newsfirstkannada.com

Share :

Published June 2, 2023 at 3:23pm

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್​ಗೆ ದಿನಗಣನೆ

    ಆಸ್ಟ್ರೇಲಿಯಾ ತಂಡದ ವಿರುದ್ಧ ಕಣಕ್ಕಿಳಿಯೋ ಟೀಂ ಇಂಡಿಯಾ

    ಯಾರಿಗೆ ಚಾನ್ಸ್​..? ಯಾರಿಗೆ ಕೊಕ್..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಕಣಕ್ಕಿಳಿಯೋ ಟೀಂ ಇಂಡಿಯಾ ಹೇಗಿರಬೇಕು ಎಂದು ಭಾರೀ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ತಂಡದಲ್ಲಿ ಯಾರಿಗೆ ಚಾನ್ಸ್​ ನೀಡಬೇಕು? ಯಾರಿಗೆ ಕೊಕ್​ ಕೊಡಬೇಕು? ಅನ್ನೋ ಚರ್ಚೆಗಳು ಜೋರಾಗಿವೆ. ಈ ಬಗ್ಗೆಯೀಗ ಟೀಂ ಇಂಡಿಯಾದ ದಿಗ್ಗಜ ಸಂಜಯ್ ಮಂಜ್ರೇಕರ್ ಮಾತಾಡಿದ್ದಾರೆ.

ಈ ಸಂಬಂಧ ಮಾತಾಡಿದ ಸಂಜಯ್ ಮಂಜ್ರೇಕರ್, ರಿಷಬ್​ ಪಂತ್​​​ ಗಾಯದಿಂದ ಅಲಭ್ಯ ಆಗಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಈತನ ಸ್ಥಾನ ತುಂಬುವುದು ಯಾರು? ಅನ್ನೋ ಚರ್ಚೆ ಶುರುವಾಗಿದೆ. ಕೆ.ಎಲ್​ ರಾಹುಲ್​ ಕೂಡ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಕೆ.ಎಸ್​ ಭರತ್​ಗೆ ಸ್ಥಾನ ಸಿಗಬಹುದು. ಆದರೆ, ಭರತ್ ಬದಲಿಗೆ ಟೀಂ ಇಂಡಿಯಾದ ಸ್ಟಾರ್​​ ಆಟಗಾರನಿಗೆ ಅವಕಾಶ ಮಾಡಿಕೊಟ್ಟರೆ ಒಳಿತು ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ನಾನು ಇಶಾನ್ ಕಿಶನ್ ಆಡುವುದನ್ನು ನೋಡಲು ಬಯಸುತ್ತೇನೆ. ಈ ಸಲಹೆ ಭಿನ್ನವಾಗಿರಬಹುದು. ಕೆಎಸ್ ಭರತ್​ಗಿಂಗ ಇಶಾನ್​ ಕಿಶನ್​ ಸ್ಥಿರ ಶೈಲಿಯ ಬ್ಯಾಟರ್ ಹಾಗೂ ಡೀಸೆಂಟ್ ವಿಕೆಟ್ ಕೀಪರ್​​. ಎದುರಾಳಿಗಳ ಮೇಲೆ ಒತ್ತಡ ಹೇರಲು ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More