newsfirstkannada.com

ಪಾಂಡ್ಯಗೆ ಭಾರೀ ಅವಮಾನ.. ಸ್ಥಾನ ನೀಡಿದ್ದಕ್ಕೆ ಪ್ರಶ್ನೆಗಳ ಸುರಿಮಳೆ; ಆದ್ರೆ ಇದು ಹಾರ್ದಿಕ್ ಏಕಾಂಗಿ ಹೋರಾಟ!

Share :

Published July 7, 2024 at 2:34pm

  ಕ್ಯಾಪ್ಟನ್​ ಆದ ಸಂಭ್ರಮಕ್ಕಿಂತ, ಅಪಮಾನದ ನೋವೇ ಹೆಚ್ಚು

  ಹೆಂಡತಿಯು ದೂರ, ಈ ಕಡೆ ಫ್ಯಾನ್ಸ್​ ಕೂಡ ಅವಮಾನಿಸ್ತಿದ್ರು

  ವಿಷಕಂಠನಂತೆ ನೋವು ನುಂಗಿಕೊಂಡಿದ್ದ ಹಾರ್ದಿಕ್​ ಪಾಂಡ್ಯ

ಬಿದ್ದಲ್ಲೇ ಏಳಬೇಕು, ಕಳೆದುಕೊಂಡ ಕಡೆನೇ ಹುಡುಕಬೇಕು ಎಂಬ ನಾನ್ನುಡಿಗಳು ಯಾರಿಗೆ ಅನ್ವಯವಾಗುತ್ತೋ ಇಲ್ವೋ. ಆದ್ರೆ, ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಹಾರ್ದಿಕ್​ ಪಾಂಡ್ಯಗೆ ಸರಿಯಾಗಿ ಸೂಟ್ ಆಗುತ್ತೆ. ಯಾಕಂದ್ರೆ, ಅವಮಾನಿಸಿದ ಅದೇ ಸ್ಟೇಡಿಯಂಗೆ ವಿಶ್ವ ಕಿರೀಟ ತಂದಿಟ್ಟ ಹೀರೋ.

ಕಳೆದ ಕೆಲ ತಿಂಗಳಲ್ಲಿ ನೀವು ಅನೇಕ ಕಷ್ಟದ ದಿನಗಳನ್ನ ಎದುರಿಸಿದ್ದೀರಿ. ಆದರೂ ನೀವು ಶಾಂತವಾಗಿ ನೋಡಿದ್ದೀರಿ. ಇಂದು ನಿಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆಗೆ ತಕ್ಕ ಫಲಿತಾಂಶ ಪಡೆದಿದ್ದೀರಿ. ಇನ್ನೂ ಹೆಚ್ಚಿನದನ್ನು ಸಾಧನೆ ಮಾಡಿದ್ದೀರಿ. ಅದನ್ನು ಹೇಳಲು ಪದಗಳು ಕಡಿಮೆಯಾಗುತ್ತವೆ.

ಇಶಾನ್ ಕಿಶನ್, ಟೀಮ್ ಇಂಡಿಯಾ ಆಟಗಾರ

ಇದು ಬೇರ್ಯಾರಿಗೋ ಹೇಳ್ತಿರೋ ಮಾತಲ್ಲ. ಟಿ20 ವಿಶ್ವಕಪ್​ ಗೆಲುವಿನ ಹೀರೋ ಹಾರ್ದಿಕ್​ ಪಾಂಡ್ಯ ಬಗ್ಗೆ ಇಶಾನ್, ತನ್ನ ಇನ್​ಸ್ಟಾದಲ್ಲಿ ಬರೆದುಕೊಂಡ ಸಾಲುಗಳು. ಹಾರ್ದಿಕ್​ ಬಗ್ಗೆ ಇಶಾನ್, ಬರೆದುಕೊಂಡ ಈ ಭಾವನಾತ್ಮಕ ಸಾಲುಗಳ ಹಿಂದೆ ಅಪಮಾನ.. ನೋವು, ಕಣ್ಣೀರ ಕಥೆ ಇದೆ.

6 ತಿಂಗಳು ವಿಶ್ವಕಪ್​ ಹೀರೋ ಅನುಭವಿಸಿದ್ದು ಬರೀ ನೋವು..!

2023 ಡಿಸೆಂಬರ್ 15.. ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕಗೊಂಡ ದಿನ. ಈ ದಿನ ಹಾರ್ದಿಕ್​​ಗೆ ನಾಯಕನಾದ ಸಂಭ್ರಮಕ್ಕಿಂತ ಸಿಕ್ಕಿದ್ದು, ಅಪಮಾನ ನೋವೇ ಹೆಚ್ಚು. ರೋಹಿತ್​​ಗೆ ಅನ್ಯಾಯವಾಯ್ತು ಎಂದು ​ನಿಂದಿಸಿದ್ದೆ ಹೆಚ್ಚಾಗಿತ್ತು. ಹಾರ್ದಿಕ್ ಕಂಡಾಗಲೆಲ್ಲ ರೋಹಿತ್.. ರೋಹಿತ್ ಎಂದು ಮೂದಲಿಸಿದ್ರು ಆದ್ರೆ, ಈ ನೋವನ್ನೆಲ್ಲ ವಿಷಕಂಠನಂತೆ ನುಂಗಿದ್ದ ಪಾಂಡ್ಯ, ಒಂದೇ ಸಣ್ಣ ಮಾತು ಆಡಿರಲಿಲ್ಲ. ಇದಕ್ಕೆಲ್ಲಾ ಸ್ಟೇಡಿಯಂನಲ್ಲೇ ಉತ್ತರ ನೀಡಬೇಕೆಂಬ ಪಣ ತೊಟ್ಟಿದ್ರು.

