newsfirstkannada.com

ಕೈಕೊಟ್ಟ ಕೊಹ್ಲಿ, ರೋಹಿತ್​; ಪಾಕ್​​ ಬೌಲರ್ಸ್​ ಬೆಂಡೆತ್ತಿದ್ದ ಇಶಾನ್​​ ಸಿಡಿಸಿದ್ರು ಬರೋಬ್ಬರಿ 82 ರನ್​​

Share :

02-09-2023

    ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್​​ ಟೂರ್ನಿ

    ಇಂದು ಪಾಕ್​​, ಭಾರತ ನಡುವಿನ ಮಹತ್ವದ ಪಂದ್ಯ..!

    ಇನ್ನಿಂಗ್ಸ್​ ಉದ್ಧಕ್ಕೂ ಪಾಕ್​ ಬೌಲರ್ಸ್​ ಬೆಂಡೆತ್ತಿದ ಇಶಾನ್​​

ಇಂದು ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್​​ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಹೀಗಾಗಿ ಪಾಕ್​​ ತಂಡವು ಫೀಲ್ಡಿಂಗ್​​ ಮಾಡುತ್ತಿದೆ.

ಟೀಂ ಇಂಡಿಯಾ ಪರ ಕ್ರೀಸ್​ಗೆ ಬಂದಿದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಶುಭ್ಮನ್​ ಗಿಲ್​ ಮತ್ತು ಶ್ರೇಯಸ್​ ಅಯ್ಯರ್​​ ಅತೀ ಕಡಿಮೆ ರನ್​ಗೆ ಔಟ್​ ಆದ್ರು. ಬಳಿಕ ಬಂದ ಇಶಾನ್​ ಕಿಶನ್​ 40 ಓವರ್​ಗಳ ತನಕ ನಿಂತು ಬ್ಯಾಟ್​ ಬೀಸಿದ್ರು. ಪಾಕ್​ ತಂಡದ ಬೌಲರ್ಸ್​ ಬೆಂಡೆತ್ತಿದ್ರು.

ಇನ್ನು, ಒನ್​ ಡೇ ಮಾದರಿಯಲ್ಲಿ 100ಕ್ಕೂ ಹೆಚ್ಚು ಸ್ಟ್ರೈಕ್​​ ರೇಟ್​ನೊಂದಿಗೆ ಬ್ಯಾಟ್​ ಬೀಸಿದ ಇಶಾನ್​ ಕಿಶನ್​​ ಕೇವಲ 81 ಬಾಲ್​ನಲ್ಲಿ 82 ರನ್​ ಸಿಡಿಸಿದ್ರು. ಬರೋಬ್ಬರಿ 2 ಸಿಕ್ಸರ್​​, 9 ಫೋರ್​​ನೊಂದಿಗೆ ಸಾಲಿಡ್​ ನಾಕ್​​ ಬಾರಿಸಿದ್ರು. ಬಳಿಕ ಹ್ಯಾರೀಸ್​ ರೌಫ್​ ಬೌಲಿಂಗ್​ನಲ್ಲಿ ಕ್ಯಾಪ್ಟನ್​ ಬಾಬರ್​ ಅಜಂಗೆ ಕ್ಯಾಚ್ ನೀಡಿ ಪೆವಿಲಿಯನ್​ಗೆ ತೆರಳಿದ್ರು. ಈ ಮೂಲಕ ಟೀಂ ಇಂಡಿಯಾ ಬೃಹತ್​ ಮೊತ್ತ ಪೇರಿಸಲು ಸಹಕಾರಿಯಾದ್ರು.

ಇಶಾನ್​ ಕಿಶನ್​ ಆಟಕ್ಕೆ ಇಡೀ ಕ್ರೀಡಾ ಲೋಕವೇ ಪುಲ್​ ಫಿದಾ ಆಗಿದೆ. ಹಾಗೆಯೇ ಅಬ್ಬಬ್ಬಾ! ಇಶಾನ್​ ಎಂಥಾ ಕ್ವಾಲಿಟಿ ಪ್ಲೇಯರ್​ ಗುರು ಅನ್ನೋ ಮಾತುಗಳು ಕೇಳಿ ಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಕೊಟ್ಟ ಕೊಹ್ಲಿ, ರೋಹಿತ್​; ಪಾಕ್​​ ಬೌಲರ್ಸ್​ ಬೆಂಡೆತ್ತಿದ್ದ ಇಶಾನ್​​ ಸಿಡಿಸಿದ್ರು ಬರೋಬ್ಬರಿ 82 ರನ್​​

https://newsfirstlive.com/wp-content/uploads/2023/09/Ishan-Kishan.jpg

Load More