newsfirstkannada.com

WATCH: ಎಲ್ಲೇ ಅಡಗಿದ್ದರೂ ಬಿಡದ ಇಸ್ರೇಲ್ ಸೇನೆ.. ಗಾಜಾ ಪಟ್ಟಿ ಮೇಲೆ ಭಯಾನಕ ದಾಳಿ

Share :

01-11-2023

    ಇಸ್ರೇಲ್‌ ಭಯಾನಕ ಬಾಂಬ್​ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಸಾವು

    ಯುದ್ಧದ ಭೀಕರತೆಯ ವಿಡಿಯೋ ರಿಲೀಸ್​ ಮಾಡಿದ ಇಸ್ರೇಲ್ ಸೇನೆ

    ಗಾಜಾದ ಜಬಿಲಿಯಾ ಕ್ಯಾಂಪ್ ಮೇಲೆ ಇಸ್ರೇಲ್ ಬಾಂಬ್ ದಾಳಿ

ಹಮಾಸ್ ಮತ್ತು ಇಸ್ರೇಲ್​ ನಡುವಿನ​ ಯುದ್ಧ ರಣ ಭೀಕರತೆಯನ್ನು ಸೃಷ್ಟಿಸಿದ್ದರಿಂದ ಸಾವಿರಾರು ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸಂಬಂಧಿಕರನ್ನು ಕಳೆದುಕೊಂಡ ಅದೆಷ್ಟೋ ಮಂದಿ ದಿಕ್ಕು ದೋಚದೇ ಅಸಹಾಯಕರಾಗಿ ಬದುಕುತ್ತಿದ್ದಾರೆ. ಬಹುಮಡಿ ಕಟ್ಟಡಗಳು ನೆಲಕ್ಕೆ ಅಪ್ಪಳಿಸಿವೆ. ಗಾಜಾ ಸ್ಟ್ರಿಪ್ ಮೇಲೆ ಇಸ್ರೇಲ್ ಮಾಡಿರುವ ಏರ್​​ಸ್ಟ್ರೈಕ್​ ಹಿಂದೆಂದೂ ಕಾಣದಂತ ರಕ್ತಪಾತವಾಗಿದೆ. ಸದ್ಯ ಈಗಲೂ ಏರ್​​ಸ್ಟ್ರೈಕ್ ಮೂಲಕ ಬಾಂಬ್ ದಾಳಿ ಮಾಡುತ್ತಿದೆ. ಗಾಜಾ ಮೇಲೆ ಹೇಗೆ ಅಟ್ಯಾಕ್ ಮಾಡಲಾಗಿದೆ ಎಂಬುದರ ಬಗ್ಗೆ ಸೇನೆ ಭಯಾನಕವಾದ ವಿಡಿಯೋ ರಿಲೀಸ್​ ಮಾಡಿದೆ.

ಯುದ್ಧ ಟ್ಯಾಂಕ್​ಗಳ ಸಮೇತ ಗಾಜಾ ಪಟ್ಟಿಯೊಳಗೆ ನುಗ್ಗಿರುವ ಇಸ್ರೇಲ್ ಸೇನೆ ಬಾಂಬ್ ದಾಳಿ ಮಾಡುತ್ತಿರುವ ಹಾಗೂ ಗನ್​ನಿಂದ ಶೂಟ್ ಮಾಡುತ್ತಿರುವುದರ ಬಗ್ಗೆ ಭಯಾನಕವಾದ ವಿಡಿಯೋ ಬಿಡುಗಡೆ ಮಾಡಿದೆ. ಸದ್ಯ ನಿನ್ನೆ ಇಸ್ರೇಲ್‌ ನಡೆಸಿರುವ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಗಾಜಾದ ಜಬಿಲಿಯಾ ಕ್ಯಾಂಪ್ ಮೇಲೆ ಇಸ್ರೇಲ್ ಬಾಂಬ್ ದಾಳಿ ಮಾಡಿದ್ದು ನಿರಾಶ್ರಿತರ ಶಿಬಿರದಲ್ಲಿದ್ದ 50 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ನಗರದ ವೆಸ್ಟ್ ಬ್ಯಾಂಕ್‌ನ ಜೆನಿನ್ ಪ್ರದೇಶದಲ್ಲಿ ಇಸ್ರೇಲ್ ಏರ್​ಸ್ಟ್ರೈಕ್​ನಿಂದ ಮೂವರು ಪ್ಯಾಲೆಸ್ತೀನ್​ಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ 130 ಮಂದಿ ಪ್ಯಾಲೆಸ್ತೀನಿಯರ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತಿವೆ ಎನ್ನಲಾಗಿದೆ.

ಸಂಪೂರ್ಣ ಹಮಾಸ್ ಭಯೋತ್ಪಾದಕ ಸಂಘಟನೆಯ ವಿನಾಶಕ್ಕೆ ಪಣ ತೊಟ್ಟಿರುವ ಇಸ್ರೇಲ್ ಸೇನೆ, ಮತ್ತೆ ನಮ್ಮ ಮೇಲೆ ದಾಳಿ ಮಾಡಲು ನೆನಪಿಸಿಕೊಳ್ಳಬೇಕು ಎನ್ನುವಾಗೆ ಬಾಂಬ್​ಗಳನ್ನು ಹಾಕುತ್ತಿದೆ. ಸೇನಾ ಯೋಧರು ಕೂಡ ಶೀಘ್ರಗತಿಯಲ್ಲಿ ಕಾರ್ಯಾಚರಣೆಗಳನ್ನು ಮಾಡುತ್ತಿದ್ದಾರೆ.

ಹಮಾಸ್​ ಭಯೋತ್ಪಾದಕರ ನಿಗೂಢ ಸ್ಥಳಗಳನ್ನು ಕೂಡ ಶೋಧ ಮಾಡಿ ಸರ್ವನಾಶ ಮಾಡಲಾಗುತ್ತಿದೆ. ಹೀಗಾಗಿ ಇಸ್ರೇಲ್​ ಅನ್ನು ಯಾಕದ್ರೂ ಕೆಣಕಿದೆವು ಎಂಬ ಭಯ ಹಮಾಸ್​ ಭಯೋತ್ಪಾದಕರಲ್ಲಿ ಮೂಡಿದೆ. ಇದರಿಂದ ಕೆಲ ವಿದೇಶಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡುವುದಾಗಿ ಹಮಾಸ್ ಸಂಘಟನೆ ಹೇಳಿದ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಎಲ್ಲೇ ಅಡಗಿದ್ದರೂ ಬಿಡದ ಇಸ್ರೇಲ್ ಸೇನೆ.. ಗಾಜಾ ಪಟ್ಟಿ ಮೇಲೆ ಭಯಾನಕ ದಾಳಿ

https://newsfirstlive.com/wp-content/uploads/2023/11/ISREAL_AIRSRIKE.jpg

Load More