ಗಾಜಾ ಆಸ್ಪತ್ರೆಯಲ್ಲಿ ಜಾಗವಿಲ್ಲದೇ ರಸ್ತೆ ಬೀದಿಯಲ್ಲೇ ತುರ್ತು ಚಿಕಿತ್ಸೆ
ಅನಸ್ತೇಶಿಯಾ ನೀಡದೆ ಶಸ್ತ್ರಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿ
ಈಜಿಪ್ಟ್ ಮೂಲಕ 6.5 ಟನ್ ವೈದ್ಯಕೀಯ ನೆರವು, 32 ಟನ್ ವಿಪತ್ತು ಪರಿಹಾರ
ನವದೆಹಲಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಸತತ 16 ನೇ ದಿನವೂ ಸಾವು, ನೋವು ನಿಂತಿಲ್ಲ. ಹಮಾಸ್ ಉಗ್ರರನ್ನ ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರೋ ಇಸ್ರೇಲ್ ಭೂ ಸೇನೆ ಗಾಜಾ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ. ದಾಳಿಗಾಗಿ ಯೋಧರಿಗೆ ಗಡಿಯಲ್ಲಿ ತರಬೇತಿ ನೀಡಲಾಗ್ತಿದೆ. ಈ ಯುದ್ಧದ ಮಧ್ಯೆ ಗಾಜಾ ಪಟ್ಟಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಲೆ ಇದೆ.
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದಿಂದ ಪ್ಯಾಲೆಸ್ತೈನಿಯರು ಅಕ್ಷರಶಃ ನಲುಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಜಾಗವಿಲ್ಲದೇ ರಸ್ತೆ ಬೀದಿಯಲ್ಲೇ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗಂತೂ ಅನಸ್ತೇಶಿಯಾ ನೀಡದೆ ಶಸ್ತ್ರಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಪ್ಯಾಲೆಸ್ತ್ತೈನಿಯರಿಗೆ ವೈದ್ಯಕೀಯ ನೆರವು ನೀಡುವ ಅಗತ್ಯವಿದೆ. ಇಂದು ಭಾರತ ಸರ್ಕಾರ ಗಾಜಾ ಪಟ್ಟಿಯಲ್ಲಿ ನಲುಗುತ್ತಿರುವ ಪ್ಯಾಲೆಸ್ತೈನಿಯರಿಗೆ ನೆರವಾಗಲು ವೈದ್ಯಕೀಯ ಅಗತ್ಯ ವಸ್ತುಗಳನ್ನು ರವಾನೆ ಮಾಡಿದೆ. ಈಜಿಪ್ಟ್ ಮೂಲಕ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಪ್ಯಾಲೆಸ್ತೈನ್‌ಗೆ ಕಳುಹಿಸಲಾಗಿದೆ.
ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಾರತವು ಗಾಜಾ ಪಟ್ಟಿಯಲ್ಲಿರುವ ಯುದ್ಧಪೀಡಿತ ನಾಗರಿಕರಿಗೆ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ.
ಇದನ್ನೂ ಓದಿ: Gaza violence: 3103 ಮಕ್ಕಳು ಅಪ್ಪನ ಕಳ್ಕೊಂಡು ಅನಾಥ, 900 ವಿಧವೆ; 50,000 ಗರ್ಭಿಣಿಯರ ಸ್ಥಿತಿ ಸೋಚನೀಯ
ಭಾರತದ IAFC-17 ವಿಮಾನವು ಈಜಿಪ್ಟ್‌ನ L-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ಅಲ್ಲಿ ವೈದ್ಯಕೀಯ ವಿಪತ್ತಿನ ಈ ವಸ್ತುಗಳನ್ನು ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿ ದಾಟಿಸುವ ಮೂಲಕ ಪ್ಯಾಲೆಸ್ಟೈನ್‌ಗೆ ಕಳುಹಿಸಲಾಗುತ್ತದೆ. ವಿಪತ್ತು ನೆರವಿನ ವಿಮಾನದಲ್ಲಿ ಅಗತ್ಯ ಜೀವ ಉಳಿಸುವ ಔಷಧಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು, ನೀರು ಶುದ್ಧೀಕರಣ ಮಾತ್ರೆಗಳು, ಇತರ ಅಗತ್ಯ ವಸ್ತುಗಳು ಒಳಗೊಂಡಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