ್​ಲಿಮಿಟೆಡ್​ ನಗು ಫಿಕ್ಸ್​

ಕಿಶನ್: ಪಂದ್ಯಕ್ಕೂ ಮುಂಚೆ ನಿಮ್ಮ ತಯಾರಿ ಹೇಗಿರುತ್ತೆ?
ರೋಹಿತ್: ನೀವೇ ಹೇಳಬೇಕು. ಒಂದೇ ರೂಮ್​ನಲ್ಲಿ ಇರ್ತಿರಲ್ವಾ?
ಕಿಶನ್: ನಾನು ಅದಕ್ಕೆ ಕೇಳ್ತಿದ್ದಿನಿ. ಅವನ ಬಾಯಿಂದ ಕೇಳಬೇಕು. ಪಂದ್ಯಕ್ಕೂ ಮುನ್ನ ನಿಮ್ಮ ದಿನಚರಿ ಏನು? ಹೇಗಿರುತ್ತೆ?
ರೋಹಿತ್: ಇಬ್ರೂ ಒಟ್ಟಿಗೆ ಮಲಗ್ತೀರಾ.? ಮತ್ತೆನಿದೆ..
ಗಿಲ್​: ಈತ ನನ್ನ ಪಂದ್ಯಕ್ಕೂ ಮುನ್ನ ಪ್ರಿಪರೇಷನ್​​ ಅನ್ನೇ ಹಾಳು ಮಾಡ್ತಾನೆ. ಮಲಗೋಕೂ ಬಿಡಲ್ಲ. ಈತ ಹೆಡ್​ಪೋನ್​ ಬಳಸಲ್ಲ. ಆದ್ರೆ ಫುಲ್​ಸೌಂಡ್​ ಕೊಟ್ಟುಕೊಂಡು ಸಿನಿಮಾ ನೋಡ್ತಾನೆ. ನಾನು ಬೈಯ್ತಿನಿ. ಸೌಂಡ್​ ಕಡಿಮೆ ಮಾಡುವಂತೆ ಕೇಳ್ತಿನಿ. ಆದ್ರೆ ಅವನು ಇದು ನನ್ನ ರೂಮ್​ ನನ್ನ ರೂಲ್ಸ್ ಅಂತಾನೆ. ದಿನವೂ ಇದಕ್ಕೆ ಜಗಳ ಆಗುತ್ತೆ.
ಕಿಶನ್​: ನನಗನ್ನಿಸುತ್ತೆ ನೀನು, ನನ್ನ ರೂಮ್​ ಅಲ್ಲಿ ಮಲಗಿದ್ದಕ್ಕೆ ನನ್ನ ರನ್​ ನೀನು ಹೊಡೆದಿದ್ದೀಯಾ ಅನ್ನಿಸುತ್ತೆ..

ಇಬ್ಬರ ನಡುವೆ ಸದಾಕಾಲ ಹೊಡೆದಾಟ, ಗುದ್ದಾಟ..!
ನಡೀತಿರೋ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಮುನ್ನ ಫೋಟೋಶೂಟ್​ ನಡೀತು. ಎಲ್ರೂ ಫೋಟೋಶೂಟ್​ನಲ್ಲಿ ಬ್ಯುಸಿಯಾಗಿದ್ರೆ, ಅಲ್ಲೂ ಇವರಿಬ್ಬರ ನಡುವೆ ಕೋಳಿ ಜಗಳ ನಡೀತಿತ್ತು. ಇಷ್ಟೇ ಅಲ್ಲ.. ಇದೇ ಸಂದರ್ಭದಲ್ಲಿ ಐಸಿಸಿ ಟೀಮ್​ ಒಂದು ರೀಲ್ಸ್​ ಮಾಡಿದೆ. ಇದ್ರಲ್ಲಿ, ಫಿಸ್ಟ್​ ಬಂಪ್​ ಮಾಡಪ್ಪಾ ಅಂದ್ರೆ, ಶುಭ್​ಮನ್​, ಇಶಾನ್​ ತಲೆಗೆ ಹೊಡೆಯೋದಾ

ಶುಭ್​ಮನ್​ಗಿಲ್​ T20ಯಲ್ಲಿ ಶತಕ ಸಾಧನೆ ಮಾಡಿದಾಗ ಇಡೀ ದೇಶ ಹೆಮ್ಮೆಪಟ್ಟು ಸಂಭ್ರಮಿಸಿತ್ತು. ಆದ್ರೆ ಗೆಳೆಯ ಇಶಾನ್​ ಕಿಶನ್​ ಮಾಡಿದ್ದು ಕಪಾಳ ಮೋಕ್ಷ. ಇವರಿಬ್ಬರೂ ಎಷ್ಟೇ ಕಾಲೆಳೆದುಕೊಂಡು, ಪರಸ್ಪರ ಕಿತ್ತಾಡಿಕೊಂಡರೂ ಕೂಡ ಇವರಿಬ್ಬರ ನಡುವೆ ಪ್ರೀತಿ, ಕಾಳಜಿಗೆ ಕೊರತೆಯೇ ಇಲ್ಲ. ಇಬ್ಬರ ನಡುವಿನ ಪರಸ್ಪರ ಗೌರವ ಹಾಗೇ ಇರುತ್ತೆ. ಗೆದ್ದಾಗ ಸಂಭ್ರಮಿಸೋ ಇವ್ರು, ಸೋತಾಗ ಒಬ್ಬರ ಬೆನ್ನಿಗೆ ಒಬ್ಬರು ನಿಲ್ತಾರೆ.

ಇವರಿಬ್ರು ಜಂಟಲ್​ ಮೆನ್​ ಗೇಮ್​ ರಿಯಲ್​ ಜಂಟಲ್​ ಮನ್​ ರಾಹುಲ್​ ದ್ರಾವಿಡ್​ರ ಪಕ್ಕಾ ಶಿಷ್ಯರು. ಇಂಟರ್​​ ನ್ಯಾಷನಲ್​ ಕ್ರಿಕೆಟ್​ಗೆ ಕಾಲಿಡೋಕೂ ಮುನ್ನ ಇವರಿಬ್ರು ಪಳಗಿದ್ದೇ ದ್ರಾವಿಡ್​ ಗರಡಿಯಲ್ಲಿ. ಅಂಡರ್​​ -19 ದಿನಗಳಲ್ಲಿ ದ್ರಾವಿಡ್​​ ಬಳಿ ಕ್ರಿಕೆಟ್​ ಪಾಠಗಳನ್ನ ಕಲಿತ ಇವ್ರು, ಇದೀಗ ಟೀಮ್​ ಇಂಡಿಯಾ ಪರ ಧೂಳೆಬ್ಬಿಸ್ತಿದ್ದಾರೆ. ತಮ್ಮ ಫ್ರೆಂಡ್​ಶಿಪ್​ ಮಾತ್ರವಲ್ಲ. ತಮ್ಮ ಅಬ್ಬರದ ಆಟದಿಂದ ಭಾರತದ ಭವಿಷ್ಯದ ಭರವಸೆಯಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ಇವರ ಆಟ ಹೀಗೆ ಇರಲಿ.. ಗೆಳೆತನವೂ ಹಸಿರಾಗಿರಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಸ್ನೇಹಕ್ಕೆ ಸ್ನೇಹ..!! ಡ್ರೆಸ್ಸಿಂಗ್​ ರೂಮ್​ನ ಇಂಟರೆಸ್ಟಿಂಗ್ ಸ್ಟೋರಿ ಇದು..!

https://newsfirstlive.com/wp-content/uploads/2023/06/ISHAN_KISHAN-3.jpg

Load More