newsfirstkannada.com

×

6, 6, 6, 14 ಬೌಂಡರಿ; ಇಶನ್ ಕಿಶನ್ ಭರ್ಜರಿ ಸೆಂಚುರಿ.. ಟೀಕಾಕಾರಿಗೆ ಬ್ಯಾಟ್​ನಿಂದಲೇ ಉತ್ತರ..!

Share :

Published September 13, 2024 at 9:38am

    ಬೃಹತ್ ಮೊತ್ತದ ರನ್​ಗೆ ಕಾರಣನಾದ ಯಂಗ್ ಪ್ಲೇಯರ್

    ಅನಂತಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಶನ್ ಶತಕ

    ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಯುವ ಆಟಗಾರ

ದುಲೀಪ್ ಟ್ರೋಫಿಯ 4ನೇ ಪಂದ್ಯದಲ್ಲಿ ಯಂಗ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ಇಶನ್ ಕಿಶನ್ ಭರ್ಜರಿ ಶತಕ ಸಿಡಿಸಿ ಎಲ್ಲ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಕೆಲ ಕಾರಣಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಯುವ ಪ್ಲೇಯರ್ ಇದೀಗ ಬ್ಯಾಟ್ ಮೂಲಕ ಎಲ್ಲರ ಮುಚ್ಚಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ 4ನೇ ಪಂದ್ಯದಲ್ಲಿ ಇಂಡಿಯಾ ಬಿ ಟೀಮ್ ಟಾಸ್ ಗೆದ್ದುಕೊಂಡಿತ್ತು. ಇಂಡಿಯಾ ಸಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಓಪನರ್ ನಾಯಕ ಋತುರಾಜ್ ಗಾಯಕ್ವಾಡ್ 46 ನಾಟೌಟ್, ಸಾಯಿ ಸುದರ್ಶನ್ 43, ರಜತ್ ಪಾಟೀದಾರ್ 40 ರನ್​ಗೆ ಔಟ್ ಆದರು. ಬಳಿಕ ಆಗಮಿಸಿದ ಇಶನ್ ಕಿಶನ್, ಕ್ಯಾಪ್ಟನ್ ಗಾಯಕ್ವಾಡ್ ಜೊತೆ ಸೇರಿ ಭರ್ಜರಿ ಇನ್ನಿಂಗ್ಸ್ ಕಟ್ಟಿದರು.

ಇಂಡಿಯಾ ಬಿ ತಂಡದ ಬೌಲರ್​ಗಳನ್ನು ಸರಿಯಾಗಿ ಕಾಡಿದ ಇಶನ್ ಕಿಶನ್ ಕೇವಲ 126 ಎಸೆತಗಳಲ್ಲಿ 14 ಅಮೋಘವಾದ ಬೌಂಡರಿಗಳು, 3 ಭರ್ಜರಿ ಸಿಕ್ಸರ್ ಸಮೇತ 111 ರನ್​ಗಳನ್ನು ಸಿಡಿಸಿ ಔಟ್ ಆಗಿದ್ದಾರೆ. ಈ ಮೂಲಕ ಬೃಹತ್ ಮೊತ್ತದ ರನ್​ಗಳನ್ನು ಕಲೆ ಹಾಕಲು ತಂಡಕ್ಕೆ ನೆರವಾಗಿದ್ದಾರೆ. ದೀರ್ಘಕಾಲದಿಂದ ಭಾರತ ತಂಡದಿಂದ ಹೊರಗುಳಿದಿದ್ದ ಇಶನ್ ಕಿಶನ್​ಗೆ ಇದು ಮಹತ್ವದ ಪಂದ್ಯವಾಗಿದ್ದು ಮುಂದಿನ ಭಾರತ ತಂಡದ ಪಂದ್ಯಗಳಿಗೆ ಆಯ್ಕೆಯಾಗುವ ನಿರೀಕ್ಷೆಗಳಿವೆ. ಅಲ್ಲದೇ 2025ರ ಐಪಿಎಲ್​ ಆಕ್ಷನ್​ಗೂ ಇದು ಪರಿಗಣನೆಗೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: 3 ಲಕ್ಸುರಿ ಕಾರು.. 2 ಕೋಟಿ ಪ್ಲಾಟ್; ವಿನೇಶ್ ಫೋಗಟ್‌ ಬಳಿ ಇರೋ ಚಿನ್ನ ಎಷ್ಟು? ಸಾಲ ಎಷ್ಟಿದೆ ಗೊತ್ತಾ?

ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಸೆಂಚುರಿ ಸಿಡಿಸಿದ್ದ ಕಿಶನ್ ಆದರೂ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಆಗಿರಲಿಲ್ಲ. ಅಲ್ಲದೇ ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಬೆನ್ನು ನೋವಿನಿಂದ ಮೊದಲ ಸುತ್ತಿನ ದುಲೀಪ್ ಟ್ರೋಫಿಯಲ್ಲಿ ಆಡಿರಲಿಲ್ಲ. ಸದ್ಯ ಸಿಕ್ಕಿರುವ ಅವಕಾಶವನ್ನು ಇಶನ್ ಕಿಶನ್ ಚೆನ್ನಾಗಿ ಬಳಕೆ ಮಾಡಿಕೊಂಡಿದ್ದು ಬಾಂಗ್ಲಾದೇಶದ ವಿರುದ್ಧ ನಡೆಯುವ ಟಿ20 ಸರಣಿಗೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ.

ಇನ್ನು ಇಂಡಿಯಾ ಸಿ ತಂಡ 79 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 357 ರನ್​ಗಳನ್ನು ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕ್ಯಾಪ್ಟನ್ ಗಾಯಕ್ವಾಡ್ 46 ರನ್​ಗಳಿಂದ ಆಡುತ್ತಿದ್ದಾರೆ. ಇಂಡಿಯಾ ಬಿ ಪರ ಮುಖೇಶ್ ಕುಮಾರ್ 3 ವಿಕೆಟ್​ಗಳನ್ನು ಕಿತ್ತು ತಂಡಕ್ಕೆ ಕೊಡುಗೆ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6, 6, 6, 14 ಬೌಂಡರಿ; ಇಶನ್ ಕಿಶನ್ ಭರ್ಜರಿ ಸೆಂಚುರಿ.. ಟೀಕಾಕಾರಿಗೆ ಬ್ಯಾಟ್​ನಿಂದಲೇ ಉತ್ತರ..!

https://newsfirstlive.com/wp-content/uploads/2024/09/ISHAN_KISHAN-1.jpg

Load More