ಸಿಂಗಲ್ ಹ್ಯಾಂಡ್ ಸಿಕ್ಸ್.. ಪಂತ್ ನೆನಪಿಸಿದ ಕಿಶನ್
ಪಂತ್ ಬ್ಯಾಟ್ನಲ್ಲೇ ಹಾಫ್ ಸೆಂಚೂರಿ ಸಿಡಿತ
ಇಶಾನ್ ಅರ್ಧಶತಕದ ಹಿಂದೆ ರಿಷಭ್ ಪಂತ್
ಟೀಮ್ ಇಂಡಿಯಾದಲ್ಲಿ ರಿಷಭ್ ಪಂತ್ ಇಲ್ಲವೆಂಬ ಕೊರಗು ಇನ್ನಿಲ್ಲದಂತೆ ಕಾಡಿತ್ತು. ಆದ್ರೆ ತಂಡದಲ್ಲಿ ಪಂತ್ ಇಲ್ಲದಿದ್ರೂ ತಂಡಕ್ಕೆ ನೆರವಾಗಿದ್ದು ಮಾತ್ರ ರಿಷಭ್ ಪಂತ್. ರಿಷಭ್ ಪಂತ್. ಟೀಮ್ ಇಂಡಿಯಾದ ಡೇಂಜರಸ್ ಬ್ಯಾಟ್ಸ್ಮನ್. ಟೆಸ್ಟ್ ಕ್ರಿಕೆಟ್ನಲ್ಲಿ ಹೊಡಿಬಡಿ ಆಟವಾಡೋ ಪಂತ್, ಎದುರಾಳಿಗಳಿಗೆ ಮಾತ್ರವೇ ಅಲ್ಲ. ಡಕೌಟ್ನಲ್ಲಿ ಕುಳಿತು ಎಂಜಾಯ್ ಮಾಡೋ ಸಹ ಆಟಗಾರರ ಎದೆಯಲ್ಲೂ ಢವಢವ ಹುಟ್ಟಿಸ್ತಾರೆ. ಇದಕ್ಕೆ ಕಾರಣ ಪಂತ್ರ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟಿಂಗ್. ಈ ಬ್ಯಾಟಿಂಗ್ ಕಣ್ತುಂಬಿಕೊಂಡು ಹಲವು ದಿನಗಳೇ ಆಗಿತ್ತು. ಆದ್ರೆ ಟ್ರಿನಿಡಾಡ್ ಟೆಸ್ಟ್ನಲ್ಲಿ ಇಶಾನ್ ಕಿಶನ್ರ ಆಟ ಇವೆಲ್ಲವನ್ನು ಮರೆಸಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ವಿಂಡೀಸ್ ತಂಡವನ್ನು 255 ರನ್ಗಳಿಗೆ ಕಟ್ಟಿಹಾಕಿದ್ದ ಟೀಮ್ ಇಂಡಿಯಾ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟಿ20 ಗೇಮ್ ಆಡ್ತು. 12 ಓವರ್ಗಳ ಮುಕ್ತಾಯಕ್ಕೆ 100 ರನ್ ಕಲೆ ಹಾಕಿತ್ತು. ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಸಿಡಿಸಿದ್ರೆ, ಜೈಸ್ವಾಲ್ 38 ರನ್ ಗಳಿಸಿದ್ರು. ಈ ಬಳಿಕ ಶುರುವಾಗಿದ್ದೇ ಇಶಾನ್ ಕಿಶನ್ ಆಟ.
ಸ್ಫೋಟಕ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್
ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್, ಜಸ್ಟ್ 34 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಒಳಗೊಂಡ ಅಜೇಯ 52 ರನ್ ಚಚ್ಚಿದ್ರು. ಆ ಮೂಲಕ ಟೆಸ್ಟ್ ಕ್ರಿಕೆಟ್ನ ಚೊಚ್ಚಲ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ರು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಪರ 5ನೇ ಅತಿ ವೇಗದ ಫಿಫ್ಟಿ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು.
