newsfirstkannada.com

Chandrayaan-3: ಚಂದ್ರನ ಮೇಲೆ ವಿಕ್ರಂ, ಪ್ರಗ್ಯಾನ್​ ಏನು ಮಾಡುತ್ತಿವೆ..? ISROದಿಂದ ಬಿಗ್​ ಅಪ್​​ಡೇಟ್ಸ್​ ​

Share :

25-08-2023

    ಪಾಕಿಸ್ತಾನದಲ್ಲೂ ಚಂದ್ರಯಾನ-3 ಸಕ್ಸಸ್ ಆಗಿರುವುದೇ ಸುದ್ದಿ

    ಚಂದ್ರನ ಬಳಿಕ ಸೂರ್ಯ, ಶುಕ್ರನ ಅಧ್ಯಯನಕ್ಕೆ ಇಸ್ರೋ ರೆಡಿ

    ಚಂದ್ರನ ಚಟುವಟಿಕೆಗಳ ಆರಂಭದ ಬಗ್ಗೆ ಇಸ್ರೋ ಹೇಳಿದ್ಧೇನು?

ಚಂದ್ರಯಾನ 3ರ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಭಾರತ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಚಂದ್ರನ ಮಡಿಲು ಸೇರಿರುವ ವಿಕ್ರಮ್​ ಮತ್ತು ರೋವರ್​ ಅಸಲಿ ಆಟಕ್ಕೆ ಅಣಿಯಾಗಿವೆ. 14 ದಿನಗಳ ಲಕ್ಷಣ ರೇಖೆಯ ಒಳಗೆ ಸೋಮನ ಸತ್ಯಗಳನ್ನ ಜಗತ್ತಿನ ಮುಂದಿಡಲಿದ್ದು, ಈ ಬಗ್ಗೆ ಇಸ್ರೋ ಬಿಗ್​ ಅಪ್​ಡೇಟ್​ ನೀಡಿದೆ. ಇನ್ನು ನಾಳೆ ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ನಾವ್​ ಬರೋವರೆಗೂ ಮಾತ್ರ ಬೇರೆಯವರ ಹವಾ.. ನಾವ್​ ಬಂದ್​ ನಮ್ದೆ ಹವಾ. ಚಂದ್ರಲೋಕದಲ್ಲೀಗ ಭಾರತದ್ದೇ ಹವಾ. ಇಡೀ ಜಗತ್ತೇ ಹುಬ್ಬೇರುವಂತೆ ಚಂದ್ರಮನ ಮೇಲ್ಮೈ ಸ್ಪರ್ಶಿಸಿರೋ ನಮ್ಮ ಹೆಮ್ಮೆಯ ವಿಕ್ರಮ ಪರಾಕ್ರಮ ಮರೆದಿದ್ದಾನೆ. ಇಷ್ಟುದಿನ ಒಂದು ಲೆಕ್ಕ. ಇನ್ನು ಮುಂದೆ ಮತ್ತೊಂದು ಲೆಕ್ಕ ಎಂಬಂತೆ ಚಂದ್ರಯಾನ 3ರ ಮೂಲಕ ಶಶಿಯ ಮೇಲೆ ಹೊಸ ಶಕೆ ಸೃಷ್ಟಿಸಿರೋ ಇಸ್ರೋ ತಿಂಗಳನ ಅಂಗಳದಲ್ಲಿ ಅಸಲಿ ಆಟಕ್ಕೆ ಕೈ ಹಾಕಿದೆ.

S ಸೋಮಾನಥ್ ಮತ್ತು ಲ್ಯಾಂಡರ್ ವಿಕ್ರಮ

ಬಿಗ್​ ಅಪ್​ಡೇಟ್​ ನೀಡಿದ ಇಸ್ರೋ​

ವಿಕ್ರಮನ ಒಡಲಲ್ಲಿ ಅವಿತು ಚಂದ್ರನ ಕಾಣುವ ತವಕದಲ್ಲಿದ್ದ ಪ್ರಗ್ಯಾನ್‌ ರೋವರ್‌ ಸೇಫ್​ ಆಗಿ ಚಂದಮಾಮನ ಮೇಲೆ ಪರ್ಯಟನೆ ಶುರುಮಾಡಿದೆ. ಅಲ್ಲಿನ ಕಾರ್ಯ ಚಟುವಟಿಕೆ ಆರಂಭದ ಕುರಿತು ಇಸ್ರೋ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದೆ.

  • ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA
  • RAMBHA ಮತ್ತು ChaSTE ಆನ್ ಮಾಡಲಾಗಿದೆ
  • ರೋವರ್ ಮೊಬಿಲಿಟಿಗಳು ಸಹ ಕಾರ್ಯಾಚರಣೆ ಮಾಡ್ತಿವೆ
  • ಎಲ್ಲ ವ್ಯವಸ್ಥೆಗಳು ಸಾಮಾನ್ಯವಾಗಿದ್ದು, ಕೆಲಸ ಆರಂಭಿಸಿವೆ
  • ಶೇಪ್ ಪೇಲೋಡ್ ಭಾನುವಾರ ಆರಂಭವಾಗುತ್ತದೆ

ವಿಕ್ರಮ್​ ಲ್ಯಾಂಡಿಂಗ್​ನ ಮತ್ತೊಂದು ದೃಶ್ಯ ರಿಲೀಸ್​

ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದೆ. ವಿಕ್ರಮ ಲ್ಯಾಂಡರ್​ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆ ಹಿಡಿದ ರಣರೋಚಕ ಅಂತಿಮ ಕ್ಷಣಗಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ. ಸುಮಾರು 2.17 ನಿಮಿಷಗಳ ವಿಡಿಯೋ ಇದಾಗಿದ್ದು. ಲ್ಯಾಂಡಿಂಗ್​ಗೂ ಮುನ್ನ ವಿಕ್ರಮ್​ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಂದ್ರನ ಅಂಗಳವನ್ನು ಇದರಲ್ಲಿ ಕಾಣಬಹುದಾಗಿದೆ.