ನನಗೆ 6 ತಿಂಗಳು ಬಹಳ ಮನರಂಜನೆಯಾಗಿತ್ತು. ಸಾಕಷ್ಟು ಏರಿಳಿತಗಳಿತ್ತು. ಮೈದಾನ ಹಾಗೂ ಪಬ್ಲಿಕ್​ನಲ್ಲಿ ಹೋದಾಗಲೆಲ್ಲ ಬೈಯುತ್ತಿದ್ದರು. ಆದ್ರೆ, ನಾನು ಉತ್ತರಿಸದೆ, ನನ್ನ ಆಟದಿಂದ ಉತ್ತರ ಕೊಡುತ್ತೇನೆ ಎಂದು ಮೌನವಾಗಿ ತೆರಳುತ್ತಿದ್ದೆ.

ಹಾರ್ದಿಕ್ ಪಾಂಡ್ಯ, ಆಲ್​ರೌಂಡರ್

ಇದೇ ಮಾತಿನಂತೆ ಹಾರ್ದಿಕ್, ಟಿ20 ವಿಶ್ವಕಪ್​ನ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ರು. ಸೌತ್ ಆಫ್ರಿಕಾ ಎದುರಿನ ಫೈನಲ್​ನಲ್ಲಿ ಕೊನೆ ಓವರ್​ನಲ್ಲಿ 16 ರನ್ ಡಿಫೆಂಡ್ ಮಾಡಿಕೊಂಡ ಹಾರ್ದಿಕ್, ವಿಶ್ವಕಪ್ ಗೆಲುವಿನ ರೂವಾರಿಯಾದ್ರು. ಅಷ್ಟೇ ಅಲ್ಲ, ದೇಶದ ಕಣ್ಮಣಿಯಾದ್ರು.

ಇದನ್ನೂ ಓದಿ: ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

ಟೀಕಿಸಿದ ಅಭಿಮಾನಿಗಳ ಬಾಯಲ್ಲೇ ಜೈಕಾರ

ಜಸ್ಟ್​ 2 ತಿಂಗಳ ಹಿಂದೆ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಪಾಂಡ್ಯಗೆ ಅವಮಾನ ಮಾಡಿದ್ರು. ಟೀಮ್ ಇಂಡಿಯಾದಲ್ಲಿ ಜಾಗ ನೀಡಿದಕ್ಕೆ ಪ್ರಶ್ನೆಯನ್ನು ಮಾಡಿದ್ರು. ಇದೆಲ್ಲವನ್ನ ಹಾರ್ದಿಕ್ ಪಾಂಡ್ಯ ನಗುತ್ತಲೇ ಸ್ವೀಕರಿಸಿದ್ದರು. ಆದ್ರೆ, ಟಿ20 ವಿಶ್ವಕಪ್​ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ, ಅದೇ ಮೈದಾನಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟರು. ಯಾವ ಅಂಗಳದಲ್ಲಿ ಟೀಕೆ, ನಿಂದನೆ ಪ್ರತಿಧ್ವನಿಸುತ್ತಿತ್ತೋ, ಅದೇ ಸ್ಟೇಡಿಯಂ ಹಾರ್ದಿಕ್.. ಹಾರ್ದಿಕ್ ಎಂಬ ಜಯಘೋಷ ಪ್ರತಿಧ್ವನಿಸಿತ್ತು. ಈ ವೇಳೆ ಸ್ಟೇಜ್​ನಿಂದಲೇ ಪ್ರೀತಿಯ ಅಪ್ಪುಗೆ ನೀಡಿದ್ರು.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

6 ತಿಂಗಳ ಕಾಲ ನೋವಲ್ಲೇ ಕಳೆದ ಪಾಂಡ್ಯ, ತಾನೇನು ಅನ್ನೋದನ್ನ ಫ್ರೂವ್ ಮಾಡಲು ತಾಳ್ಮೆಯ ಸಾಕಾರ ಮೂರ್ತಿಯಂತಿದ್ದರು. ಸೋತಲ್ಲೇ ಗೆದ್ದು ತೋರಿಸಿದ ಹಾರ್ದಿಕ್​​​​​​, ನಡೆ ನಿಜಕ್ಕೂ ಸ್ಪೂರ್ತಿಯ ಕಥೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಂಡ್ಯಗೆ ಭಾರೀ ಅವಮಾನ.. ಸ್ಥಾನ ನೀಡಿದ್ದಕ್ಕೆ ಪ್ರಶ್ನೆಗಳ ಸುರಿಮಳೆ; ಆದ್ರೆ ಇದು ಹಾರ್ದಿಕ್ ಏಕಾಂಗಿ ಹೋರಾಟ!

https://newsfirstlive.com/wp-content/uploads/2024/07/HARDHIK_PANDYA-3.jpg

Load More