ಸಿಂಗಲ್ ಹ್ಯಾಂಡ್ ಸಿಕ್ಸ್.. ಪಂತ್ ಆಟ ನೆನಪಿಸಿದ ಕಿಶನ್
2ನೇ ಇನ್ನಿಂಗ್ಸ್ನಲ್ಲಿ ಎಂಟರ್ಟೈನ್ಮೆಂಟ್ ಬ್ಯಾಟಿಂಗ್ ನಡೆಸಿದ ಇಶಾನ್, ಅರ್ಧಶತಕ ಅಂಚಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿಂಗಲ್ ಹ್ಯಾಂಡ್ನಲ್ಲೇ ಸಿಕ್ಸ್ ಸಿಡಿಸಿದ್ರು. ಈ ಶಾಟ್ಸ್ ಆ್ಯಂಡ್ ಅಗ್ರೆಷನ್ ನಿಜಕ್ಕೂ ರಿಷಭ್ ಪಂತ್ರನ್ನೇ ನೆನಪಿಸಿದ್ದು ಸುಳ್ಳಲ್ಲ. ಮತ್ತೊಂದು ಅಚ್ಚರಿ ಎಂದರೆ ಕಿಶನ್ ಆಟವಾಡಿದ್ದು ಆರ್ಪಿ 17 ಬ್ಯಾಟ್ನಲ್ಲೇ ಆಗಿತ್ತು. ಈ ಬ್ಯಾಟ್ ಬೇಱರದ್ದೂ ಅಲ್ಲ. ಸ್ವತಃ ರಿಷಭ್ ಪಂತ್ ಅವರದ್ದಾಗಿತ್ತು.
ನಾನು ಇಲ್ಲಿಗೆ ಬರುವ ಮುನ್ನ ಎನ್ಸಿಎಗೆ ತೆರಳಿ ಅಭ್ಯಾಸ ಮಾಡುತ್ತಿದ್ದೆ. ಅಲ್ಲಿ ಪಂತ್ ಕೂಡ ರಿಹಾಬ್ ಮಾಡುತ್ತಿದ್ದರು. ಕೆಲವು ಮಹತ್ವದ ಬ್ಯಾಟಿಂಗ್ ಟಿಪ್ಸ್ ನೀಡಿದರು. ನಾವು ಅಂಡರ್-19 ದಿನಗಳಿಂದ ಜೊತೆಗಿದ್ದೇವೆ. ಅನೇಕ ಪಂದ್ಯಗಳನ್ನು ಒಟ್ಟಿಗೆ ಆಡಿದ್ದೇವೆ. ನನ್ನ ಮನಸ್ಥಿತಿ ಗೊತ್ತು. ನಾನು ಹೇಗೆ ಆಡುತ್ತೇನೆ ಎಂಬುದು ಪಂತ್ಗೆ ಚೆನ್ನಾಗಿ ತಿಳಿದಿದೆ. ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಪಂತ್ ಕೆಲ ಟಿಪ್ಸ್ ನೀಡಿದರು. ನನ್ನ ಜೊತೆ ಮಾತುಕತೆ ನಡೆಸಿದ್ದಕ್ಕೆ ಪಂತ್ಗೆ ಧನ್ಯವಾದಗಳು.
ಇಶಾನ್ ಕಿಶನ್, ಟೀಂ ಇಂಡಿಯಾ ಯವ ಆಟಗಾರ
ಪಂತ್ ಪರ್ಯಾಯ ಸಂದೇಶ ರವಾನಿಸಿದ ಇಶಾನ್
ಒಂದ್ಕಡೆ ಪಂತ್ ಬ್ಯಾಟ್ ಹಿಡಿದು ಹಿಗ್ಗಾಮುಗ್ಗಾ ದಂಡಿಸಿದ ಇಶಾನ್, ರಿಷಭ್ ಪಂತ್ ಪರ್ಯಾಯ ಸ್ಥಾನಕ್ಕೆ ನಾನೇ ಸೂಕ್ತ ಅನ್ನೋ ಸಂದೇಶ ರವಾನಿಸಿದ್ದಾರೆ. ಇನ್ಫ್ಯಾಕ್ಟ್ ಟೀಮ್ ಮ್ಯಾನೇಜ್ಮೆಂಟ್ ಪಂತ್ ಬದಲಿ ಆಟಗಾರನ ಹುಡುಕಾಟದ ವೇಳೆಯೇ ಇಶಾನ್ ಕೌಂಟರ್ ಅಟ್ಯಾಕಿಂಗ್ ಇನ್ನಿಂಗ್ಸ್ ಹೊಸ ಉತ್ಸಾಹವನ್ನೇ ನೀಡಿದೆ. ಇದು ಸಹಜವಾಗೇ ವೈಫಲ್ಯ ಕಂಡಿರುವ ಕೆ.ಎಸ್.ಭರತ್ ಸ್ಥಾನವನ್ನು ಅತಂತ್ರಕ್ಕೆ ಸಿಲುಕಿಸುತ್ತಿದೆ.
ಅದೇನೇ ಆಗಲಿ, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ವಿಕೆಟ್ ಕೀಪರ್ ಟೀಮ್ ಇಂಡಿಯಾಗೆ ಬೇಕಿತ್ತು. ಇದಕ್ಕೆ ಉತ್ತರವಾಗಿ ರಿಷಭ್ ಪಂತ್ ಗೆಳೆಯ ಇಶಾನ್ ಕಣ್ಣೆದುರಿಗೆ ಕಾಣ್ತಿರೋದು ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್