ನೆರೆಯ ಪಾಕಿಸ್ತಾನದಲ್ಲೂ ಚಂದ್ರಯಾನ-3 ಸಕ್ಸಸ್​ನದ್ದೇ ಸುದ್ದಿ

ಚಂದ್ರಯಾನ-3 ಯಶಸ್ಸಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಇಡೀ ವಿಶ್ವವೇ ಅಭಿನಂದಿಸಿದೆ. ಭಾರತದ ಮೇಲೆ ಸದಾ ಕತ್ತಿ ಮಸೆಯುವ ಪಾಕಿಸ್ತಾನದ ಪತ್ರಿಕೆ, ವೆಬ್​ಸೈಟ್​, ಟಿವಿ ಸ್ಕ್ರೀನ್​ಗಳು ಚಂದ್ರಯಾನ-3 ಯೋಜನೆಯ ಸಕ್ಸಸ್‌ ಸುದ್ದಿಯನ್ನ ಬಿತ್ತರಿಸಿ ಗಮನ ಸೆಳೆದಿವೆ. ಆಡಿಕೊಂಡವರ ಬಾಯಲ್ಲೇ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ’ ಎಂಬ ಶೀರ್ಷಿಕೆ ಕೊಟ್ಟು ಹೊಗಳಿಕೆಯ ಮೂಲಕ ಗಮನ ಸೆಳೆಯುತ್ತಿವೆ. ಪಾಕಿಸ್ತಾನದ ಯೂಟೂಬರ್​, ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದು, ಆತ ಪಾಕ್​ ಸರ್ಕಾರವನ್ನ ಅಣಕಿಸಿದ್ದಾರೆ.

ISRO ಮುಖ್ಯಸ್ಥ ಎಸ್ ಸೋಮನಾಥ್

ಆಗಸ್ಟ್​ 26 ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ

ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕಕ್ಕೆ ಮೇಲಿಂದ ಮೇಲೆ ಎಂಟ್ರಿ ಕೊಡ್ತಿದ್ದ ಪ್ರಧಾನಿ ಮೋದಿ, ಚುನಾವಣಾ ಮುಗಿದ ಬಳಿಕ ಕರ್ನಾಟಕದತ್ತ ಮುಖ ಮಾಡಿರಲಿಲ್ಲ. ಆದ್ರೀಗ, ಚಂದ್ರಯಾನ-3 ಯೋಜನೆಯಲ್ಲಿ ಇಸ್ರೋ ಐತಿಹಾಸಿಕ ಸಾಧನೆ ಮಾಡಿದ್ದು, ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬರುತ್ತಿದ್ದಾರೆ. ಶನಿವಾರ ಬೆಂಗಳೂರಿಗೆ ಬರಲಿರುವ ಪ್ರಧಾನಿ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿ, ಚಂದ್ರಯಾನ-3 ಸಕಸ್ಸ್​ಗೆ ಕಾರಣದ ಎಲ್ಲರನ್ನೂ ಅಭಿನಂದಿಸಲಿದ್ದಾರೆ. ಇನ್ನು ನಾಳೆ ಪ್ರಧಾನಿರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ರೋಡ್​ ಶೋ ಆಯೋಜನೆ ಮಾಡಲು ನಿರ್ಧರಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲೇ ಇಸ್ರೋ ಮಹತ್ವದ ಸಾಧನೆ ಮಾಡಿದ್ದು. ಇಡೀ ವಿಶ್ವವೇ ಭಾರತಕ್ಕೆ ಸಲಾಂ ಭಾಯ್​ ಎನ್ನುತ್ತಿದೆ. ಇನ್ನು ವಿವಿಧ ದೇಶಗಳು ಕೂಡ ಇಸ್ರೋ ಜೊತೆ ಕೈ ಜೋಡಿಸಲು ಉತ್ಸುಕವಾಗಿವೆ. ಚಂದ್ರನ ಬಳಿಕ ಸೂರ್ಯ, ಶುಕ್ರನ ಅಧ್ಯಯನಕ್ಕೂ ಇಸ್ರೋ ಸಜ್ಜಾಗುತ್ತಿದ್ದು, ನಮ್ಮ ಭಾರತದ ಹೆಮ್ಮೆಯ ವಿಜ್ಞಾನಿಗಳಿಗೆ ಜೈಹೋ ಹೇಳಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಚಂದ್ರನ ಮೇಲೆ ವಿಕ್ರಂ, ಪ್ರಗ್ಯಾನ್​ ಏನು ಮಾಡುತ್ತಿವೆ..? ISROದಿಂದ ಬಿಗ್​ ಅಪ್​​ಡೇಟ್ಸ್​ ​

https://newsfirstlive.com/wp-content/uploads/2023/08/Chandrayana-3-6.jpg

Load More