newsfirstkannada.com

ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ಸೂರ್ಯನತ್ತ ಚಿತ್ತ; ಊಹಿಸಲೂ ಅಸಾಧ್ಯವಾದ ಸಾಹಸಕ್ಕೆ ಮುಂದಾದ ಇಸ್ರೋ..!

Share :

25-08-2023

    ಚಂದ್ರನ ಚುಂಬನದ ಬಳಿಕ ಸೂರ್ಯ ಶಿಕಾರಿಗೆ ಸಜ್ಜು!

    ‘ದಿನಕರ’ನ ಅಧ್ಯಯನಕ್ಕೆ ಮಿಷನ್​ ಆದಿತ್ಯಗೆ ಮುಹೂರ್ತ!

    ಶ್ರೀಹರಿಕೋಟಾ ತಲುಪಿರುವ ಆದಿತ್ಯ- ಎಲ್‌ 1 ಉಪಗ್ರಹ

ಚಂದ್ರಯಾನ-3ರ ಯಶಸ್ಸು ಇಸ್ರೋಗೆ ಗೆಲುವಿನ ಬೂಸ್ಟ್ ನೀಡಿದೆ. ಬಾನಗಡಿಯಲ್ಲಿ ಚಂದ್ರ ಒಬ್ಬನೇ ಅಲ್ಲ. ಸೂರ್ಯನೂ ಇದ್ದಾನೆ. ಚಂದಿರನ ಗೆದ್ದ ಭಾರತ ಈಗ ಸೂರ್ಯಶಿಕಾರಿಗೆ ಸಜ್ಜಾಗ್ತಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಚಂದ್ರಯಾನ 3ನೇ ಚಂದ್ರಕ್ರಾಂತಿ ಮಾಡಿರುವ ಇಸ್ರೋ ಬಾಹ್ಯಾಕಾಶ ಲೋಕದಲ್ಲಿ ಬಹಳ ದೊಡ್ಡ ಹೆಜ್ಜೆ ಇರಿಸಿದೆ. ಇದರಿಂದ ಭಾರತದ ವಿಜ್ಞಾನಿಗಳು ಅದೆಷ್ಟು ಪ್ರಬಲರು ಅನ್ನೋದು ಸಾಬೀತಾಗಿದೆ. ಮೂರು ಚಂದ್ರಯಾನಗಳ ಮಹಾಯಾನದ ಜ್ಞಾನದ ಹಸಿವು ನೀಗಿಸಿಲ್ಲ. ಮತ್ತಷ್ಟು ಸಂಶೋಧನೆ, ಸಾಧನೆ ಮಾಡುವ ಕಾಯಕ ಇಸ್ರೋದ್ದಾಗಿದೆ. ಹಿಮಕರನ ಅಂಗಳಕ್ಕೆ ವಿಕ್ರಮ ಕಾಲಿಟ್ಟ ಬಳಿಕ ನೇಸರನತ್ತ ನೆಟ್ಟಿದೆ ಇಸ್ರೋ ವಿಜ್ಞಾನಿಗಳ ಚಿತ್ತ.

ಚಂದ್ರಯಾನ-2 ವಿಫಲವಾದ್ರೂ ಅಂಜದೇ, ಅಳುಕದೇ, ಕುಗ್ಗದೇ, ಜಗ್ಗದೇ ಮುನ್ನುಗ್ಗಿ ಚಂದ್ರಯಾನ-3 ಚಮತ್ಕಾರ ಮಾಡಿರುವ ಇಸ್ರೋ ವಿಜ್ಞಾನಿಗಳು ಸೋಲೊಪ್ಪಿಕೊಳ್ಳುವ ಜಾಯಮಾನದವರಲ್ಲ.. ಚಂದ್ರನನ್ನ ಚುಂಬಿಸಿ ಒಂದು ಹೆಜ್ಜೆ ಮುಂದಿರಿಸಿರುವ ಇಸ್ರೋ ಈಗ ಸೂರ್ಯಶಿಕಾರಿಗೆ ಸಜ್ಜಾಗಿದೆ.. ಆದಿತ್ಯ ಎಲ್​-1 ಮಿಷನ್ ಉಡಾವಣೆಗೆ ಇಸ್ರೋ ತಯಾರಿ ನಡೆಸಿದೆ. ವಿವಿಧ ಕೋನಗಳಿಂದ ಭಾಸ್ಕರನನ್ನ ಅಧ್ಯಯನ ಮಾಡುವುದು, ಆದಿತ್ಯನ ವಾತಾವರಣದ ವರ್ಣಗೋಳ, ಕರೋನಾ ಬಗ್ಗೆ ಅಧ್ಯಯನ ಹಾಗೂ ಸೂರ್ಯನ ಸುತ್ತಲಿರುವ ವಾತಾವರಣ, ಸೌರ ಮಾರುತಗಳು ಮತ್ತು ಸೂರ್ಯನ ಗುರುತ್ವಾಕರ್ಷಣ ಶಕ್ತಿ, ಶಾಖ, ಉಷ್ಣಾಂಶ ಸೇರಿ ಬೆಳಕು ಉತ್ಪತ್ತಿ ಹೇಗೆ ಆಗಲಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಸಲಿದೆ.

