newsfirstkannada.com

ಪಾಕ್​​ ವಿರುದ್ಧ ಅದ್ಭುತ ಬ್ಯಾಟಿಂಗ್​​.. ಕೊಹ್ಲಿ ದಾಖಲೆಯನ್ನೇ ಮುರಿದ ಇಶಾನ್​ ಕಿಶನ್​​

Share :

03-09-2023

    ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್​ ಟೂರ್ನಿ

    ಪಾಕ್​​ ವಿರುದ್ಧ ಇಶಾನ್​​ ಕಿಶನ್​​ ಅದ್ಭುತ ಬ್ಯಾಟಿಂಗ್​​..!

    ಕೊಹ್ಲಿ ದಾಖಲೆಯನ್ನೇ ಮುರಿದ ಇಶಾನ್​ ಕಿಶನ್​​ ಏನದು?

ಇತ್ತೀಚೆಗೆ ಶನಿವಾರ ರಾತ್ರಿ ಶ್ರೀಲಂಕಾದ ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ 2023 ಏಷ್ಯಾಕಪ್​ ಟೂರ್ನಿಯ ಟೀಂ ಇಂಡಿಯಾ, ಪಾಕ್​​ ನಡುವಿನ ಮಹತ್ವದ ಪಂದ್ಯ ಮಳೆ ಅನ್ನೋ ಕಾರಣಕ್ಕೆ ರದ್ದಾಗಿದೆ. ಹೀಗಾಗಿ ಎರಡು ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ.

ಕೊಹ್ಲಿ, ರೋಹಿತ್​ ಶರ್ಮಾ, ಶ್ರೇಯಸ್​​ ಅಯ್ಯರ್​​, ಶುಭ್ಮನ್​ ಗಿಲ್​ ಹೀಗೆ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಸ್ಟಾರ್​​ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​​. ಜತೆಗೆ ಇಶಾನ್​​ ಕಿಶನ್​​ಗೆ ಹಾರ್ದಿಕ್​ ಪಾಂಡ್ಯ ಕೂಡ ಸಾಥ್​ ನೀಡಿದ್ರು.

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ರು. ಎಡಗೈ ಬ್ಯಾಟರ್ 81 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 82 ರನ್​ ಸಿಡಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಶುಭ್ಮನ್​ ಗಿಲ್​​ ಸೇಫ್​​, ವಿರಾಟ್​ ದಾಖಲೆ ಉಡೀಸ್​!

ಏಕದಿನ ಕ್ರಿಕೆಟ್‌ನಲ್ಲಿ ಮೊದಲ 17 ಇನ್ನಿಂಗ್ಸ್‌ ನಂತರ ಅತೀ ಹೆಚ್ಚು ರನ್​​​ ಗಳಿಸಿದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ಪಟ್ಟಿಯಲ್ಲಿ ಇಶಾನ್ 776 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 778 ರನ್​ ಮೂಲಕ ಮೊದಲ ಸ್ಥಾನದಲ್ಲಿ ಶುಭ್ಮನ್ ಗಿಲ್, 757 ರನ್ ಗಳಿಸಿ ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದರಲ್ಲೂ 105ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿರುವ ಏಕೈಕ ಆಟಗಾರ ಇಶಾನ್​​​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​​ ವಿರುದ್ಧ ಅದ್ಭುತ ಬ್ಯಾಟಿಂಗ್​​.. ಕೊಹ್ಲಿ ದಾಖಲೆಯನ್ನೇ ಮುರಿದ ಇಶಾನ್​ ಕಿಶನ್​​

https://newsfirstlive.com/wp-content/uploads/2023/09/Ishan-Kishan-1.jpg

Load More