ಮಿಷನ್ ಆದಿತ್ಯ ಬಗ್ಗೆ ಇಸ್ರೋ ಅಧ್ಯಕ್ಷ ಸೋಮನಾಥ್ ಮಾಹಿತಿ!

ಚಂದ್ರಯಾನ 3 ಯಶಸ್ವಿನ ಬೆನ್ನಲ್ಲೇ ಇಸ್ರೋ ಮುಂದಿನ ತಿಂಗಳು ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಮಾಡಲಿದೆ ಅಂತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಬಹುತೇಕ ಸೆಪ್ಟೆಂಬರ್​​ ಮೊದಲ ವಾರದಲ್ಲಿ ನಾವು ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇನ್ನು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಉಪಗ್ರವಿದು ಅಂತಾ ಸೋಮನಾಥ್ ತಿಳಿಸಿದ್ದಾರೆ.

ಆದಿತ್ಯ ಎಲ್​-1 ಮಿಷನ್ ಉಡಾವಣೆಗಾಗಿ ತಯಾರಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇದನ್ನು ಲಾಂಚ್ ಮಾಡುತ್ತೇವೆ. ಬಳಿಕ ಎಲ್​-1 ಪಾಯಿಂಟ್ ತಲುಪಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತೆ
– ಡಾ.ಎಸ್.ಸೋಮನಾಥ್, ಇಸ್ರೋ ಮುಖ್ಯಸ್ಥ

ಇಸ್ರೋ ಅಭಿವೃದ್ಧಿಪಡಿಸಿರುವ ಆದಿತ್ಯ- ಎಲ್‌ 1 ಉಪಗ್ರಹ ಈಗಾಗಲೇ ಬೆಂಗಳೂರಿನ ಯು.ಆರ್.ರಾವ್ ಸಾಟಿಲೈಟ್ ಸೆಂಟರ್​​​ನಲ್ಲಿ ಸಿದ್ಧವಾಗಿ, ಆಂಧ್ರದ ಶ್ರೀಹರಿಕೋಟಾ ಉಡ್ಡಯನ ನೆಲೆ ತಲುಪಿದೆ. ಮುಂದಿನ ತಿಂಗಳು ಅಲ್ಲಿಂದಲೇ ಉಡಾವಣೆಯಾಗಲಿದ್ದು ಎಲ್ಲಾ ಅಂದುಕೊಂಡಂತೆ ಆದ್ರೆ ಇಸ್ರೋ ಮತ್ತೊಂದು ಸಿಹಿಸುದ್ದಿ ಕೊಡಲಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಊಹಿಸಲೂ ಅಸಾಧ್ಯವಾದ ಸಾಹಸಕ್ಕೆ ಇಸ್ರೋ ಮುಂದಾಗಿದೆ. ಚಂದ್ರಯಾನದ ಬೆನ್ನಲ್ಲೇ ಸೂರ್ಯಯಾನದತ್ತ ಇಸ್ರೋದ ಚಿತ್ತ ನೆಟ್ಟಿದ್ದು ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಇನ್ನು ಮಾನವ ಸಹಿತ ಗಗನಯಾನದ ಕೆಲಸ ಇನ್ನೂ ನಡೆಯುತ್ತಿದ್ದು 2025ಕ್ಕೆ ಅದೂ ಕೂಡ ಸಾಧ್ಯವಾಗುವ ನಿರೀಕ್ಷೆ ಗರಿಗೆದರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ಸೂರ್ಯನತ್ತ ಚಿತ್ತ; ಊಹಿಸಲೂ ಅಸಾಧ್ಯವಾದ ಸಾಹಸಕ್ಕೆ ಮುಂದಾದ ಇಸ್ರೋ..!

https://newsfirstlive.com/wp-content/uploads/2023/08/isro-5-1.jpg

Load More